ಇಂಟರ್ನೆಟ್ ಬಳಕೆಯಲ್ಲಿ ಮುಂಬೈ 1, ಬೆಂಗಳೂರು 4

ಮುಂಬೈ, ನ.5: ದೇಶದ 243 ಮಿಲಿಯನ್ ಗೂ ಅಧಿಕ ಬಳಕೆದಾರರ ಪೈಕಿ ಮುಂಬೈನಲ್ಲಿ ಅತ್ಯಧಿಕ ಸಂಖ್ಯೆಯ ಬಳಕೆದಾರರಿದ್ದರೆ ಸಿಲಿಕಾನ್ ವ್ಯಾಲಿ ಎನಿಸಿರುವ ಬೆಂಗಳೂರು 4ನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಇಂಟರ್ನೆಟ್ ಹಾಗೂ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ(IAMAI) ನಡೆಸಿದ ಸಮೀಕ್ಷೆ ವರದಿ ಪ್ರಕಾರ ಮುಂಬೈನಲ್ಲಿ ಸುಮಾರು 16.3 ಮಿಲಿಯನ್ ಬಳಕೆದಾರರಿದ್ದಾರೆ.

ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಅಕ್ಟೋಬರ್ 2014ರಲ್ಲಿ 16.4 ಮಿಲಿಯನ್ ಗೇರಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ 12 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಒಟ್ಟಾರೆ ಶೇ 37ರಷ್ಟು ಏರಿಕೆ ಕಂಡಿದೆ ಎಂದು ಐಎಎಂಎಐ ಮತ್ತು ಐಎಂಆರ್ ಬಿ ನಡೆಸಿದ ಜಂಟಿ ಅಧ್ಯಯನದಿಂದ ತಿಳಿದು ಬಂದಿದೆ.

Mumbai is the top metro city with 23% of Internet users in India

ಮೆಟ್ರೋ ನಗರಗಳ ಪೈಕಿ ಮುಂಬೈ ಅಗ್ರಸ್ಥಾನದಲ್ಲಿದ್ದರೆ ದೆಹಲಿ ಎರಡನೇ ಸ್ಥಾನದಲ್ಲಿದೆ. ದೆಹಲಿ 12.1 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ದೆಹಲಿ ತ್ವರಿತಗತಿಯಲ್ಲಿ ಬಳಕೆದಾರರಲ್ಲಿ ಏರಿಕೆ ಕಾಣುತ್ತಿರುವ ನಗರ ಎನಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 50ರಷ್ಟು ಏರಿಕೆ ಕಂಡು ಬಂದಿದೆ.

ನಂತರದ ಸ್ಥಾನದಲ್ಲಿ ಕೋಲ್ಕತ್ತಾ ಇದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ನಗರಗಳು ಮುಂತಾದ ಸ್ಥಾನಗಳನ್ನು ಪಡೆದಿವೆ. ಟಾಪ್ ಎಂಟು ನಗರಗಳನ್ನು ಸೇರಿಸಿದರೆ ಒಟ್ಟಾರೆ 58 ಮಿಲಿಯನ್ ಬಳಕೆದಾರರನ್ನು ಹೊಂದಿದೆ

ದೇಶದ ನಾಲ್ಕು ಮುಖ್ಯ ಮೆಟ್ರೋಗಳು 23% ಇಂಟರ್ ನೆಟ್ ಬಳಕೆದಾರರನ್ನು ಹೊಂದಿದ್ದು, ಇನ್ನಿತರ 4 ಮೆಟ್ರೊಗಳಲ್ಲಿ 11% ಇಂಟರ್ ನೆಟ್ ಬಳಸುವವರಿದ್ದಾರೆ.ಇನ್ನುಳಿದ ಪ್ರಮುಖ ನಗರಗಳ ಪೈಕಿ ಸೂರತ್ (2.97 ಮಿಲಿಯನ್), ಜೈಪುರ (2.35 ಮಿಲಿಯನ್) ಲಕ್ನೋ (1.95 ,ಮಿಲಿಯನ್) ಮತ್ತು ವಡೋದರ (1.85 ಮಿಲಿಯನ್) . ಕೋಲ್ಕತ್ತಾ 6.27 ಮಿಲಿಯನ್ ಬಳಕೆದಾರರು, ಬೆಂಗಳೂರು 5.99 ಮಿಲಿಯನ್ ಬಳಕೆದಾರರು ಹಾಗೂ ಚೆನ್ನೈ 5.58 ಬಳಕೆದಾರರನ್ನು ಹೊಂದಿದೆ (ಪಿಟಿಐ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+