ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜೆಯಲ್ಲಿರುವ ಸಹೋದ್ಯೋಗಿಗೆ ಕರೆ ಮಾಡಿದರೆ ₹ 1 ಲಕ್ಷ ದಂಡ ವಿಧಿಸುವ ಕಂಪನಿ ಯಾವುದು- ಕಾರಣ ತಿಳಿಯಿರಿ

|
Google Oneindia Kannada News

ಮುಂಬೈ, ಜನವರಿ 12: ಪ್ರಪಂಚದಾದ್ಯಂತದ ಹೆಚ್ಚಿನ ಉದ್ಯೋಗಿಗಳಿಗೆ, ರಜಾದಿನಗಳೆಂದರೆ ಕಟ್ಟುನಿಟ್ಟಾಗಿ ವಿಶ್ರಾಂತಿ ಪಡೆಯುವ ಸಮಯವಾಗಿದೆ. ಆದರೆ, ಕೆಲವೊಮ್ಮೆ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುತ್ತದೆ. ಕಚೇರಿಗೆ ಸಂಬಂಧಿಸಿದ ವಿಷಯ ಚರ್ಚಿಸಲು ಕರೆ ಮಾಡಿ ತಲೆತಿನ್ನುವ ಸಹೋದ್ಯೋಗಿಗಳಿಗೇನೂ ಕಡಿಮೆ ಇಲ್ಲ.

ಇದನ್ನು ತಪ್ಪಿಸಲು ಮುಂಬೈ ಮೂಲದ ಕಂಪನಿಯೊಂದು ಕ್ರಮವೊಂದನ್ನು ಜಾರಿಗೆ ತಂದಿದೆ. ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ ಅನ್ನು ನಡೆಸುತ್ತಿರುವ ಮುಂಬೈ ಮೂಲದ ಡ್ರೀಮ್ 11 ನಲ್ಲಿನ ಉದ್ಯೋಗಿಗಳ ಮೇಲೆ ಈ ಕ್ರಮವನ್ನು ಜಾರಿ ಮಾಡಿದೆ. ರಜಾದಿನಗಳಲ್ಲಿರುವ ಸಹೋದ್ಯೋಗಿಯನ್ನು ಫೋನ್‌ ಮೂಲಕ ಸಂಪರ್ಕಿಸಿದರೆ 1 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಡ್ರೀಮ್ 11 ಸಹ-ಸಂಸ್ಥಾಪಕ ಭವಿತ್ ಶೇತ್ ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

2008 ರಲ್ಲಿ ಸ್ಥಾಪನೆಯಾದ ಕಂಪನಿಯು ಕಾರ್ಮಿಕರಿಗೆ ವಾರ್ಷಿಕವಾಗಿ ಕನಿಷ್ಠ ಒಂದು ವಾರ ರಜೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆ..

Mumbai Firm Fines Staff Rs 1 Lakh For Disturbing Colleagues On Vacation

'ವರ್ಷಕ್ಕೊಮ್ಮೆ, ಒಂದು ವಾರದವರೆಗೆ, ಉದ್ಯೋಗಿಗಳನ್ನು ವ್ಯವಸ್ಥೆಯಿಂದ ಹೊರಹಾಕಲಾಗುತ್ತದೆ' ಎಂದು ಶೇತ್ ಚಾನಲ್‌ಗೆ ತಿಳಿಸಿದ್ದಾರೆ.

'ನೀವು ಯಾವುದೇ ಇಮೇಲ್‌ ಅಥವಾ ಕರೆಗಳನ್ನು ಸ್ವೀಕರಿಸುವುದಿಲ್ಲ. ಏಕೆಂದರೆ ಆ ಒಂದು ವಾರ ಅಡೆತಡೆಯಿಲ್ಲದೇ ಸಮಯವನ್ನು ನಿಮ್ಮದಾಗಿಸಿಕೊಳ್ಳಬೇಕು. ಇದು ನಿಮಗೆ ಹೆಚ್ಚು ಸಹಾಯ ಮಾಡುತ್ತದೆ ಮತ್ತು ನಾವು ಯಾರ ಮೇಲೆ ಅವಲಂಬಿತರಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಇದು ನಮ್ಮ ವ್ಯಾಪಾರಕ್ಕೆ ಸಹಾಯ ಮಾಡುತ್ತದೆ' ಎಂದು ಹೇಳಿದ್ದಾರೆ.

36 ವರ್ಷದ ಶೇತ್ ಪ್ರಕಾರ, ಇಲ್ಲಿಯವರೆಗೆ ಈ ವ್ಯವಸ್ಥೆಯು ಪರಿಣಾಮಕಾರಿಯಾಗಿದೆ.

'ಈ ಅಡೆತಡೆಯಿಲ್ಲದ ಸಮಯವು ಡ್ರೀಮ್‌ಸ್ಟರ್‌ಗಳಿಗೆ (ಡ್ರೀಮ್ 11 ಕಂಪನಿಯ ಉದ್ಯೋಗಿಗಳು) ವಿಶ್ರಾಂತಿ ಪಡೆಯಲು ಮತ್ತು ತಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡಲು ಸಿದ್ಧರಾಗಿ ಕೆಲಸಕ್ಕೆ ಮರಳಲು ಅನುವು ಮಾಡಿಕೊಡುತ್ತದೆ ಎಂದು ಡ್ರೀಮ್‌ 11 ನಂಬುತ್ತದೆ' ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

Mumbai Firm Fines Staff Rs 1 Lakh For Disturbing Colleagues On Vacation

ಉತ್ತಮ ಗುಣಮಟ್ಟದ ವಿರಾಮವನ್ನು ಆನಂದಿಸಲು ಕಾರ್ಮಿಕರಿಗೆ ಅವಕಾಶ ನೀಡಬೇಕು. ಈ ದಂಡವು ಗಮನ ಸೆಳೆಯುವ ಮಾರ್ಗವಾಗಿದೆ. ಪ್ರತಿಭೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಸೇರಿದಂತೆ ಅನೇಕ ಕಂಪನಿಗಳು ಸಿಬ್ಬಂದಿಗೆ ಅನಿಯಮಿತ ರಜೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತಿವೆ. ಇದು ಉತ್ತಮ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ರಜೆಗಳು ಸಂತಸದಾಯಕ ಹಾಗೂ ನೆಮ್ಮದಿಯುತವಾಗಿರಬೇಕು. ಅಂದಾಗ ಮಾತ್ರ ಉದ್ಯೋಗಿಗಳ ಜೀವನ ಮಟ್ಟ ಉತ್ತಮವಾಗಿರಲು ಸಾಧ್ಯವೆಂದು ಹೇಳಿದ್ದಾರೆ.

English summary
Bhavit Sheth, co-founder of Dream 11, said in an interview with CNBC that anyone who contacts a colleague while on holiday will be fined Rs 1 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X