ಆರ್ ಬಿಐನಿಂದ ರೆಪೋ ದರ ಇಳಿಕೆ, ಬಡ್ಡಿ ದರ ಇಳಿಕೆ ಯಾವಾಗ?
ಮುಂಬೈ, ಅಕ್ಟೋಬರ್ 04: ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿ ಐ) ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಮೇಲೆ ಇದೇ ಮೊದಲ ಬಾರಿಗೆ ಪರಿಶೀಲನಾ ಸಭೆ ನಡೆಸಿದ ಉರ್ಜಿತ್ ಪಟೇಲ್ ಅವರು ತೆಗೆದುಕೊಂಡ ನಿರ್ಧಾರಗಳು ಷೇರುಪೇಟೆಯಲ್ಲಿ ಉತ್ಸಾಹ ತಂದಿದೆ.
ಹಣಕಾಸು ನೀತಿ ಸಮಿತಿಯ (ಎಂಪಿಸಿ) ಪ್ರಥಮ ಪರಿಶೀಲನಾ ಸಭೆಯಲ್ಲಿ ರೆಪೋ ದರವನ್ನು 0.25ರಷ್ಟು ಕಡಿತಗೊಳಿಸಲಿ ನಿರ್ಧರಿಸಲಾಯಿತು. ಕ್ಯಾಶ್ ರಿಸರ್ಚ್ ದರ(ಸಿಆರ್ ಆರ್) ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬದಲಾವಣೆ ನಂತರ ರೆಪೋ ದರ 6.5 % ನಿಂದ 6.25% ಗೆ ಇಳಿಯಲಿದೆ. ಜನವರಿಯಿಂದ ಇಲ್ಲಿ ತನಕ 1.50% ರೆಪೋ ದರ ಇಳಿಕೆ ಮಾಡಲಾಗಿದೆ. [ ಗೃಹಸಾಲ ಮತ್ತು ಪ್ರಾಪರ್ಟಿ ಸಾಲದ ನಡುವಿನ ವ್ಯತ್ಯಾಸಗಳೇನು?]

ಈಗ ರೆಪೋ ದರ 6 ವರ್ಷಗಳ ಅವಧಿಯಲ್ಲೇ ಅತ್ಯಂತ ಕೆಳಕ್ಕೆ ಇಳಿಯಲಿದೆ. ಪರಿಣಾಮವಾಗಿ ಇಎಂಐಗಳು ಕಡಿಮೆಯಾಗಲಿವೆ. ಸೂಚ್ಯಂಕ 100 ಪಾಯಿಂಟ್ನಷ್ಟು ಜಿಗಿದಿದೆ. ನಿಫ್ಟಿ ಕೂಡಾ 8,750ರಲ್ಲಿ ದೃಢವಾಗಿ ನಿಂತಿದೆ.
ಬಡ್ಡಿದರ ಇಳಿಕೆ ಸಂಭವ: 30 ಲಕ್ಷ ರು. ಹಾಗೂ ಅದಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲದ ಮೇಲೆ ಶೇಕಡ 90ರಷ್ಟು ಮೊತ್ತವನ್ನು ಬ್ಯಾಂಕ್ಗಳು ಗ್ರಾಹಕರಿಗೆ ಮಂಜೂರು ಮಾಡಬಹುದು ಎಂದು ಆರ್ಬಿಐ ಹೊಸ ನಿಯಮ ರೂಪಿಸಿರುವುದು ತಿಳಿದಿರಬಹುದು.
20 ರಿಂದ 30 ಲಕ್ಷ ರು ಸಾಲ ಮಾಡಿ ಮನೆ ಕಟ್ಟಲು ಬಯಸುವವರಿಗೆ ಆರ್ ಬಿಐ ಆದೇಶ ವರವಾಗಲಿದೆ. ಆರ್ಬಿಐ ರೆಪೊ ದರವನ್ನು ಇಳಿಸಿದ ನಂತರ ಹಲವು ಬ್ಯಾಂಕ್ಗಳು ಬಡ್ಡಿ ದರ ಇಳಿಸುವ ಸಾಧ್ಯತೆಯಿದೆ.












Click it and Unblock the Notifications