ಮೂಡೀಸ್ ರೇಟಿಂಗ್ ನಿಂದ ಭಾರತಕ್ಕೆ ಆಗುವ 4 ಅನುಕೂಲ

Posted By:
Subscribe to Oneindia Kannada

ದೇಶದ ಆರ್ಥಿಕತೆಯನ್ನು ಮೂಡೀಸ್ ಮೇಲ್ದರ್ಜೆಗೆ ಏರಿಸಿದರೆ ಏನಂತೆ, ಅದಕ್ಕೆ ಯಾಕೆ ಕೇಂದ್ರ ಸರಕಾರ ಈ ಪರಿ ಸಂಭ್ರಮಿಸಬೇಕು? ಷೇರು ಮಾರುಕಟ್ಟೆ ಇಷ್ಟೊಂದು ಏರಿಕೆ ಏಕೆ ಕಾಣಬೇಕು? ಇಂಥ ಪ್ರಶ್ನೆಗಳು ಸಹಜ. ಅದರಲ್ಲೂ ಈ ಮೂಡೀಸ್ ರೇಟಿಂಗ್ ಬಗ್ಗೆ ಗೊತ್ತಿಲ್ಲದವರಲ್ಲಿ ಇದು ಸಹಜ. ಶುಕ್ರವಾರ ಬೆಳಗ್ಗೆ ಭಾರತದ ಆರ್ಥಿಕತೆ ಪಾಲಿಗೆ ಸಂಚಲನ ಮೂಡಿದೆ.

ಮೂಡೀಸ್ ರೇಟಿಂಗ್ ನಿಂದಾಗಿ ಏನೇನು ಲಾಭ ಅನ್ನೋದನ್ನು ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾ ವಿವರಿಸಿದ್ದಾರೆ. ಭಾರತೀಯ ಹೂಡಿಕೆದಾರರಿಗೆ ಲಾಭ ಆಗುತ್ತದೆ ಎಂಬುದು ಅವರ ಮೊದಲ ಪ್ರತಿಕ್ರಿಯೆ. ಈಗ ಭಾರತದ ಆರ್ಥಿಕತೆಗೆ ಸಿಕ್ಕಿರುವ ರೇಟಿಂಗ್ ದೊರೆತು ಹದಿನಾಲ್ಕು ವರ್ಷವೇ ಆಗಿಹೋಗಿತ್ತು.

ಮೋದಿ ಸರ್ಕಾರಕ್ಕೆ ಸಿಕ್ತು ಮೂಡಿ ಬೆಂಬಲ, ರೇಟಿಂಗ್ ಏರಿಕೆ

ಈಗಿನ ಸ್ಥಿತಿಯನ್ನು ಗಮನಿಸಿದರೆ ಹೂಡಿಕೆದಾರರು ಶೇ ಹದಿನೈದರಷ್ಟು ಲಾಭವನ್ನು ಭಾರತದ ಷೇರು ಮಾರುಕಟ್ಟೆಯಿಂದ ಸಲೀಸಾಗಿ ಪಡೆಯಬಹುದು ಎಂದಿದ್ದಾರೆ. ಕೇಂದ್ರ ಸರಕಾರದ ಸುಧಾರಣೆ ಕ್ರಮಗಳಿಗೆ ದೊರೆತ ಮನ್ನಣೆ ಇದು ಎಂದು ಅಭಿಪ್ರಾಯ ಪಟ್ಟಿರುವ ಅನುಕೂಲಗಳ ಪಟ್ಟಿಯನ್ನೂ ಮಾಡಿದ್ದಾರೆ.

ಜುಂಜುನ್ ವಾಲಾ ಪಟ್ಟಿ ಮಾಡುವ ನಾಲ್ಕು ಅನುಕೂಲಗಳು ಇಂತಿವೆ.

ವಿದೇಶಿ ಬಂಡವಾಳದ ಹರಿವು

ವಿದೇಶಿ ಬಂಡವಾಳದ ಹರಿವು

ಮೂಡೀಸ್ ರೇಟಿಂಗ್ ನಿಂದಾಗ ವಿದೇಶಿ ಸಾಂಸ್ಥಿಕ ಹೂಡಿಕೆ ಹರಿದು ಬರುವುದು ಹೆಚ್ಚಾಗುವ ಸಾಧ್ಯತೆ ಇದೆ. ಅದು ಈ ವರೆಗೆ ಸಣ್ಣ ಮೇಘ ಸ್ಫೋಟದಂತೆ ಬರುತ್ತಿದ್ದದ್ದು ಸುನಾಮಿಯಂತೆ ಆಗಲಿದೆ.

ಸುಧಾರಣೆ ಕ್ರಮಗಳಿಗೆ ಮನ್ನಣೆ

ಸುಧಾರಣೆ ಕ್ರಮಗಳಿಗೆ ಮನ್ನಣೆ

ಭಾರತದ ಮೇಲೆ ಆರ್ಥಿಕ ಪರಿಣಾಮಗಳು ಒಂದು ಕಡೆ ಇರಲಿ, ಭಾವನಾತ್ಮಕವಾಗಿಯೂ ಇದು ಬಹಳ ಮುಖ್ಯ. ಈಗ ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಸುಧಾರಣೆ ಕ್ರಮಗಳಿಗೆ ಮನ್ನಣೆ ಸಿಕ್ಕಂತಾಗಿದೆ.

ವ್ಯವಹಾರಕ್ಕೆ ಪೂರಕ ವಾತಾವರಣ

ವ್ಯವಹಾರಕ್ಕೆ ಪೂರಕ ವಾತಾವರಣ

ವ್ಯವಹಾರಸ್ಥರು, ವರ್ತಕರಲ್ಲಿ ಆಶಾಭಾವ ಮೂಡುತ್ತದೆ. ದೇಶದಲ್ಲಿ ವ್ಯಾಪಾರ ಮಾಡಲು ಪೂರಕ ವಾತಾವರಣ ಇದೆ ಎಂಬುದನ್ನು ಮತ್ತೊಮ್ಮೆ ಸಾರಿದಂತಾಗುತ್ತದೆ. ವಿಶ್ವಬ್ಯಾಂಕ್ ಶ್ರೇಯಾಂಕದ ಪಟ್ಟಿಯಲ್ಲೂ ಭಾರತ ಮೇಲಕ್ಕೆ ಏರಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಬಂಡವಾಳದ ಮೇಲಿನ ವೆಚ್ಚ ಇಳಿಕೆ

ಬಂಡವಾಳದ ಮೇಲಿನ ವೆಚ್ಚ ಇಳಿಕೆ

ಹಣದ ಹರಿವು ಹೆಚ್ಚಾದಂತೆ ಸರಕಾರಕ್ಕೆ ಬೇಕಾದ ಅಗತ್ಯ ಬಂಡವಾಳದ ಪೂರೈಕೆ ಆಗುತ್ತದೆ. ಬಂಡವಾಳದ ಮೇಲಿನ ವೆಚ್ಚವು ತಗ್ಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even as Sensex and Nifty soared on the back of global rating agency Moody’s upgrade on India, ‘the big bull of Dalal Street’– Rakesh Jhunjhunwala welcomed the move saying that this will bring a plethora of benefits for Indian investors. He listed out 4 benefits from this.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ