ವಿಲೀನದ ಬಳಿಕ ಯಾವ ಬ್ಯಾಂಕಿನ ಮಾರುಕಟ್ಟೆ ಮೌಲ್ಯ ಎಷ್ಟಾಗಲಿದೆ?

ನವದೆಹಲಿ, ಆಗಸ್ಟ್ 30: ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಿ ನೇತೃತ್ವದ ಬಿಜೆಪಿ ಸರ್ಕಾರ ಹತ್ತು ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರದಂದು ಸುದ್ದಿಗೋಷ್ಠಿ ನಡೆಸಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ ಬಗ್ಗೆ ವಿವರಣೆ ನೀಡಿದರು.

ದೇಶದ 10 ಪ್ರಮುಖ ಬ್ಯಾಂಕ್ ಗಳನ್ನು ವಿಲೀನ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದ್ದು, ನಾಲ್ಕು ಬ್ಯಾಂಕ್ ಗಳಾಗಲಿವೆ. ಈ ಪ್ರಮುಖ ವಿಲೀನಕ್ಕೆ ಚಾಲನೆ ನೀಡಲಾಗಿದೆ. ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ದೇಶದಲ್ಲಿ 12 ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮಾತ್ರ ಕಾರ್ಯನಿರ್ವಹಿಸಲಿವೆ. 2017ರಲ್ಲಿ 27 ಸಾರ್ವಜನಿಕ ವಲಯ ಬ್ಯಾಂಕ್ ಗಳಿದ್ದವು.

Nirmala Sitharaman reveals How new, merged banks will be recapitalised

1. ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನ. ವಿಲೀನದ ಬಳಿಕ ಎಸ್ಬಿಐ ನಂತರ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಂಸ್ಥೆ ಎನಿಸಲಿದೆ. ವಿಲೀನಗೊಂಡ ಬ್ಯಾಂಕ್ ಗಳ ವಹಿವಾಟು ಸುಮಾರು 17.95 ಕೋಟಿ ರು ಆಗಲಿದ್ದು, 11,437 ಬ್ರ್ಯಾಂಚ್ ಗಳನ್ನು ಹೊಂದಲಿದೆ.
2. ಕೆನರಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ವಿಲೀನ
3. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್ ಹಾಗೂ ಕಾರ್ಪೊರೇಷನ್ ಬ್ಯಾಂಕ್
4. ಇಂಡಿಯನ್ ಬ್ಯಾಂಕ್ ಹಾಗೂ ಅಲಹಾಬಾದ್ ಬ್ಯಾಂಕ್ ವಿಲೀನವಾಗಲಿವೆ.

ವಿಲೀನದ ಬಳಿಕದ ಪರಿಣಾಮ:
* ಆರ್ ಬಿಐ ಆರ್ಥಿಕ ಮಾರ್ಗದರ್ಶಿ ಸೂತ್ರ, ಬೇಸೆಲ್ ನಿಯಮಗಳ ಅಡಿಯಲ್ಲಿ ವಿಲೀನ ಪ್ರಕ್ರಿಯೆ ನಡೆಯಲಿದೆ.
* ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಾಗಿ 70,000 ಕೋಟಿ ರು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ತುಂಬಲು ಸರ್ಕಾರ ಮುಂದಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಬ್ಯಾಂಕುಗಳ ಮಾರುಕಟ್ಟೆ ಮೌಲ್ಯದ ಮರು ಯೋಜನೆಯ ಭಾಗವಾಗಿ ವಿಲೀನ ಪ್ರಕ್ರಿಯೆಯಾಗಲಿದೆ.

* ಇದರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇತೃತ್ವದ ವಿಲೀನಕ್ಕೆ 16,000 ಕೋಟಿ ರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ವಿಲೀನಕ್ಕೆ 11,700 ಕೋಟಿ ರು, ಕೆನರಾ ಬ್ಯಾಂಕ್ ನೇತೃತ್ವದ ವಿಲೀನಕ್ಕೆ 6,500 ಕೋಟಿ ರು ಹಾಗೂ ಇಂಡಿಯನ್ ಬ್ಯಾಂಕ್ ನೇತೃತ್ವದ ವಿಲೀನಕ್ಕೆ 2,500 ಕೋಟಿ ರು ಸಿಗಲಿದೆ.
* ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನದ ಬಳಿಕ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿಲ್ಲ, ಹೀಗಾಗಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಭೀತಿ ಬೇಡ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+