ಟಾಟಾ ಸನ್ಸ್ ಮುಖ್ಯಸ್ಥರ ಸಂಬಳವೆಷ್ಟು ಗೊತ್ತಾ?
ನವದೆಹಲಿ, ಮೇ 30: ಟಾಟಾ ಸನ್ಸ್ ನ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎನ್. ಚಂದ್ರ ಶೇಖರನ್ ಅವರು 2017ನೇ ವರ್ಷದ ಮೊದಲ ಏಳು ತಿಂಗಳ ಅವಧಿಯಲ್ಲಿ 30.15 ಕೋಟಿ ರು. ವೇತನ ಗಳಿಸಿದ್ದಾರೆ.
ಅಂದರೆ, ಅವರು ಈ ಹುದ್ದೆಗಳ ಜವಾಬ್ದಾರಿ ವಹಿಸಿಕೊಂಡ (ಜನವರಿ 12, 2017) ನಂತರ ಕಳೆದ ತಿಂಗಳ ಅಂತ್ಯದ ಒಳಗೆ ಇಷ್ಟು ಮೊತ್ತ ವೇತನ ಪಡೆದಿದ್ದಾರೆ.

ಔದ್ಯೋಗಿಕ ವಲಯದಲ್ಲಿ ಚಂದ್ರು ಅಂತಲೇ ಪರಿಚಿತವಾಗಿರುವ ಚಂದ್ರಶೇಖರನ್, ಮುಖ್ಯ ಕಾರ್ಯ ನಿರ್ವಾಹಕ ಹುದ್ದೆಗಾಗಿ 2.44 ಕೋಟಿ ರು. ಪಡೆದಿದ್ದಾರೆ. 25 ಕೋಟಿ ರು. ಕಮೀಷನ್, 2.7 ಕೋಟಿ ರು. ಭತ್ಯೆಯನ್ನು ಪಡೆದಿದ್ದಾರೆ.
ಈ ಹಿಂದೆ, ಕಂಪನಿಯ ಸಿಇಒ ಆಗಿದ್ದ ಸೈರಸ್ ಮಿಸ್ತ್ರಿ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ ಆ ಸ್ಥಾನದಿಂದ ಕಿತ್ತುಹಾಕಿದ ನಂತರ, ಚಂದ್ರಶೇಖರ್ ಅವರನ್ನು ಆ ಹುದ್ದೆಗೆ ತಂದು ಕೂರಿಸಿದೆ. ಜನವರಿ 12, 2017ರಂದು ಅವರು ಈ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.












Click it and Unblock the Notifications