• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಟ್ರೋಗೆ 3 ವರ್ಷ, ರಿಯಲ್ ಎಸ್ಟೇಟ್ ಗೆ ಹರುಷ

By Rajendra
|

ಬೆಂಗಳೂರು, ಅ.30: ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು ಯೋಜನೆಯಿಂದ ರೈಲು ನಿಲ್ದಾಣಗಳ ಸುತ್ತಮುತ್ತಲಿನ 2 ರಿಂದ 3 ಕಿಲೋಮೀಟರ್ ದೂರದವರೆಗೆ ರಿಯಲ್ ಎಸ್ಟೇಟ್ ಉದ್ಯಮ ಶೇ. 3.2 ರಿಂದ 4 ರವರೆಗೆ ವೃದ್ಧಿಯಾಗಿದೆ. ಮೆಟ್ರೋ ರೈಲು ಮಾರ್ಗದುದ್ದಕ್ಕೂ ವಾಣಿಜ್ಯ ಮತ್ತು ರಿಟೇಲ್ ರಿಯಲ್ ಎಸ್ಟೇಟ್ ಗೆ ಭಾರೀ ಬೇಡಿಕೆ ಬಂದಿದೆ ಎಂದು ಕ್ರೆಡಾಯ್ ಬೆಂಗಳೂರು ಘಟಕದ ಕಾರ್ಯದರ್ಶಿ ಸುರೇಶ್ ಹರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಬೈಯ್ಯಪ್ಪನಹಳ್ಳಿಯಿಂದ ಎಂಜಿ ರಸ್ತೆವರೆಗಿನ ಮಾರ್ಗದಲ್ಲಿ ರಿಯಲ್ ಎಸ್ಟೇಟ್ ಉತ್ತಮವಾಗಿ ನಡೆಯುತ್ತಿದೆ. ಈ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳ ಕಾಮಗಾರಿ ಪೂರ್ಣಗೊಂಡರೆ ಈ ಮಾರ್ಗದಲ್ಲಿ ಆರ್ಥಿಕ ಬೆಳವಣಿಗೆ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಸುರೇಶ್ ಹರಿ ತಿಳಿಸಿದ್ದಾರೆ.

ಚೆನ್ನೈನಲ್ಲಿ ಎಲಿವೇಟೆಡ್ ಎಂಆರ್ ಟಿಎಸ್ ನಿರ್ಮಾಣದಿಂದಾಗಿ ಅಲ್ಲಿ ಆರ್ಥಿಕ ಮತ್ತು ಮೂಲಭೂತ ಸೌಲಭ್ಯ ಕ್ಷೇತ್ರಗಳು ಭಾರೀ ಪ್ರಗತಿ ಕಂಡವು. ಹೀಗಾಗಿ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ ರಿಯಲ್ ಎಸ್ಟೇಟ್ ಕ್ಷೇತ್ರ ಮತ್ತಷ್ಟು ಪ್ರಕಾಶಿಸಲಿದೆ ಎಂದೂ ಹೇಳಿದ್ದಾರೆ.

ವಸತಿ ಸಮುಚ್ಚಯಕ್ಕೆ ಭಾರೀ ಬೇಡಿಕೆ : ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು ನಿಲ್ದಾಣಗಳ ಸುತ್ತಮುತ್ತಲಿನ 2 ರಿಂದ 3 ಕಿಲೋಮೀಟರ್ ದೂರದವರೆಗೆ ವಸತಿ ಸಮುಚ್ಚಯಗಳಿಗೆ ಭಾರೀ ಬೇಡಿಕೆ ಬಂದಿದೆ ಎಂದು ದೇಶದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ಬ್ರಿಗೇಡ್ ಗ್ರೂಪ್ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ವಿಶ್ವಪ್ರತಾಪ್ ದೇಸು ತಿಳಿಸಿದ್ದಾರೆ.

ಕಳೆದ 3 ವರ್ಷಗಳಲ್ಲಿ ಈ ಮಾರ್ಗದಲ್ಲಿ ವಸತಿ ಸಮುಚ್ಚಯಗಳ ಬೆಲೆ ಶೇ. 30 ರಿಂದ 35 ರಷ್ಟು ಹೆಚ್ಚಳವಾಗಿದೆ. ಮೆಟ್ರೋ ರೈಲಿನ ಎಲ್ಲಾ ಮಾರ್ಗಗಳ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು ನಾಗರೀಕರ ಜೀವನ ಗುಣಮಟ್ಟ ಸಾಕಷ್ಟು ಸುಧಾರಣೆಯಾಗಲಿದೆ ಎಂದು ಹೇಳಿದ್ದಾರೆ.

ರೈಲು ಮಾರ್ಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಳವಾಗಿರುವುದರ ಜತೆಗೆ ಮೆಟ್ರೋ ರೈಲಿನ ಪ್ರಯಾಣ ಸಾಕಷ್ಟು ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಶ್ಲಾಘಿಸಿದ್ದಾರೆ ವಿಶ್ವಪ್ರತಾಪ್ ದೇಸು. (ಒನ್ಇಂಡಿಯಾ ಬಿಜಿನೆಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The FAR for commercial construction around 2-3 km radius of Namma Metro stations has been increased from 3.2 to 4. This has given a huge fillip to commercial and retail real estate along the metro route. Mr. Suresh Hari, Secretary, CREDAI Bangalore and Mr.Viswa Prathap Desu, Vice President, Sales and Marketing, Brigade Group regarding the impact Namma Metro has had on the real estate scenario along the metro route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more