ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 5 ಮತ್ತು 6ರಂದು ನೆಟ್‌ಫ್ಲಿಕ್ಸ್ ಉಚಿತವಾಗಿ ಬಳಸಬಹುದು!

|
Google Oneindia Kannada News

ನವದೆಹಲಿ, ಡಿಸೆಂಬರ್ 05: ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ ಡಿಸೆಂಬರ್ 5 ಮತ್ತು 6ರಂದು ಬಳಕೆದಾರರಿಗೆ ಉಚಿತ ಸೇವೆಗಳನ್ನು ಒದಗಿಸುತ್ತದೆ. ಈ ಮೂಲಕ ಇಂದು ರಾತ್ರಿ 12 ಗಂಟೆಯಿಂದ ನೆಟ್‌ಫ್ಲಿಕ್ಸ್‌ನ ಚಂದಾದಾರಿಕೆ ಎರಡು ದಿನಗಳ ಎಲ್ಲರಿಗೂ ಉಚಿತವಾಗಿರುತ್ತದೆ.

ಭಾರತದಲ್ಲಿ ವಾರಾಂತ್ಯದ ಸ್ಟ್ರೀಮ್‌ಫೆಸ್ಟ್ ಅಡಿಯಲ್ಲಿ ಈ ಸೇವೆಯನ್ನು ನೀಡಲಾಗಿದ್ದು, ಟಿವಿ, ಪಿಸಿ, ಲ್ಯಾಪ್‌ಟಾಪ್ ಅಥವಾ ಮೊಬೈಲ್‌ ಮೂಲಕ ಚಲನಚಿತ್ರಗಳು, ಸೀರೀಸ್ ಮತ್ತು ಡಾಕ್ಯುಮೆಂಟ್ರಿಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದಾಗಿದೆ.

 ಏರ್‌ಟೆಲ್‌ನಿಂದ ಉಚಿತವಾಗಿ 11GB ಡೇಟಾ ಪಡೆಯುವುದು ಹೇಗೆ? ಏರ್‌ಟೆಲ್‌ನಿಂದ ಉಚಿತವಾಗಿ 11GB ಡೇಟಾ ಪಡೆಯುವುದು ಹೇಗೆ?

ಆದರೆ ಒಂದು ನೆಟ್‌ಫ್ಲಿಕ್ಸ್ ID ಯನ್ನು ಅನೇಕ ಜನರು ಬಳಸಬಹುದಾದರೂ, ಸ್ಟ್ರೀಮ್‌ಫೆಸ್ಟ್‌ಗಾಗಿ ಸೈನ್ ಅಪ್ ಮಾಡುವವರು ಕೇವಲ ಒಂದು ಮೊಬೈಲ್‌ನಲ್ಲಿ ಮಾತ್ರ ಸೌಲಭ್ಯ ಪಡೆಯುತ್ತಾರೆ. ಆದ್ದರಿಂದಾಗಿ ಒಬ್ಬರ ಐಡಿಯನ್ನು ಬೇರೆಯವರು ಲಾಗಿನ್ ಆಗಿ ಬಳಸಲಾಗುವುದಿಲ್ಲ ಎಂದು ನೆಟ್‌ಫ್ಲಿಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

Netflix Will Be Free For Every Indian Users From December 5 And 6: Here Is How To Access It

ಇನ್ನು ನೆಟ್‌ಫ್ಲಿಕ್ಸ್‌ ಸ್ಟ್ರೀಮ್‌ಫೆಸ್ಟ್ ಪ್ರವೇಶಿಸಲು ಬಳಕೆದಾರರು ಬ್ಯಾಂಕ್ ವಿವರಗಳು, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ ನಮೂದಿಸಬೇಕಾಗಿಲ್ಲ. ತಮ್ಮ ಹೆಸರು, ಇಮೇಲ್ ಅಥವಾ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಸೈನ್ ಅಪ್ ಮಾಡಬೇಕಾಗುತ್ತದೆ.

ನೆಟ್‌ಫ್ಲಿಕ್ಸ್‌ ಉಚಿತವಾಗಿ ಬಳಸುವುದು ಹೇಗೆ?

ನೆಟ್‌ಫ್ಲಿಕ್ಸ್ ಉಚಿತವಾಗಿ ಬಳಕೆಗೆ ಮುನ್ನ ನೀವು ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು ಅಥವಾ ನೆಟ್‌ಫ್ಲಿಕ್ಸ್.ಕಾಮ್ / ಸ್ಟ್ರೀಮ್‌ಫೆಸ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ನೀವು ಸೈನ್ ಅಪ್ ಮಾಡಬೇಕು. ಇಲ್ಲಿ ಫೋನ್ ಸಂಖ್ಯೆ, ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು. ಖಾತೆಯನ್ನು ರಚಿಸಿದ ನಂತರ, ನೀವು ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ 5 ಮತ್ತು 6 ಡಿಸೆಂಬರ್‌ನಲ್ಲಿ ಉಚಿತ ನೆಟ್‌ಫ್ಲಿಕ್ಸ್ ವೀಕ್ಷಿಸಬಹುದು. ಸ್ಟ್ರೀಮ್‌ಫೆಸ್ಟ್ ಮೂಲಕ ನೆಟ್‌ಫ್ಲಿಕ್ಸ್‌ ಹೊಸ ಗ್ರಾಹಕರನ್ನು ಆಕರ್ಷಿಸಲು ಈ ಯೋಜನೆ ಹಮ್ಮಿಕೊಂಡಿದೆ.

English summary
Everyone in India will have free access to Netflix for two days on December 5 and 6. The streaming platform is hosting StreamFest, a weekend of free Netflix where anyone in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X