ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿವೀರರ ನೇಮಕಾತಿ ಭಾರತೀಯ ನೌಕಾಪಡೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

|
Google Oneindia Kannada News

ನವದೆಹಲಿ, ಜುಲೈ 15: ಭಾರತೀಯ ನೌಕಾಪಡೆಯಲ್ಲಿ 'ಅಗ್ನಿಪಥ್' ಯೋಜನೆಯಲ್ಲಿ ಅಗ್ನಿವೀರರ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 2800 ನೌಕಾಪಡೆ ಅಗ್ನಿವೀರರ ಹುದ್ದೆಗಳಿಗೆ ಜುಲೈ 15ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಜುಲೈ 22ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ joinindiannavy.gov.in. ಮೂಲಕ ಅರ್ಜಿ ಸಲ್ಲಿಸಬಹುದು.

ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು: ವಾಕ್ ಇನ್ ಸಂದರ್ಶನಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು: ವಾಕ್ ಇನ್ ಸಂದರ್ಶನ

ಹಿರಿಯ ಮಾಧ್ಯಮಿಕ ಅಗ್ನಿವೀರ್ (SSR) ನವೆಂಬರ್ 2022ನೇ ಬ್ಯಾಚ್‌ಗಾಗಿ ನೇಮಕಾತಿ ನಡೆಯುತ್ತಿದೆ. ಒಟ್ಟು 2800 ಹುದ್ದೆಗಳು ಖಾಲಿಯಿದ್ದು ಮಹಿಳೆಯರಿಗೆ 560 ಹುದ್ದೆಗಳನ್ನು ಮೀಸಲಿಡಲಾಗಿದೆ. ಇನ್ನು ಆಯ್ಕೆಯಾದ ಅಗ್ನಿವೀರರಿಗೆ ಪ್ರತಿ ತಿಂಗಳು 30000 ರುಪಾಯಿ ವೇತನ ದೊರೆಯಲಿದೆ.

Navy Recruitment 2022 For Agniveer Posts: Application process begins

ಅರ್ಹತಾ ಮಾನದಂಡಗಳು; ಭಾರತೀಯ ನೌಕಾಪಡೆಯ ನೇಮಕಾತಿ 2022 ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಗಣಿತ ಮತ್ತು ಭೌತಶಾಸ್ತ್ರದೊಂದಿಗೆ 10+2 ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು. ಎಂಎಚ್‌ಆರ್ ಡಿ (MHRD), ಭಾರತದ ಸರ್ಕಾರದಿಂದ ಗುರುತಿಸಲ್ಪಟ್ಟ ಶಾಲಾ ಶಿಕ್ಷಣ ಮಂಡಳಿಗಳಿಂದ ರಸಾಯನಶಾಸ್ತ್ರ / ಜೀವಶಾಸ್ತ್ರ / ಕಂಪ್ಯೂಟರ್ ಸೈನ್ಸ್ ಈ ವಿಷಯಗಳಲ್ಲಿ ಕನಿಷ್ಠ ಒಂದಾದರೂ ವಿಷಯವನ್ನು ಅಧ್ಯಯನ ಮಾಡಿರಬೇಕು.

ಖಾದಿ ಮತ್ತು ಗ್ರಾಮೋದ್ಯೋಗದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಖಾದಿ ಮತ್ತು ಗ್ರಾಮೋದ್ಯೋಗದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ವಯಸ್ಸಿನ ಮಿತಿ: 01 ನವೆಂಬರ್ 1999 ರಿಂದ 30 ಏಪ್ರಿಲ್ 2005 ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಸಕ್ತ ಅಭ್ಯರ್ಥಿಗಳು joinindiannavy.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜುಲೈ 15, 2022 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಜುಲೈ 22, 2022ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.

ಆಯ್ಕೆ ಪ್ರಕ್ರಿಯೆ: ಆಯ್ಕೆಯು ಶಾರ್ಟ್‌ಲಿಸ್ಟಿಂಗ್, ಲಿಖಿತ ಪರೀಕ್ಷೆ, ಅರ್ಹತಾ ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ.

English summary
Indian Navy has started the application process for 2800 posts Agniveer Recruitment 2022 today, July 15, 2022. Interested candidates can apply through the official website, joinindiannavy.gov.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X