ಕಿಂಗ್‌ಫಿಶರ್ ಟವರ್‌ನಲ್ಲಿ ₹50,00,00,000ಗೆ ಅಪಾರ್ಟ್‌ಮೆಂಟ್ ಖರೀದಿಸಿದ ಇನ್ಫೋಸಿನ್ ನಾರಾಯಣಮೂರ್ತಿಗೆ ನೆಟ್ಟಿಗರ ತಿರುಗೇಟು
N.R.Narayana Murthy: ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಇನ್ಪೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಯುಬಿ ಸಿಟಿಯಲ್ಲಿರುವ ಕಿಂಗ್‌ಫಿಶರ್ ಟವರ್‌ನಲ್ಲಿ ಒಂದು ಪ್ಲಾಟ್ ಖರೀದಿಸಿದ್ದು, ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ನೆಟ್ಟಿಗರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಈ ಹಿಂದೆ ಉದ್ಯಮಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ವಿಚಾರಕ್ಕೆ ಭಾರೀ ಸುದ್ದಿಯಾಗಿದ್ದರು. ಇನ್ನು ಇದೀಗ ಬೆಂಗಳೂರಿನ ಕಿಂಗ್‌ಫಿಶರ್ ಟವರ್‌ನಲ್ಲಿ 50,00,00,000 ರೂಪಾಯಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ಖರೀದಿಸಿದ್ದಾರೆ. ಈ ವಿಚಾರಕ್ಕೆ ನೆಟ್ಟಿಗರು ನಾರಾಯಣಮೂರ್ತಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಿಂಗ್‌ಫಿಶರ್ ಟವರ್‌ನಲ್ಲಿ ನಾರಾಯಣಮೂರ್ತಿ ಇಲ್ಲಿಯೇ 50,00,00,000 ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ. ವಿಜಯ್ ಮಲ್ಯ ಪೂರ್ವಜರು 4.5 ಹೆಕ್ಟೇರ್ ವಿಸ್ತೀರ್ಣದಲ್ಲಿ ಕಿಂಗ್ ಫಿಶರ್ ಟವರ್ ನಿರ್ಮಿಸಿದ್ದರು. ಇಲ್ಲಿಯೇ ಬಯೋಕಾನ್ ಚೇರ್‌ಪರ್ಸನ್ ಕಿರಣ್ ಮಜುಂದರ್ ಷಾ ಸೇರಿ ಭಾರತದ ಪ್ರಮುಖ ಉದ್ಯಮಿಗಳು ಅಪಾರ್ಟ್‌ಮೆಂಟ್ ಹೊಂದಿದ್ದಾರೆ.
ಕಿಂಗ್‌ಫಿಶರ್ ಟವರ್‌ನ 16ನೇ ಮಹಡಿಯಲ್ಲಿರುವ ಹಾಗೂ 8,400 ಚದರ ಅಡಿಗಳಷ್ಟು ಜಾಗದಲ್ಲಿರುವ ಈ ದುಬಾರಿ ಫ್ಲಾಟ್ 4 ಮಲಗುವ ಕೋಣೆಗಳು, 5 ಕಾರ್ ಪಾರ್ಕಿಂಗ್ ವ್ಯವಸ್ಥೆಗಳನ್ನು ಹೊಂದಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, 50 ಕೋಟಿ ಬೆಲೆಯ ಈ ದುಬಾರಿ ಅಪಾರ್ಟ್‌ಮೆಂಟ್‌ನ ಪ್ರತಿ ಚದರ ಅಡಿ ವೆಚ್ಚವು 59,500 ರೂಪಾಯಿಗಳಿಷ್ಟಿದೆ. ಇದು ನಗರದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದಾಗಿದೆ.
ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಇದೇ ಕಾಂಪ್ಲೆಕ್ಸ್‌ನ 23ನೇ ಮಹಡಿಯಲ್ಲಿರುವ ಪ್ಲಾಟ್‌ವೊಂದನ್ನು 2020ರಲ್ಲಿ 29 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದರು. ಇದೀಗ ನಾರಾಯಣ ಮೂರ್ತಿ ಅವರು ಇದೇ ಕಿಂಗ್‌ಫಿಶರ್ ಟವರ್ಸ್‌ನಲ್ಲಿ 50,00,00,000 ರೂಪಾಯಿ ಬೆಲೆಯ ಐಷಾರಾಮಿ ಫ್ಲಾಟ್ ಖರೀದಿಸಿ ಗಮನ ಸೆಳೆದಿದ್ದಾರೆ.
ಕಿಂಗ್‌ಫಿಶರ್ ಟವರ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗಾಗಿ ನಾರಾಯಣಮೂರ್ತಿ 50,00,00,000 ರೂಪಾಯಿ ಪಾವತಿ ಮಾಡಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ಇದಕ್ಕೆ ಟೀಕೆಗಳನ್ನು ಮಾಡಿದ್ದಾರೆ. ಒಂದು ಅಪಾರ್ಟ್‌ಮೆಂಟ್‌ಗಾಗಿ 50 ಕೋಟಿ ರೂಪಾಯಿ ಖರ್ಚು ಮಾಡಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾರಾಯಣಮೂರ್ತಿ ಈ ಆಸ್ತಿಯನ್ನು ರಿಜಿಸ್ಟರ್ ಮಾಡಿಕೊಳ್ಳಲು 3 ಗಂಟೆ ವ್ಯರ್ಥ ಮಾಡಿದ್ದಾರೆ. ಆದ್ದರಿಂದ ಒಂದು ವಾರದಲ್ಲಿ 67 ಗಂಟೆ ಕೆಲಸ ಮಾಡಬೇಕಾಗಿದೆ ಎಂದು ಹಳೆಯ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಇನ್ಫೋಸಿಸ್ ಉದ್ಯೋಗಿಗಳಿಗೆ ಇನ್ನೂ 10 ಗಂಟೆಗಳ ಕಾಲ ಕೆಲಸ ಮಾಡಲು ಸೂಚಿಸಲಾಗಿದೆ. ಹಾಗಾದರೆ ಮಾತ್ರ ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಕ್ಕಳಿಗಾಗಿ ಕಿಂಗ್ ಫಿಶರ್ ಟವರ್‌ನಲ್ಲಿ ಇನ್ನೂ ಒಂದು ಫ್ಲಾಟ್ ಖರೀದಿಸಬಹುದು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಸರಳತೆ, ಸಹಾನುಭೂತಿಯ ಬಂಡವಾಳಶಾಹಿಯನ್ನು ಬೋಧಿಸುತ್ತಿದ್ದ ಅದೇ ವ್ಯಕ್ತಿ ಇಂದು ಬೆಂಗಳೂರಿನ ಕಿಂಗ್‌ಫಿಶರ್ ಟವರ್ಸ್‌ನಲ್ಲಿ 50 ಕೋಟಿ ರೂಪಾಯಿಯ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ. ಅಲ್ಲದೆ, ಈ ವ್ಯಕ್ತಿ ಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಬಯಸುತ್ತಾರೆ ಎಂದು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications