ನಕಲಿ ಖಾತೆ ಬಗ್ಗೆ ಸ್ಪಷ್ಟಪಡಿಸುವವರೆಗೂ ಟ್ವಿಟ್ಟರ್ ಕಂಪನಿ ಖರೀದಿಸುವುದಿಲ್ಲ
ವಾಷಿಂಗ್ಟನ್, ಮೇ 17: ಟ್ವಿಟ್ಟರ್ ತನ್ನ ಫ್ಲಾಟ್‌ಫಾರ್ಮ್‌ನಲ್ಲಿ ಶೇಕಡಾ 5 ಕ್ಕಿಂತ ಕಡಿಮೆ ಸ್ಪ್ಯಾಮ್ ಖಾತೆಗಳನ್ನು ಹೊಂದಿದೆ ಎಂದು ಕಂಪನಿಯು ಸಾಬೀತು ಪಡಿಸುವವರೆಗೆ ತಾನು ಒಪ್ಪಂದವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದ್ದಾರೆ. ಟ್ವಿಟ್ಟರ್ ಸಿಇಒ ಪರಾಗ್ ಅಗರವಾಲ್ ಇತ್ತೀಚಿಗೆ ಟ್ವಿಟರ್ ಶೇಕಡಾ 5 ಕ್ಕಿಂತ ಕಡಿಮೆ ಸ್ಪ್ಯಾಮ್ ಖಾತೆಗಳನ್ನು ಹೊಂದಿದೆ ಎಂದಿದ್ದರು.
ಆದರೆ ಪರಾಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್ ಕ್ರೋಬ್ಲಾಗಿಂಗ್ ಸೈಟ್ ಕನಿಷ್ಠ 20 ಪ್ರತಿಶತ ಸ್ಪ್ಯಾಮ್ ಬಾಟ್‌ಗಳನ್ನು ಒಳಗೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಟ್ವಿಟ್ಟರ್ ಶೇಕಡಾ 5ಕ್ಕಿಂತ ಕಡಿಮೆ ಸ್ಪ್ಯಾಮ್ ಅಥವಾ ನಕಲಿ ಖಾತೆಗಳನ್ನು ಎಂಬುದನ್ನು ಖಚಿತ ಪಡಿಸಿದರೆ ಮಾತ್ರ ತಾವೂ ಅದನ್ನು ಖರೀದಿಸುವ ಒಪ್ಪಂದವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
ಟ್ವಿಟ್ಟರ್ ಪ್ರಕಾರ ಶೇಕಡಾ 5 ರಷ್ಟು ನಕಲಿ ಖಾತೆಗಳಿವೆ
ಕಳೆದ ವಾರ ಟ್ವಿಟ್ಟರ್ ಈ ತ್ರೈಮಾಸಿಕದಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಸುಮಾರು 5 ಪ್ರತಿಶತದಷ್ಟು ಸ್ಪ್ಯಾಮ್ಖಾತೆ ಗಳಿವೆ ಎಂದು ವರದಿ ಮಾಡಿತ್ತು. ಆದರೆ ಟೆಸ್ಲಾ ಸಿಎಒ ಟ್ವಿಟ್ಟರ್‌ನ ವಾದವನ್ನು ತಳ್ಳಿಹಾಕಿದ್ದಲ್ಲದೆ, ಒಪ್ಪಂದವನ್ನು ತಡೆಹಿಡಿದಿದ್ದರು. ಅದಾಗ್ಯೂ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಈಗಲೂ ಬದ್ಧರಾಗಿರುವುದಾಗಿ ತಿಳಿಸಿದ್ದರು. ಆದರೆ ನಕಲಿ ಖಾತೆಗಳು ನಾವು ಅಂದಾಜು ಮಾಡುವುದಕ್ಕಿಂತ ಹೆಚ್ಚಾಗಿರಬಹುದು, ಅವುಗಳನ್ನು ತೆರವುಗೊಳಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಅವರು ಹೇಳಿದ್ದರು.
ಕಡಿಮೆ ಮೊತ್ತಕ್ಕೆ ಟ್ವಿಟರ್ ಖರೀದಿಸಲು ಮಸ್ಕ್ ಮಾಡುತ್ತಿರುವ ತಂತ್ರ
ಕಳೆದ ತಿಂಗಳು ಬಿಲೇನಿಯರ್ ಮಸ್ಕ್ 44 ಬಿಲಿಯನ್ ಡಾಲರ್ ಮೊತ್ತಕ್ಕೆ ಟ್ವಿಟ್ಟರ್ ಖರೀದಿಸಲು ಆಫರ್ ನೀಡಿದ್ದರು. ಇದಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸಲು ತಮ್ಮ ಟೆಸ್ಲಾ ಕಂಪನಿಯ 53.2 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಇದೀಗ ಟ್ವಿಟ್ಟರ್ ಕಂಪನಿಯನ್ನು ತಾವೂ ನೀಡಿದ್ದ ಆಫರ್‌ಗಿಂತ ಕಡಿಮೆ ಮೊತ್ತಕ್ಕೆ ಖರೀಸುವ ಸಲುವಾಗಿ ಈ ಸ್ಪ್ಯಾಮ್ ಖಾತೆಗಳ ಹೆಸರನ್ನೇಳಿ ಒಪ್ಪಂದವನ್ನು ನಿಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಮಿಯಾಮಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಮಸ್ಕ್ 'ಹೆಚ್ಚು ಕೆಟ್ಟದ್ದಕ್ಕೆ ನೀವು ನಿರ್ಧರಿಸಿದ ಬೆಲೆಯನ್ನು ಪಾವತಿಸಲು ಸಾಧ್ಯವಿಲ್ಲ' ಎಂದು ತಿಳಿಸಿದ್ದರು.
ಟೆಸ್ಲಾ ಸಿಇಒ ಟ್ವಿಟ್ಟರ್ ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ, ಕಂಪನಿಯ ಷೇರುಗಳು ಶೇಕಡಾ 6ರಷ್ಟು ಕುಸಿದಿದೆ. ಇದೇ ಸಂದರ್ಭದಲ್ಲಿ ಟೆಸ್ಲಾ ಷೇರುಗಳ ಮೌಲ್ಯ ಶೇ.7ರಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

ಟ್ವಿಟ್ಟರ್‌ನಲ್ಲಿ ಉದ್ಯೋಗ ಪಡೆಯಲು ಹೆಚ್ಚಾಗಿದ್ದ ಆಸಕ್ತಿ
ಟ್ವಿಟ್ಟರ್ ಕಂಪನಿಯನ್ನು ಮಸ್ಕ್ ಖರೀದಿಸಲು ಆಸಕ್ತಿ ತೋರಿದ ನಂತರ ಕಂಪನಿಯಲ್ಲಿ ಉದ್ಯೋಗ ಬಯಸುವವ ಆಸಕ್ತಿಯು ಹೆಚ್ಚಾಯಿತು. ಜಾಬ್ ಬೋರ್ಡ್ ವೆಬ್‌ಸೈಟ್ ಗ್ಲಾಸ್‌ಡೋರ್‌ನ ಹಿರಿಯ ಅರ್ಥಶಾಸ್ತ್ರಜ್ಞ ಮತ್ತು ಲೀಡ್ ಡಾಟಾ ಸೈಂಟಿಸ್ಟ್ ಡೇನಿಯಲ್ ಝಾವೋ ಅವರ ಪ್ರಕಾರ, ಮಾರ್ಚ್ 2022 ರ ಬೇಸ್‌ಲೈನ್‌ಗೆ ಹೋಲಿಸಿದರೆ ಗ್ಲಾಸ್‌ಡೋರ್‌ನಲ್ಲಿ ಟ್ವಿಟ್ಟರ್ ಉದ್ಯೋಗಗಳಲ್ಲಿನ ಆಸಕ್ತಿ ಕಳೆದ ವಾರ 263% ಹೆಚ್ಚಾಗಿದೆ ಎಂದು ತಿಳಿಸಿದ್ದರು.