ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Spotify Layoffs : ಸ್ಪಾಟಿಫೈನಿಂದ ಉದ್ಯೋಗಿಗಳ ವಜಾ ಪ್ರಾರಂಭ

|
Google Oneindia Kannada News

ಬೆಂಗಳೂರು, ಜನವರಿ 23: ಟೆಕ್ ಕಂಪನಿಗಳಾದ ಗೂಗಲ್ ಮತ್ತು ಮೈಕ್ರೋಸಾಫ್ಟ್ 2023ರಲ್ಲಿ ಸಾವಿರಾರು ಕೆಲಸಗಾರರನ್ನು ವಜಾಗೊಳಿಸುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸ್ಪಾಟಿಫೈ ತನ್ನ ಕೆಲವು ಉದ್ಯೋಗಿಗಳನ್ನು ಜನವರಿ ಕೊನೆಯ ವಾರದಲ್ಲಿ ವಜಾಗೊಳಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಮಾಧ್ಯಮ ಸಂಸ್ಥೆ ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಸ್ಪಾಟಿಫೈ ಟೆಕ್ನಾಲಜೀಸ್ ಎಸ್‌ಎ ಈ ವಾರ ತನ್ನ ಕೆಲವು ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧವಾಗಿದೆ. ಇತ್ತೀಚಿನ ಪ್ರಕಟಣೆಯ ಪ್ರಕಾರ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲು ಟೆಕ್ ಕಂಪನಿಗಳ ಸಾಲಿಗೆ ಈಗ ಸ್ಪಾಟಿಪೈ ಕೂಡ ಸೇರಿದೆ.

ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರ ಹೆಣಗಾಟಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರ ಹೆಣಗಾಟ

ವರದಿಯ ಪ್ರಕಾರ ಮ್ಯೂಸಿಕ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ಸ್ಪಾಟಿಪೈನಿಂದ ವಜಾಗೊಳ್ಳುವ ನಿರೀಕ್ಷೆಯಿರುವ ಜನರ ಸಂಖ್ಯೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಕ್ಟೋಬರ್‌ನಲ್ಲಿ ಸ್ಪಾಟಿಫೈ ತನ್ನ ಗಿಮ್ಲೆಟ್ ಮೀಡಿಯಾ ಮತ್ತು ಪಾರ್ಕಾಸ್ಟ್ ಪಾಡ್‌ಕಾಸ್ಟ್ ಸ್ಟುಡಿಯೊಗಳಿಂದ 38 ಸಿಬ್ಬಂದಿಯನ್ನು ವಜಾಗೊಳಿಸಿತ್ತು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿತ್ತು.

Music streaming platform Spotify begins layoffs

ಮೂರನೇ ತ್ರೈಮಾಸಿಕ ಗಳಿಕೆಯ ವರದಿಯ ಪ್ರಕಾರ ಸ್ಪಾಟಿಪೈ ಜಗತ್ತಿನಾದ್ಯಂತ 9,000 ಉದ್ಯೋಗಿಗಳನ್ನು ಹೊಂದಿದೆ. ಕಂಪನಿಯಿಂದ ವಜಾಗೊಳ್ಳಲಿರುವ ನಿರೀಕ್ಷೆಯ ಜನರ ಸಂಖ್ಯೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಈ ವಾರದಲ್ಲಿಯೇ ವಜಾ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಕೋವಿಡ್‌ ಸಾಂಕ್ರಾಮಿಕ ರೋಗ ಬರುವ ಮೊದಲು ಸ್ಪಾಟಿಫೈ 2019 ರಲ್ಲಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪಾಡ್‌ಕ್ಯಾಸ್ಟ್ ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಿತ್ತು. ಈ ಪಾಡ್‌ಕ್ಯಾಸ್ಟ್ ವ್ಯವಹಾರದಲ್ಲಿನ ಹೂಡಿಕೆಗಳು ಈಗ ಹೂಡಿಕೆದಾರರ ತಾಳ್ಮೆಯನ್ನು ಪರೀಕ್ಷಿಸುತ್ತಿವೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಆರ್ಥಿಕ ಕುಸಿತದ ಭಯ: 7% ಉದ್ಯೋಗಿಗಳನ್ನು ವಜಾಗೊಳಿಸಲಿವೆ ಅಮೆರಿಕಾದ ಮಾಧ್ಯಮಗಳುಆರ್ಥಿಕ ಕುಸಿತದ ಭಯ: 7% ಉದ್ಯೋಗಿಗಳನ್ನು ವಜಾಗೊಳಿಸಲಿವೆ ಅಮೆರಿಕಾದ ಮಾಧ್ಯಮಗಳು

ಹೂಡಿಕೆದಾರರು ಸ್ಪಾಟಿಪೈನಲ್ಲಿ ತಮ್ಮ ಆದಾಯವನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಆಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ಷೇರುಗಳು ಕಳೆದ ವರ್ಷ 66 ಪ್ರತಿಶತದಷ್ಟು ಕುಸಿದವು. ವಜಾಗೊಳಿಸುವಿಕೆಯ ಹಿಂದಿನ ಕಾರಣವೆಂದರೆ ಸ್ಪಾಟಿಫೈ ಷೇರು ಬೆಲೆಗಳಲ್ಲಿನ ಕಡಿದಾದ ಕುಸಿತವಾಗಿದೆ. ಈ ತಿಂಗಳ ಆರಂಭದಲ್ಲಿ ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ಇಂಕ್ 2023ರಲ್ಲಿ ಟೆಕ್ ಕಂಪನಿಯಿಂದ 12,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ ಎಂದು ಘೋಷಿಸಿತು. ಮೆಟಾ ಕಂಪನಿಯಿಂದ ಕೂಡ 10,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿತು.

ಗೂಗಲ್‌ನಿಂದ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆಯ ಪ್ರಕಟಣೆಯಲ್ಲಿ ಆರ್ಥಿಕ ಹಿಂಜರಿತದ ದೃಷ್ಟಿಯಿಂದ ಹಲವಾರು ಹೂಡಿಕೆದಾರರ ಹಿಂತೆಗೆದುಕೊಳ್ಳುವಿಕೆಯಿಂದ ಈ ಉದ್ಯೋಗ ಕಡಿತ ಪ್ರಾರಂಭಿಸಲಾಗಿದೆ ಎಂದು ತಿಳಿಸಿದೆ.

English summary
Music streaming platform Spotify is reportedly set to lay off some of its employees in the last week of January, just days after tech companies Google and Microsoft announced plans to cut thousands of jobs in 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X