ಹೊಸ ವಾಹನಗಳಿಗೆ ದೀರ್ಘಾವಧಿ ವಿಮೆ: ಸೆ. 1ರಿಂದ ಜಾರಿ

Recommended Video

      ಸುಪ್ರೀಂಕೋರ್ಟ್ ಮಹತ್ವದ ಆದೇಶ : ಸೆಪ್ಟೆಂಬರ್ 1 ರಿಂದ ವಾಹನಗಳಿಗೆ ಧೀರ್ಘಾವಧಿ ವಿಮೆ ಜಾರಿ | Oneindia Kannada

      ನವದೆಹಲಿ, ಆಗಸ್ಟ್ 30: ಹೊಸ ಕಾರು ಮತ್ತು ಬೈಕ್ ಖರೀದಿಸುವವರು ಇನ್ನು ಮುಂದೆ ವಿಮೆಗೆಂದು ಇನ್ನಷ್ಟು ಹಣ ತೆರಬೇಕಾಗಲಿದೆ. ಇದರಿಂದ ಹೊಸ ವಾಹನ ಖರೀದಿ ದುಬಾರಿ ಎನಿಸಲಿದೆ.

      ಆದರೆ, ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ.

      ಸುಪ್ರೀಂಕೋರ್ಟ್‌ ಆದೇಶದಂತೆ ಹೊಸ ಕಾರುಗಳಿಗೆ ಮೂರು ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ ಐದು ವರ್ಷ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಮಾಡಿಸುವ ನಿಯಮ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ.

      ಸುಪ್ರೀಂಕೋರ್ಟ್ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ನೇತೃತ್ವದ ರಸ್ತೆ ಸುರಕ್ಷತಾ ಸಮಿತಿಯು ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸುವಂತೆ ವರದಿ ನೀಡಿತ್ತು. ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಮಂದಿ ಮೃತರಾಗುತ್ತಿದ್ದಾರೆ ಎಂದು ಅದು ತಿಳಿಸಿತ್ತು.

      new vehicle buyers must pay up rs 24000 on insurance from 1st september

      ಅಪಘಾತದ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಸತ್ತರೆ ಆತನ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ. ಹೀಗಾಗಿ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

      ಪ್ರಸ್ತುತ ಒಂದರಿಂದ ಮೂರು ವರ್ಷದ ವಿಮೆ ಪದ್ಧತಿ ಚಾಲ್ತಿಯಲ್ಲಿತ್ತು. ಆದರೆ, ಶನಿವಾರದಿಂದ ವಾಹನ ಖರೀದಿ ಮಾಡುವವರು ಹೊಸ ನಿಯಮದಡಿ ವಿಮೆ ಮಾಡಿಸುವುದು ಕಡ್ಡಾಯ.

      ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮೋಟಾರ್ ಇನ್ಶೂರೆನ್ಸ್ ನಿರ್ವಹಿಸುತ್ತಿರುವ ವಿಮಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

      ಇದರಿಂದ ಹೊಸ ಕಾರು ಖರೀದಿಸುವವರು 24,000 ಮತ್ತು ಹೊಸ ಬೈಕ್ ಖರೀದಿಸುವವರು ಥರ್ಡ್ ಪಾರ್ಟಿ ವಿಮೆಗಾಗಿ 13,000 ರೂ. ಪಾವತಿ ಮಾಡಬೇಕಾಗಲಿದೆ.

      ಸೆಪ್ಟೆಂಬರ್ 1ರಿಂದ ವಿಮಾ ಸಂಸ್ಥೆಗಳು ಮೂರು ಅಥವಾ ಐದು ವರ್ಷದ ಮೂರನೇ ವ್ಯಕ್ತಿ ವಿಮೆ ಮತ್ತು ವಾಹನ ಹಾನಿ ವಿಮೆಯ ಸೌಲಭ್ಯದ ಆಫರ್ ನೀಡಲಿವೆ.

      ಸೆಪ್ಟೆಂಬರ್‌ನಿಂದ ಜಾರಿಗೆ ಬರುವಂತೆ ಹೊಸ ಕಾರುಗಳಿಗೆ ಮೂರು ವರ್ಷ ಹಾಗೂ ಹೊಸ ಬೈಕ್‌ ಖರೀದಿಗೆ ಐದು ವರ್ಷ ಥರ್ಡ್ ಪಾರ್ಟಿ ವಿಮೆ ಕಡ್ಡಾಯಗೊಳಿಸಿ ಜುಲೈ 20ರಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.

      ಈ ಎರಡೂ ಮಾದರಿಯ ವಾಹನಗಳಿಗೆ ಅನ್ವಯವಾಗುವಂತೆ ವಿಮೆ ಮಾಡಿಸುವಾಗಲೇ ಪ್ರೀಮಿಯಂಅನ್ನು ಸಂಗ್ರಹಿಸಬೇಕು. ಆದರೆ, ಅದನ್ನು ವರ್ಷದ ಕಂತಿಗೆ ಅನುಗುಣವಾಗಿ ಪರಿಗಣಿಸಬೇಕಾಗುತ್ತದೆ. ಮೊದಲ ವರ್ಷದ ಪ್ರೀಮಿಯಂಅನ್ನು ಆದಾಯ ಎಂದೂ ಉಳಿದ ಪ್ರೀಮಿಯಂಅನ್ನು ಪ್ರೀಮಿಯಂ ಡೆಪಾಸಿಟ್ ಅಥವಾ ಅಡ್ವಾನ್ಸ್ ಪ್ರೀಮಿಯಂ ಎಂದು ಪರಿಗಣಿಸುವಂತೆ ಐಆರ್‌ಡಿಎಐ ವಿಮಾ ಕಂಪೆನಿಗಳಿಗೆ ನಿರ್ದೇಶಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+