ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ದಾಖಲೆ ಬರೆದ ನಿಫ್ಟಿ, ದಿನಾಂತ್ಯಕ್ಕೆ 10,153.10

|
Google Oneindia Kannada News

ಸೆಪ್ಟೆಂಬರ್ 18, 2017- ನಿಫ್ಟಿ 50ರ ಪಾಲಿಗೆ ಐತಿಹಾಸಿಕ ದಿನ. ಸೋಮವಾರ ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಸಾರ್ವಕಾಲಿಕ ದಾಖಲೆ ಬರೆದ ನಿಫ್ಟಿಗೆ ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪರಿಣಾಮ ಕೂಡ ಸಹಾಯಕವಾಯಿತು.

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ನಿಫ್ಟಿ, ಇಂಟರೆಸ್ಟಿಂಗ್ ಮಾಹಿತಿಗಳು!ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ನಿಫ್ಟಿ, ಇಂಟರೆಸ್ಟಿಂಗ್ ಮಾಹಿತಿಗಳು!

ಇದೀಗ ಮಂಗಳವಾರದಿಂದ ಆರಂಭವಾಗಲಿರುವ ಫೆಡರಲ್ ರಿಸರ್ವ್ ನೀತಿಯ ಸಭೆಯ ಮೇಲೆ ಮಾರುಕಟ್ಟೆ ಕಣ್ಣು ನೆಟ್ಟಿದೆ. ನಿಫ್ಟಿ 50 ಷೇರುಗಳ ಗುಚ್ಛವು 67.70 ಅಂಶದಷ್ಟು ಏರಿಕೆ ಕಂಡು, ಸಾರ್ವಕಾಲಿಕ ದಾಖಲೆಯಾದ 10,153.10 ಅಂಶಗಳನ್ನು ತಲುಪಿತು. ಇನ್ನು 151.15 ಅಂಶಗಳಷ್ಟು ಏರಿಕೆ ಕಂಡ ಸೆನ್ಸೆಕ್ಸ್ 32,423.76ರಲ್ಲಿ ದಿನಾಂತ್ಯಗೊಂಡಿತು.

Nifty 50 ends at record high on Monday

ಸಾರ್ವಕಾಲಿಕ ದಾಖಲೆಯಾದ 32,686.48 ಅಂಶದಿಂದ ಸೆನ್ಸೆಕ್ಸ್ 263 ಅಂಶಗಳಷ್ಟೇ ಹಿಂದಿದೆ. ಈ ರೀತಿ ಷೇರು ಮಾರುಕಟ್ಟೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ ಎನ್ನುವವರು ಇರುವಂತೆಯೇ ಕಂಪೆನಿಗಳ ಸೆಪ್ಟೆಂಬರ್ ತ್ರೈ ಮಾಸಿಕ ಫಲಿತಾಂಶ ಸರಿಯಾಗಿಲ್ಲ ಅಂದರೆ ದಿಢೀರ್ ಕುಸಿತ ಕಾಣಬಹುದು ಎನ್ನುವವರೂ ಇದ್ದಾರೆ.

ದೇಸಿ ಮಾರುಕಟ್ಟೆಯಲ್ಲಿ ಹಣದ ಹರಿವು ಚೆನ್ನಾಗಿದೆ, ವಿದೇಶಿ ಕರೆನ್ಸಿ ಎದುರು ಭಾರತದ ರುಪಾಯಿ ಮೌಲ್ಯ ಸ್ಥಿರವಾಗಿದೆ, ಜತೆಗೆ ಜಾಗತಿಕ ಮಟ್ಟದಲ್ಲೂ ಉತ್ತಮ ವಾತಾವರಣ ಇರುವುದರಿಂದ ಷೇರು ಮಾರುಕಟ್ಟೆ ಹೊಸ ಎತ್ತರಕ್ಕೆ ಏರಿದೆ.

ಮಾರುಕಟ್ಟೆಯಲ್ಲಿ 10 ಸಾವಿರ ಅಂಶಗಳ ಗಡಿ ದಾಟಿದ ನಿಫ್ಟಿಮಾರುಕಟ್ಟೆಯಲ್ಲಿ 10 ಸಾವಿರ ಅಂಶಗಳ ಗಡಿ ದಾಟಿದ ನಿಫ್ಟಿ

ಲಾರ್ಸನ್, ಹಿಂದೂಸ್ತಾನ್ ಯುನಿಲಿವರ್, ವೇದಾಂತ, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಆಟೋದಂಥ ಲಾರ್ಜ್ ಕ್ಯಾಪ್ ಷೇರುಗಳು ಉತ್ತಮ ಏರಿಕೆ ಕಂಡವು. ಭಾರತಿ ಇನ್ ಫ್ರಾಟೆಲ್ ಶೇ 4ರಷ್ಟು ಏರಿಕೆ ಕಂಡಿತು. ಎಲ್ಲ ವಲಯದ ಸೂಚ್ಯಂಕವೂ ಸೋಮವಾರ ಏರಿಕೆ ಕಂಡಿವೆ.

ಮಾರುಕಟ್ಟೆಯಲ್ಲಿ ವ್ಯವಹಾರ ಆರಂಭಿಸಿದ ಮೊದಲ ದಿನವೇ ಡಿಕ್ಸನ್ ಟೆಕ್ನಾಲಜೀಸ್ ಷೇರು ಶೇ 64ರಷ್ಟು ಏರಿಕೆ ಕಂಡು ರು.2,891.75 ಕೊನೆಗೊಂಡಿತು. ಆ ಷೇರನ್ನು ರು. 1766ಕ್ಕೆ ಸಾರ್ವಜನಿಕರಿಗೆ ವಿತರಿಸಲಾಗಿತ್ತು.

English summary
Nifty 50 ends at record high on Monday. At the time of market closing Nifty 50 stand at 10,153.10 points. All sectors are green. Bharti Infratel biggest gainer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X