ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕನಸಿನ ಸ್ಮಾರ್ಟ್ ಸಿಟಿ ಯೋಜನೆ ನಿಟ್ಟಿನಲ್ಲಿ 'ಸ್ಮಾರ್ಟ್ ಏಷ್ಯಾ'

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 23: ಸ್ಮಾರ್ಟ್ ಏಷ್ಯಾ 2017, ಮೂರು ದಿನಗಳ ಕಾರ್ಯಕ್ರಮವಾಗಿದ್ದು ನವೆಂಬರ್ 23ರಂದು ಬೆಂಗಳೂರಿನ ವೈಟ್ ಆರ್ಕಿಡ್ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆಯಲಿದೆ. ತೈವಾನ್‍ನ ಪರಿಣಿತಿ ಮತ್ತು ಜ್ಞಾನವುಳ್ಳ, ಸದೃಢ ಮತ್ತು ಸಮರ್ಥ ಸ್ಮಾರ್ಟ್ ನಗರಗಳನ್ನು ನಿರ್ಮಿಸುವಲ್ಲಿ ಭಾರತದ ಉತ್ಸಾಹವನ್ನು ಒಟ್ಟಿಗೆ ತಂದಿದೆ.

ಸ್ಮಾರ್ಟ್ ಸಿಟಿ ನಿರ್ಮಾಣದಲ್ಲಿ ಅರ್ಧ ನಮ್ಮ ಪಾಲು: ಸಿದ್ದರಾಮಯ್ಯಸ್ಮಾರ್ಟ್ ಸಿಟಿ ನಿರ್ಮಾಣದಲ್ಲಿ ಅರ್ಧ ನಮ್ಮ ಪಾಲು: ಸಿದ್ದರಾಮಯ್ಯ

ಸ್ಮಾರ್ಟ್ ಏಷ್ಯಾ 2017 ಎಕ್ಸ್ ಪೋದಲ್ಲಿ ಭಾಗವಹಿಸಿದ ತೈವಾನ್ ಎಕ್ಸೆಲೆನ್ಸ್ ಸ್ಮಾರ್ಟ್ ನಗರಗಳ ವಲಯದಲ್ಲಿ ತನ್ನ ಅನುಭವ ಹಂಚಿಕೊಳ್ಳಲು ಮತ್ತು ಸ್ಮಾರ್ಟ್ ಸಿಟಿ' ಅನುಭವವನ್ನು ಇತರೆ ರಾಷ್ಟ್ರಗಳೊಂದಿಗೆ ಮುಖ್ಯವಾಗಿ ಭಾರತದೊಂದಿಗೆ ಹಂಚಿಕೊಳ್ಳಲು ಬದ್ಧತೆಯನ್ನು ಪುನರುಚ್ಚರಿಸಿತು.

Modi Smart City Mission SMART ASIA 2017, a three-day event Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಸ್ಮಾರ್ಟ್ ಸಿಟೀಸ್' ಮಿಷನ್ ಪ್ರಕಟಿಸಿರುವುದರಿಂದ ತೈವಾನ್ ಸ್ಮಾರ್ಟ್ ಪ್ರಾಜೆಕ್ಟ್ ಗಳ ಕ್ಷೇತ್ರದಲ್ಲಿ ತನ್ನ ಪರಿಣಿತಿಯನ್ನು ಒದಗಿಸುತ್ತಿದೆ. ಈ ವರ್ಷ ಮೇ ತಿಂಗಳಲ್ಲಿ ತೈವಾನ್ ಎಕ್ಸೆಲೆನ್ಸ್ 3ನೇ ಸ್ಮಾರ್ಟ್ ಸಿಟೀಸ್ 2017ರಲ್ಲಿ ಭಾಗವಹಿಸಿದ್ದು ವಿಶ್ವದಾದ್ಯಂತ ತಾನು ಪೂರೈಸುತ್ತಿರುವ ಯಶಸ್ವಿ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿತು.

ಸ್ಮಾರ್ಟ್ ಸಿಟಿ ಪಟ್ಟಿಗೆ ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು ಆಯ್ಕೆ ಸ್ಮಾರ್ಟ್ ಸಿಟಿ ಪಟ್ಟಿಗೆ ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು ಆಯ್ಕೆ

ಸ್ಮಾರ್ಟ್ ಏಷ್ಯಾ 2017 ಸ್ಮಾರ್ಟ್ ಟೆಕ್ ಮತ್ತು ಸ್ಮಾರ್ಟ್ ನಗರ ಪರಿಹಾರಗಳಿಗೆ ಗಮನ ನೀಡಿದೆ ಮತ್ತು ವಿಶ್ವದಾದ್ಯಂತ ಸಂಬಂಧಪಟ್ಟ ಉದ್ಯಮಗಳಿಗೆ ಸಂವಹನ ನಡೆಸಲು ಮತ್ತು ವಿನೂತನ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಸಾಮಾನ್ಯ ವೇದಿಕೆ ಒದಗಿಸುತ್ತದೆ.

ಇದು ನಗರಗಳನ್ನು ಉನ್ನತ ಇಂಟೆಲಿಜೆನ್ಸ್, ನೆಟ್‍ವರ್ಕ್ಸ್ ಮತ್ತು ಟೆಲಿಕಾಂ, ಡಿಜಿಟಲೈಸೇಷನ್, ಸಾರ್ವಜನಿಕ ಸಾರಿಗೆ, ಎನರ್ಜಿ ಗ್ರಿಡ್‍ಗಳು, ಸಾರ್ವಜನಿಕ ಆರೋಗ್ಯ, ಜಲ ಸಂಪನ್ಮೂಲ ನಿರ್ವಹಣೆ ಮತ್ತು ಪಾರಿಸರಿಕ ಸುಸ್ಥಿರತೆಗೆ ಪರಿಹಾರಗಳನ್ನು ಒದಗಿಸುತ್ತದೆ.

Modi Smart City Mission SMART ASIA 2017, a three-day event Bengaluru

ಈ ವ್ಯಾಪಾರ ಮೇಳದಲ್ಲಿ ಹಲವಾರು ಮುಂಚೂಣಿಯ ತೈವಾನಿನ ಬ್ರಾಂಡ್‍ಗಳು ಅತ್ಯಾಧುನಿಕ ಪರಿಹಾರಗಳನ್ನು ಸ್ಮಾರ್ಟ್ ಐಸಿಟಿ, ಸ್ಮಾರ್ಟ್ ಹೆಲ್ತ್ ಕೇರ್, ಇಂಟರ್‍ನೆಟ್ ಆಫ್ ಥಿಂಗ್ಸ್(ಐಒಟಿ) ಪರಿಹಾರಗಳು ಮತ್ತು ಸ್ಮಾರ್ಟ್-ಲೈಫ್ ಸಾಧನಗಳ ಉದ್ಯಮಗಳು ಇದ್ದವು.

ಅಂಗನೆಯ ಸ್ತನ ತಡಕಾಡಿ ಎದೆ ವಸ್ತ್ರ ಕಳಚಿದ ಮಂಗಅಂಗನೆಯ ಸ್ತನ ತಡಕಾಡಿ ಎದೆ ವಸ್ತ್ರ ಕಳಚಿದ ಮಂಗ

ತನ್ನ ವಿನೂತನ ಉತ್ಪನ್ನಗಳನ್ನು ಪ್ರದರ್ಶಿಇಸಿದ ಕಂಪನಿಗಳಲ್ಲಿ ಏಸರ್ ಇಂಡಿಯಾ, ಅಡ್ವಾಂಟೆಕ್, ಅಮರಿಲ್ಲೊ, ಏವರ್, ಚೆಮ್, ಸಿಟಿಸಿಐ ಅಡ್ವಾನ್ಸ್‍ಡ್, ಸಿಟಿಸಿಐ, ಡೆಲ್ಟಾ, ಇಬಿಎನ್, ಎಲೈಟ್ ಗ್ರೂಪ್, ಇಎಂಎಸ್, ಎವರ್‍ಲೈಟ್, ಫೆನ್ರಿ, ಎಫ್‍ಇಟಿಸಿ, ಎಫ್‍ಎಸ್‍ಪಿ, ಫುಹೊ, ಗುಡ್‍ವಿಲ್, ಎಚ್‍ಟಿ ಗ್ರೀನ್, ಐಇಐ, ಟ್ರೇಡ್ ಇಂಡಿಯಾ, ಕರ್ಮ, ಕೆಟೆಕ್, ಮೆಡಿಮ್ಯಾಜಿಂಗ್, ಮೈಕ್ರೊ-ಸ್ಟಾರ್, ಮಿರ್ಲೆ, ಮಿಟಾಕ್, ಮೊಕ್ಸ, ನೆಸ್ಟರ್, ಪ್ಲಸ್ಟೆಕ್, ಕ್ಯೂಎನ್‍ಎಪಿ, ಶಿನ್ನನ್, ಸೋಲ್ ಅಕ್ವಾ, ಟೊಂಗ್ಯ, ಟ್ರಾನ್ಸೆಂಡ್, ಯೂಬೈಕ್, ಎ-ಟೀಮ್, ತೈವಾನ್ ಎಕ್ಸೆಲೆನ್ಸ್, ಕಂಪ್ಯೂಟೆಕ್ಸ್ ಮತ್ತು ತೈವಾನ್ ಟ್ರೇಡ್. ಟಿಡಬ್ಲ್ಯೂಟಿಸಿ ಸ್ಮಾರ್ಟ್ ಏಷ್ಯಾ 2017ರ ಜೊತೆಯಲ್ಲಿ ಇಂಡಿಯಾ-ತೈವಾನ್ ಸ್ಮಾರ್ಟ್ ಸಿಟಿ ಸಮಿಟ್' ಆಯೋಜಿಸಿತ್ತು.

English summary
SMART ASIA 2017, a three-day event commencing on 23 November at the White Orchid Convention Center, Bengaluru, brought together Taiwan’s expertise and India’s enthusiasm for building intelligent, robust and efficient Smart Cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X