ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ

Posted By:
Subscribe to Oneindia Kannada
   ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ | Oneindia Kannada

   ನವದೆಹಲಿ, ಜನವರಿ 02: ಅಪನಗದೀಕರಣ ಜಾರಿಗೊಂಡ ಬಳಿಕ ಡಿಜಿಟಲ್ ಇಂಡಿಯಾ ಸೇವೆ, ನಗದು ರಹಿತ ವಹಿವಾಟಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ.

   ಡೆಬಿಟ್ ಕಾರ್ಡ್ ಬಳಕೆದಾರರು, ಸಣ್ಣವರ್ತಕರಿಗೆ ಹೇರಿಕೆ ಎನಿಸುತ್ತಿದ್ದ ಮರ್ಚಂಟ್ ಡಿಸ್ಕೌಂಟ್ ರೇಟ್(ಎಂಡಿಆರ್) ಮೇಲೆ ಸರ್ಕಾರ ಕಡಿವಾಣ ಹಾಕಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಂಡಾಗ ಒನ್ಇಂಡಿಯಾ ಕನ್ನಡದಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.

   ಸಣ್ಣ ವರ್ತಕರಿಗೆ ಆರ್ ಬಿಐ ಕೊಡುಗೆ: ಡೆಬಿಟ್ ಕಾರ್ಡ್ ಎಂಡಿಆರ್ ಕಡಿತ

   ಇದರಂತೆ, ಜನವರಿ 01, 2018ರಿಂದಲೇ ಹೊಸ ನಿಯಮ ಜಾರಿಗೆ ಬರಲಿದ್ದು, 2000 ರುಪಾಯಿ ತನಕದ ನಗದು ರಹಿತ ಕಾರ್ಡ್ ಬಳಕೆ ವಹಿವಾಟಿನ ಮೇಲೆ ಎಂಡಿಆರ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ವಿತ್ತ ಸಚಿವಾಲಯ ಸೋಮವಾರದಂದು ಪ್ರಕಟಿಸಿದೆ.

   No charges on debit card transactions up to Rs 2,000: Finance Ministry

   ಡೆಬಿಟ್ ಕಾರ್ಡ್, BHIM ಅಪ್ಲಿಕೇಷನ್ ಅಥವಾ ಯಾವುದೇ ಆಧಾರ್ ಆಧಾರಿತ ಪೇಮೆಂಟ್ ವ್ಯವಸ್ಥೆ ಮೂಲಕ 2,000 ರುಪಾಯಿ ವರೆಗಿನ ವಹಿವಾಟಿನ ಮೇಲೆ ಯಾವುದೇ ಶುಲ್ಕ ಇರುವುದಿಲ್ಲ .ಇದರಿಂದ ಸರ್ಕಾರದ ಬೊಕ್ಕಸಕ್ಕೆ 2,512 ಕೋಟಿ ರು ಹೊರೆ ಬೀಳಲಿದೆ.

   ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈ ಶುಲ್ಕ ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರವೇ ವರ್ತಕರ ರಿಯಾಯಿತಿ ದರವನ್ನು (ಎಂಡಿಆರ್‌) ಪಾವತಿ ಮಾಡಲಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Customers will not have to pay any transaction charges for payments through debit card, BHIM app and other payment made for up to Rs 2,000 from today onwards.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ