ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಂಡರ್, ರೈಲ್ವೆ ಸಮಯ, ಜಿಎಸ್‌ಟಿ.. ನ.1ರಿಂದ ಬದಲಾಗುವ ಹೊಸ ನಿಯಮಗಳು ತಿಳಿಯಿರಿ

|
Google Oneindia Kannada News

ನವೆಂಬರ್ ತಿಂಗಳು ಅನೇಕ ಅರ್ಥಿಕ ಬದಲಾವಣೆ ಪ್ರಾರಂಭವಾಗುತ್ತದೆ. ನವೆಂಬರ್ 1ರಿಂದ ನಿಯಮಗಳಲ್ಲಿ ಹಲವು ಪ್ರಮುಖ ಬದಲಾವಣೆಗಳು ಮೂಡಲಿವೆ. ಇದು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ, ಇಂದು ಬದಲಾಗುತ್ತಿರುವ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ನಾಳೆಯ ನಂತರ ನವೆಂಬರ್ ತಿಂಗಳು ಆರಂಭವಾಗಲಿದೆ. ನವೆಂಬರ್ 1 ರಿಂದ ಅನೇಕ ದೊಡ್ಡ ಬದಲಾವಣೆಗಳು (ನವೆಂಬರ್ 1ರಿಂದ ಹೊಸ ನಿಯಮಗಳು) ಸಂಭವಿಸಲಿವೆ. ಈ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಆದ್ದರಿಂದ, ಅವರ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಇದರಿಂದ ನಿಮಗೆ ಯಾವುದೇ ತೊಂದರೆ ಇಲ್ಲದಿದ್ದರೂ ಒಂದಷ್ಟು ನಿಯಮಗಳು ಬದಲಾವಣೆಯಾಗುವ ಸಂಭವವಿದೆ.

ಹೌದು, ನಾಳೆ ನವೆಂಬರ್ 1ರಿಂದ ದೆಹಲಿಯಲ್ಲಿ ವಿದ್ಯುತ್ ಸಬ್ಸಿಡಿಯ ಹೊಸ ನಿಯಮ ಜಾರಿಗೆ ಬರಲಿದೆ. ಈ ನಿಯಮದ ಪ್ರಕಾರ ವಿದ್ಯುತ್ ಮೇಲೆ ಸಬ್ಸಿಡಿ ಪಡೆಯಲು ನೋಂದಣಿ ಮಾಡದೇ ಇರುವವರು ನವೆಂಬರ್ 1ರಿಂದ ಈ ಸಬ್ಸಿಡಿ ಪಡೆಯುವುದನ್ನು ನಿಲ್ಲಿಸಲಿದ್ದಾರೆ. ಒಂದು ತಿಂಗಳಲ್ಲಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಲು ದೆಹಲಿಯ ನಿವಾಸಿಗಳು ನೋಂದಾಯಿಸಿಕೊಳ್ಳುವುದು ಅವಶ್ಯಕ. ನೋಂದಣಿಯನ್ನು ಮಾಡಲು ಸಾಧ್ಯವಾಗದವರಿಗೆ. ಅಕ್ಟೋಬರ್ 31ರೊಳಗೆ ನೋಂದಣಿ ಮಾಡಿದ ನಂತರವೇ ಅವರಿಗೆ ಸಹಾಯಧನ ನೀಡಲಾಗುತ್ತಿದೆ.

 ವಿಮಾ ಗ್ರಾಹಕರಿಗೆ ಕೆವೈಸಿ ಕಡ್ಡಾಯ

ವಿಮಾ ಗ್ರಾಹಕರಿಗೆ ಕೆವೈಸಿ ಕಡ್ಡಾಯ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ನವೆಂಬರ್ 1ರಿಂದ ಕೆವೈಸಿ ಹಾಗೂ ಸ್ವ-ವಿವರಗಳನ್ನು ಒದಗಿಸುವುದನ್ನು ವಿಮಾದಾರರು ಕಡ್ಡಾಯಗೊಳಿಸಬಹುದು. ಈಗಿರುವ ವಿಮಾ ಪಾಲಿಸಿಯನ್ನು ಖರೀದಿಸುವಾಗ ಕೆವೈಸಿ ವಿವರಗಳನ್ನು ಒದಗಿಸುವುದು ಸ್ವಯಂಪ್ರೇರಿತವಾಗಿದೆ ಮತ್ತು ನವೆಂಬರ್ 1ರಿಂದ ಕಡ್ಡಾಯವಾಗಿ ಮಾಡುವ ಸಾಧ್ಯತೆಯಿದೆ. ಕೆವೈಸಿ ಸಂಬಂಧಿತ ನಿಯಮಗಳನ್ನು ಹೊಸ ಮತ್ತು ಹಳೆಯ ಗ್ರಾಹಕರಿಗೂ ಕಡ್ಡಾಯಗೊಳಿಸಬಹುದು. ಇದರ ಅಡಿಯಲ್ಲಿ ನೀವು ವಿಮಾ ಕ್ಲೈಮ್ ಮಾಡುವಾಗ ನೀವು ಕೆವೈಸಿ ವಿವರ-ದಾಖಲೆಗಳನ್ನು ಪ್ರಸ್ತುತಪಡಿಸದಿದ್ದರೆ, ನಿಮ್ಮ ಕ್ಲೈಮ್ ವಿನಂತಿಯ ಅರ್ಜಿಗಳು ತಿರಸ್ಕರಿಸಬಹುದು.

 ಗ್ಯಾಸ್ ಸಿಲಿಂಡರ್ ಬೆಲೆ?

ಗ್ಯಾಸ್ ಸಿಲಿಂಡರ್ ಬೆಲೆ?

ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ 1ರಂದು ಪರಿಷ್ಕರಿಸಲಾಗುತ್ತಿದೆ. ಏಕೆಂದರೆ ಅವುಗಳನ್ನು ಪ್ರತಿ ತಿಂಗಳ 1ರಂದು ಪರಿಶೀಲಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅನಿಲದ ದರ ಮತ್ತೊಮ್ಮೆ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಅಲ್ಲದೆ, ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿರಬಹುದು ಅಂದರೆ ಪ್ರಸ್ತುತ ದರವನ್ನು ಬದಲಾವಣೆ ಮಾಡದಿರಬಹುದು. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಯಾಸ್ ಬೆಲೆಯಲ್ಲಿ ಜಿಗಿತ ಕಂಡುಬಂದಿದೆ. ಹಾಗಾಗಿ ನವೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಾಗಬಹುದು ಎಂದು ವರದಿಯಾಗಿದೆ. ಇಂಡೇನ್‌ನ 19 ಕೆಜಿ ವಾಣಿಜ್ಯ ಸಿಲಿಂಡರ್ ಅಕ್ಟೋಬರ್ 1, 2022ರಿಂದ ದೆಹಲಿಯಲ್ಲಿ ರೂ 25.5 ರಷ್ಟು ಕಡಿಮೆಯಾಗಿದೆ. ಆದರೆ ನಾಳೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವ ರೀತಿ ವ್ಯತ್ಯಾಸಗಳು ಕಂಡುಬರಲಿವೆ ಕಾದು ನೋಡಬೃಕಿದೆ.

 ಒಟಿಪಿ ನೀಡಿದ ನಂತರವೇ ಎಲ್‌ಪಿಜಿ ಸಿಲಿಂಡರ್ ವಿತರಣೆ?

ಒಟಿಪಿ ನೀಡಿದ ನಂತರವೇ ಎಲ್‌ಪಿಜಿ ಸಿಲಿಂಡರ್ ವಿತರಣೆ?

ಎಲ್‌ಪಿಜಿಯ ಸಿಲಿಂಡರ್ ನೀವು ಬುಕ್ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಸಂಖ್ಯೆ ಬರುತ್ತದೆ. ನೀವು ಗ್ಯಾಸ್ ವಿತರಣೆಯ ಸಮಯದಲ್ಲಿ OTP ಸಂಖ್ಯೆಯನ್ನು ಹೇಳಬೇಕಾಗುತ್ತದೆ. ಅಂದಾಗ ಮಾತ್ರ ನೀವು ಗ್ಯಾಸ್‌ ಸಿಲಿಂಡರ್‍‌ ಪಡೆದುಕೊಳ್ಳಬಹುದು ಈ ನಿಯಮಗಳು ಬದಲಾವಣೆಯ ಸಾಧ್ಯೆತೆಯಿದೆ.

 ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ ಸಂಭವನೀಯ

ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ ಸಂಭವನೀಯ

ನವೆಂಬರ್ 1ರಿಂದ ಭಾರತೀಯ ರೈಲ್ವೆಯ ಹೊಸ ವೇಳಾಪಟ್ಟಿಯ ಪ್ರಕಾರ, ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ಆದ್ದರಿಂದ, ನೀವು ನವೆಂಬರ್ 1ರಂದು ಅಥವಾ ನಂತರ ಪ್ರಯಾಣಿಸುತ್ತಿದ್ದರೆ ರೈಲು ಸಮಯವು ರೈಲು ಹೊರಡುವ ಮೊದಲು ರೈಲಿನ ವೇಳಾಪಟ್ಟಿಯನ್ನು ಖಚಿತ ಪಡಿಸಿಕೊಳ್ಳಬೇಕು. ಈ ಮೊದಲು ಈ ಬದಲಾವಣೆಗಳನ್ನು ಅಕ್ಟೋಬರ್ 1ರಿಂದ ಜಾರಿಗೆ ತರಬೇಕಿತ್ತು, ಆದರೆ ಈಗ ಅವು ನವೆಂಬರ್ 1ರಿಂದ ಅನ್ವಯವಾಗುತ್ತವೆ. ದೇಶದಲ್ಲಿ ಚಾಲನೆಯಲ್ಲಿರುವ ರಾಜಧಾನಿಗಳ ಮೊಲಕ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯ ಸಮಯವನ್ನು ಸಹ ಬದಲಾಯಿಸಲಾಗುತ್ತದೆ.

 ಜಿಎಸ್‌ಟಿ ರಿಟರ್ನ್‌ಗಾಗಿ 4-ಅಂಕಿಯ ಕೋಡ್

ಜಿಎಸ್‌ಟಿ ರಿಟರ್ನ್‌ಗಾಗಿ 4-ಅಂಕಿಯ ಕೋಡ್

ಜಿಎಸ್‌ಟಿ ರಿಟರ್ನ್ಸ್‌ನ ನಿಯಮಗಳಿಗೆ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈಗ 5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ತೆರಿಗೆದಾರರು ಜಿಎಸ್‌ಟಿ ರಿಟರ್ನ್‌ನಲ್ಲಿ 4 ಅಂಕಿಗಳ ಎಚ್‌ಎಸ್‌ಎನ್ ಕೋಡ್ ಬರೆಯುವುದು ಕಡ್ಡಾಯವಾಗಿದೆ. ಮೊದಲು, ಎರಡು ಅಂಕಿಗಳ ಎಚ್‌ಎಸ್‌ಎನ್‌ ಕೋಡ್ ನಮೂದಿಸಬೇಕಾಗಿತ್ತು.

ಈ ಮೊದಲು 5 ಕೋಟಿಗೂ ಹೆಚ್ಚು ವಹಿವಾಟು ಹೊಂದಿರುವ ತೆರಿಗೆದಾರರು ಏಪ್ರಿಲ್ 1, 2022ರಿಂದ ನಾಲ್ಕು-ಅಂಕಿಯ ಕೋಡ್ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ನಂತರ ಆಗಸ್ಟ್ 1, 2022ರಿಂದ 6-ಅಂಕಿಯ ಕೋಡ್ ನಮೂದಿಸಬೇಕು.

English summary
New Rules From November 1: 5 rules that will change from November 1 and directly impact you Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X