ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಉದ್ಯಮಗಳಿಗೆ ದೀಪಾವಳಿ ಗಿಫ್ಟ್!: 59 ನಿಮಿಷದಲ್ಲಿ ಸಿಗಲಿದೆ ಸಾಲ

|
Google Oneindia Kannada News

Recommended Video

ಸಣ್ಣ ಉದ್ಯಮಿಗಳಿಗೆ 59 ನಿಮಿಷಗಳ ಸಾಲ ಯೋಜನೆಗೆ ಚಾಲನೆ ಕೊಟ್ಟ ಮೋದಿ | Oneindia Kannada

ನವದೆಹಲಿ, ನವೆಂಬರ್ 2: ಸಣ್ಣ ಉದ್ಯಮಿಗಳಿಗೆ ನೆರವು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 59 ನಿಮಿಷಗಳ ಸಾಲ ಯೋಜನೆಗೆ ಚಾಲನೆ ನೀಡಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಸಾಹಸೋದ್ಯಮಿಗಳಿಗೆ ಉತ್ತೇಜನ ಮತ್ತು ಸಹಾಯ ಹಸ್ತ ಚಾಚುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಸಣ್ಣ ಉದ್ಯಮಿಗಳಿಗೆ (ಎಂಎಸ್ಎಂಇ) ಇತರೆ ರೀತಿಯ ನೆರವುಗಳನ್ನು ನೀಡುವ ಕಾರ್ಯಕ್ರಮಕ್ಕೂ ಅವರು ಚಾಲನೆ ನೀಡಿದರು.

ಸಾಲಮನ್ನಾ ದೃಢೀಕೃತ ಮಾಹಿತಿಗೆ ಬ್ಯಾಂಕ್‌ಗಳಿಗೆ ಗಡುವು ನೀಡಿದ ಸರ್ಕಾರಸಾಲಮನ್ನಾ ದೃಢೀಕೃತ ಮಾಹಿತಿಗೆ ಬ್ಯಾಂಕ್‌ಗಳಿಗೆ ಗಡುವು ನೀಡಿದ ಸರ್ಕಾರ

ಸಣ್ಣ ಉದ್ಯಮ ವಲಯಕ್ಕೆ ನೆರವು ನೀಡುವ 12 ಹೊಸ ನಿರ್ಧಾರಗಳ ಭಾಗವಾಗಿರುವ ಈ ಯೋಜನೆಗಳನ್ನು ಎಂಎಸ್ಎಂಇಗೆ ನೀಡುತ್ತಿರುವ ದೀಪಾವಳಿಯ ಕೊಡುಗೆ ಎಂದು ಮೋದಿ ವಿಶ್ಲೇಷಿಸಿದರು.

narendra modi launched 59 minute loan to msme

ಎಂಎಸ್ಎಂಇ ಉದ್ಯಮಿಗಳು ತಮ್ಮ ಉದ್ಯಮದಲ್ಲಿ ಹೂಡಿಕೆ ಮಾಡಲು ಕೇವಲ 59 ನಿಮಿಷದ ಒಳಗೆ 1 ಕೋಟಿ ರೂ. ಸಾಲ ಸೌಲಭ್ಯ ಪಡೆಯಲು ನೆರವು ನೀಡುವಂತಹ ಈ ಮಹತ್ವಾಕಾಂಕ್ಷಿ ಯೋಜನೆ ದೇಶದ 100 ಪ್ರದೇಶಗಳಲ್ಲಿ ಚಾಲನೆ ಪಡೆದುಕೊಂಡಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಈ ಎಲ್ಲ ಪ್ರದೇಶಗಳು ರಾಜಧಾನಿ ನವದೆಹಲಿಯಲ್ಲಿರುವ ಕೇಂದ್ರ ವ್ಯವಸ್ಥೆಯೊಂದಿಗೆ ನಂಟು ಹೊಂದಿರಲಿವೆ. ಈ ಯೋಜನೆ 100 ದಿನಗಳವರೆಗೆ ಚಾಲ್ತಿಯಲ್ಲಿರಲಿದ್ದು, ಏಪ್ರಿಲ್-ಮೇನಲ್ಲಿ ಸಾರ್ವತ್ರಿಕ ಚುನಾವಣೆ ಬರಲಿರುವುದರಿಂದ ಅದಕ್ಕೂ ಮುನ್ನವೇ ಅಂತ್ಯಗೊಳ್ಳಲಿದೆ.

ಮೊದಲ ಹಂತದಲ್ಲಿ ಸರ್ಕಾರವು ದೇಶದೆಲ್ಲೆಡೆ 78 ಎಂಎಸ್‌ಎಂಇ ಕ್ಲಸ್ಟರ್‌ಗಳನ್ನು ತಲುಪುವ ಉದ್ದೇಶ ಹೊಂದಿದೆ. ಎಂಎಸ್ಎಂಇಗಳಿಗೆ ಸಾಲ ಒದಗಿಸಲು ಈ ಸ್ಥಳಗಳಲ್ಲಿ ಬ್ಯಾಂಕ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಇದಕ್ಕಾಗಿ ಪಿಎಸ್‌ಬಿ ಲೋನ್ಸ್ ಇನ್ 59 ಮಿನಿಟ್ಸ್ ಡಾಟ್ ಕಾಂ ಎಂಬ ಹೊಸ ವೆಬ್‌ಸೈಟ್ ಆರಂಭಿಸಲಾಗಿದೆ.

ಸ್ವಿಸ್ ಬ್ಯಾಂಕ್ ಗೆ ಮಲ್ಯ 198 ಕೋಟಿ ಸಾಲ ಬಾಕಿ, ಬಂಗಲೆ ಖಾಲಿಗೆ ಮನವಿಸ್ವಿಸ್ ಬ್ಯಾಂಕ್ ಗೆ ಮಲ್ಯ 198 ಕೋಟಿ ಸಾಲ ಬಾಕಿ, ಬಂಗಲೆ ಖಾಲಿಗೆ ಮನವಿ

ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು ಮತ್ತು ಸಾರ್ವಜನಿಕ ವಲಯದ ಐದು ಬ್ಯಾಂಕುಗಳಾದ- ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ವಿಜಯಾ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್‌ಗಳ ಅನುಮೋದನೆ ಪಡೆದುಕೊಳ್ಳಲು ಈ ವೆಬ್‌ಪೋರ್ಟಲ್ ತೆರೆಯಲಾಗಿದೆ.

English summary
Prime Minister Narendra Modi has launched 59 minute loan programme as a part of the centre's MSMEs support outreach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X