ಭಾರತೀಯ ಷೇರುಪೇಟೆಯಲ್ಲಿ ಆಶಾಭಾವನೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ
ದೆಹಲಿ, ಜೂನ್ 16: ಸೋಮವಾರ ಕುಸಿತಕ್ಕೆ ಸಾಕ್ಷಿಯಾಗಿದ್ದ ಭಾರತದ ಷೇರುಪೇಟೆಯು ಮಂಗಳವಾರ ಆರಂಭದ ವಹಿವಾಟಿನಲ್ಲಿ ಉತ್ತಮ ಏರಿಕೆ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 730 ಪಾಯಿಂಟ್ಸ್ ಏರಿಕೆ ಕಂಡಿದೆ.
Recommended Video
ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ 2.19 ಪರ್ಸೆಂಟ್ ಜಿಗಿತಕಂಡಿದ್ದು, 214 ಪಾಯಿಂಟ್ಸ್ ಏರಿಕೆಗೊಂಡು 10,000 ಗಡಿ ದಾಟಿತ್ತು. ಬಿಎಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 2.2 ಪರ್ಸೆಂಟ್ ಏರಿಕೆಗೊಂಡು 730 ಪಾಯಿಂಟ್ಸ್ ಏರಿಕೆ ದಾಖಲಿಸಿ 33,843ಪಾಯಿಂಟ್ಸ್ ದಾಖಲಿಸಿದೆ.
ಹಿಂದಿನ ವಹಿವಾಟಿನಲ್ಲಿ 1 ಪರ್ಸೆಂಟ್‌ಗಿಂತಲೂ ಹೆಚ್ಚು ಕುಸಿದ ನಂತರ, ಭಾರತ ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರವೃತ್ತಿಗೆ ಎಚ್ಚರವಾಯಿತು. ಎಲ್ಲಾ ಮೂರು ಪ್ರಮುಖ ಯು.ಎಸ್. ಸ್ಟಾಕ್ ಸೂಚ್ಯಂಕಗಳು ನಷ್ಟವನ್ನು ಹಿಮ್ಮೆಟ್ಟಿಸಿದವು ಮತ್ತು ಗ್ರೀನ್ ಬಣ್ಣಕ್ಕೆ ತಿರುಗಿವೆ.

ಆಸ್ಟ್ರೇಲಿಯಾದ ಎಸ್ & ಪಿ / ಎಎಸ್ಎಕ್ಸ್ 200 ಫ್ಯೂಚರ್ಸ್ 2.46 ಪರ್ಸೆಂಟ್‌ರಷ್ಟು ಏರಿಕೆಯಾಗಿದ್ದರೆ, ಜಪಾನ್‌ನ ನಿಕ್ಕಿ 225 ಫ್ಯೂಚರ್ಸ್ 0.36 ಪರ್ಸೆಂಟ್, ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಫ್ಯೂಚರ್ಸ್ 1.65 ಪರ್ಸೆಂಟ್ ಏರಿಕೆಯಾಗಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.












Click it and Unblock the Notifications