• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನಲ್ಲಿ ಎನ್‍ಐಐಟಿ ಟೆಕ್ನಾಲಾಜೀಸ್ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭ

By Mahesh
|

ಬೆಂಗಳೂರು, ಜುಲೈ 04: ಜಾಗತಿಕ ಮಟ್ಟದ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಎನ್‍ಐಐಟಿ ಟೆಕ್ನಾಲಾಜೀಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಇಂದು ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಆರಂಭಿಸಿದೆ.

ಡಿಜಿಟಲ್ ಪ್ರೊಸೆಸ್ ಟ್ರಾನ್ಸ್‍ಫರ್ಮೇಶನ್‍ಗೆ ಜಾಗತಿಕ ಮಟ್ಟದ ಪೂರೈಕೆದಾರ ಕೇಂದ್ರವಾಗಿ ಈ ಸಿಒಇ ಕೆಲಸ ಮಾಡಲಿದೆ. ಎಐ, ಮಶಿನ್ ಲರ್ನಿಂಗ್, ಎನ್‍ಎಲ್‍ಪಿ ಮತ್ತು ಇನ್ನಿತರೆ ಬ್ಲಾಕ್‍ಚೈನ್, ಎಲ್‍ಒಟಿಯಂಥ ತಂತ್ರಜ್ಞಾನಗಳನ್ನು ನಿರ್ವಹಣೆ ಮಾಡುವತ್ತ ಗಮನಹರಿಸಲಿದೆ.

ಈ ಸಿಒಇಯನ್ನು ಎನ್‍ಐಐಟಿ ಟೆಕ್ನಾಲಾಜೀಸ್‍ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಠಾಕೂರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪೆಗಾಸಿಸ್ಟಮ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಂಟ್ರಿಹೆಡ್ ಸುಮನ್ ರೆಡ್ಡಿ ಇದುನುರಿ ಸೇರಿದಂತೆ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

ಡಿಜಿಟಲ್ ಪ್ರೊಸೆಸ್ ಟ್ರಾನ್ಸ್ ಫಾರ್ಮೇಶನ್ ಎನ್‍ಐಐಟಿ ಟೆಕ್ನಾಲಾಜೀಶ್‍ನ ಎರಡು ವಿಶೇಷವಾದ ಅಂಗಸಂಸ್ಥೆಗಳ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತದೆ. ಇನ್‍ಸೆಸಂಟ್ ಮತ್ತು ರೂ ಲ್‍ಟೆಕ್. ಈ ಎರಡೂ ಅಂಗಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಸಂಸ್ಥೆಗಳಿಗೆ ಡಿಜಿಟಲ್ ಪ್ರೊಸೆಸ್ ಆಟೋಮೇಷನ್ ಗುರಿಗಳನ್ನು ತಲುಪಲು ನೆರವಾಗುತ್ತಿವೆ.

ಈ ಮೂಲಕ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಕ್ರಾಂತಿಕಾರಕ ಮತ್ತು ಅತ್ಯುತ್ತಮವಾದ ಅನುಭವವನ್ನು ನೀಡಲು ಸಹಕಾರಿಯಾಗುತ್ತಿವೆ. ಪೆಗಾ ಮತ್ತು ಅಪ್ಪಯನ್‍ನಂತಹ ತಂತ್ರಜ್ಞಾನ ವೇದಿಕೆಗಳ ಮೇಲೆ ಗಮನಹರಿಸಲಾಗುತ್ತಿದೆ.

ಎನ್‍ಐಐಟಿ ಟೆಕ್ನಾಲಾಜೀಸ್‍ನ ಡೇಟಾ ಅಂಡ್ ಆಟೋಮೇಶನ್‍ನ ಗ್ಲೋಬಲ್ ಹೆಡ್ ಮದನ್ ಮೋಹನ್ ಅವರು ಮಾತನಾಡಿ,'ಆಟೋಮೇಶನ್ ಮೂಲಕ ಡಿಜಿಟಲ್ ಪ್ರಕ್ರಿಯೆಯ ರೂಪಾಂತರವನ್ನು ಮಾಡುವುದರಲ್ಲಿ ನಮ್ಮ ದೃಢವಾದ ಪರಿಣಿತಿ ಸಾಬೀತುಪಡಿಸಿದೆ. ಇದಲ್ಲದೇ, ನಮ್ಮ ಡೊಮೇನ್‍ಗಳ ಅರಿವಿನ ಮೂಲಕ ನಾವು ಸಂಸ್ಥೆಗಳಿಗೆ ಭವಿಷ್ಯದ ಡಿಜಿಟಲ್ ವ್ಯವಹಾರವನ್ನು ರೂಪಾಂತರಗೊಳ್ಳಲು ನೆರವಾಗುತ್ತಿದ್ದೇವೆ. ಈ ಸಿಒಇ ವಿಶ್ವಮಟ್ಟದ ಮೂಲಸೌಕರ್ಯದೊಂದಿಗೆ ನಮ್ಮ ರಚನಾತ್ಮಕ ಪ್ರಗತಿಗೆ ನಾಂದಿ ಹಾಡಲಿದೆ.

ಅಲ್ಲದೇ, ಜಾಗತಿಕ ಮಟ್ಟದ ಗ್ರಾಹಕರಿಗೆ ಸೇವೆಗಳನ್ನು ನೀಡಲು ನಾವು ಸಮರ್ಥರಿದ್ದೇವೆ ಎಂಬುದನ್ನು ಸಾಕ್ಷೀಕರಿಸಲಿದೆ. ಈ ಮೂಲಕ ನಮ್ಮ ವೈವಿಧ್ಯಮಯ ಪ್ರತಿಭೆಗಳು ನಮ್ಮ ಸಹವರ್ತಿಗಳೊಂದಿಗೆ ಮತ್ತಷ್ಟು ಹತ್ತಿರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ'' ಎಂದು ತಿಳಿಸಿದರು.

ಬೆಂಗಳೂರಿನ ಐಟಿ ಕಾರಿಡಾರ್‍ನಲ್ಲಿ ಒಂದಾಗಿರುವ ಹೊಸೂರು ಮುಖ್ಯರಸ್ತೆಯಲ್ಲಿರುವ ರೂಪೇನ ಅಗ್ರಹಾರದಲ್ಲಿ 8500 ಚದರಡಿ ವಿಸ್ತೀರ್ಣದ ಜಾಗದಲ್ಲಿ ಈ ಸಿಒಇ ಆರಂಭವಾಗಿದೆ. ಈ ಕೇಂದ್ರವು ಐಟಿ ಮೂಲಸೌಕರ್ಯಗಳು, ಐಒಟಿ ಲ್ಯಾಬ್, ಡಿಜಿಟಲ್ ಆಧಾರಿತ ತರಬೇತಿ ಕೊಠಡಿಗಳು ಮತ್ತು ವಿತರಣಾ ಕೇಂದ್ರಗಳನ್ನು ಹೊಂದಿದೆ. ಇದಲ್ಲದೇ, ಡಿಜಿಟಲ್ ಪ್ರೊಸೆಸ್ ಟ್ರಾನ್ಸ್ ಫಾರ್ಮೇಶನ್ ಯೋಜನೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mid-tier software services firm NIIT Technologies has launched a Center of Excellence (CoE) in Bengaluru to focus on emerging technologies in Cognitive Business Process management areas such as Artificial Intelligence, Machine learning, along with Block Chain and Internet of Things.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more