Get Updates
Get notified of breaking news, exclusive insights, and must-see stories!

ಮೊಬಿಕ್ವಿಕ್ ನಿಂದ 90 ಸೆಕೆಂಡುಗಳಲ್ಲಿ Instant ಸಾಲ ಲಭ್ಯ

ನವದೆಹಲಿ, ಅಕ್ಟೋಬರ್ 4: ಭಾರತದ ಅತಿದೊಡ್ಡ ಡಿಜಿಟಲ್ ಹಣಕಾಸು ಸೇವೆಗಳ ವೇದಿಕೆಗಳಲ್ಲಿ ಒಂದಾದ ಮೊಬಿಕ್ವಿಕ್, ಇಂದು 'ಬೂಸ್ಟ್' ಎನ್ನುವ ತನ್ನ ಹೊಸ ಉತ್ಪನ್ನದ ಬಿಡುಗಡೆ ಮಾಡುವ ಬಗ್ಗೆ ಘೋಷಿಸಿದ್ದು, ಇದು ಮೊಬಿಕ್ವಿಕ್ ಬಳಕೆದಾರರಿಗೆ ತ್ವರಿತ ಸಾಲ ಅನುಮೋದನೆ ಮತ್ತು ವಿತರಣೆಯನ್ನು ಒದಗಿಸುತ್ತದೆ.

ಇದು ವರ್ಗದಲ್ಲೇ ಪ್ರಥಮ ಸಾಲ ವಿತರಣಾ ಉತ್ಪನ್ನವಾಗಿದ್ದು, ರೂ 60,000 ದವರೆಗಿನ ಸಾಲವನ್ನು 90 ಸೆಕೆಂಡುಗಳ ಅವಧಿಯಲ್ಲಿ ಮಂಜೂರು ಮಾಡಿ ವಿತರಿಸುತ್ತದೆ.

ಮೊಬಿಕ್ವಿಕ್ ತನ್ನ ಬಳಕೆದಾರರಿಗೆ ಈ ಸೇವೆ ನೀಡಲು ಅನೇಕ ಎನ್‌ಬಿಎಫ್‌ಸಿಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಮೊಬಿಕ್ವಿಕ್ ಬಳಕೆದಾರರ ಮೊಬೈಲ್ ವಾಲೆಟ್‌ನಲ್ಲಿ ಸಾಲದ ಮೊತ್ತ ವಿತರಿಸುತ್ತಿರುವ ಪ್ರಥಮ ವಾಲೆಟ್ ಪ್ಲೇಯರ್ ಆಗಿದೆ.

'ಬೂಸ್ಟ್' ಯಾವುದೇ ಕಾಗದ ಪತ್ರ ಅಥವಾ ಪೂರಕಗಳಿಲ್ಲದೇ ಜಂಜಡರಹಿತವಾಗಿ ಸಾಲ ನೀಡುತ್ತದೆ. ಮೊಬಿಕ್ವೆರ್ ಅಭಿವೃದ್ಧಿಪಡಿಸಿದ 'ಮೊಬಿಸ್ಕೋರ್' ಎಂಬ ಹೊಸ ರಿಸ್ಕ್ ಸ್ಕೋರಿಂಗ್ ಮಾದರಿಯ ಆಧಾರದ ಮೇಲೆ, 30 ಸೆಕೆಂಡುಗಳಲ್ಲಿ ಸಾಲ ಮಂಜೂರಾತಿ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಇಡೀ ಸಾಲದ ಅವಧಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ದತ್ತಾಂಶ ವಿಶ್ಲೇಷಕ ಕಾರಣದಿಂದಾಗಿ ನೈಜ ಸಮಯದ ವಿತರಣಾ ಪ್ರಕ್ರಿಯೆಯು ಸಾಧ್ಯವಾಗಿದೆ.

5,000 ದಿಂದ ರೂ 60,000 ವರೆಗಿನ ಶ್ರೇಣಿ

5,000 ದಿಂದ ರೂ 60,000 ವರೆಗಿನ ಶ್ರೇಣಿ

ಬಳಕೆದಾರರು ಮೊಬಿಕ್ವಿಕ್ ಆಪ್ ಮೂಲಕ ರೂ 5,000 ದಿಂದ ರೂ 60,000 ವರೆಗಿನ ಶ್ರೇಣಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆ್ಯಪ್ ಮೂಲಕ ಸಾಲ ಪಡೆಯುವ ಮೊಬಿಕ್ವಿಕ್ ಬಳಕೆದಾರರು ತಮ್ಮ ಸಾಲದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಆಯ್ಕೆಯನ್ನೂ ಹೊಂದಿದ್ದಾರೆ. ಜಮೆ ಮಾಡಲಾದ ಮೊತ್ತವನ್ನು ತುರ್ತು ಖರೀದಿ, ವಿವಾಹ ವೆಚ್ಚಗಳು, ಪ್ರಯಾಣದ ಯೋಜನೆ, ಹೋಟೆಲ್ ಬುಕ್ಕಿಂಗ್, ತುರ್ತು ವೈದ್ಯಕೀಯ ಖರ್ಚು, ಹಾಗೂ ಆಫ್ಲೈನ್ ಮತ್ತು ಆನ್ಲೈನ್ ಖರೀದಿಗಳ ಪಾವತಿಯೂ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಬಳಸಬಹುದಾಗಿದೆ.

ಸಾಲ ಪ್ರಕ್ರಿಯೆಯು 4 ಸರಳ ಹಂತಗಳನ್ನು ಒಳಗೊಂಡಿದೆ

ಸಾಲ ಪ್ರಕ್ರಿಯೆಯು 4 ಸರಳ ಹಂತಗಳನ್ನು ಒಳಗೊಂಡಿದೆ

ಸಾಲ ಪ್ರಕ್ರಿಯೆಯು 4 ಸರಳ ಹಂತಗಳನ್ನು ಒಳಗೊಂಡಿದೆ:
1. ಮೊಬಿಕ್ವಿಕ್ ಆ್ಯಪಿನಲ್ಲಿ ಬೂಸ್ಟ್ ಆಯ್ಕೆಮಾಡಿ
2. ತ್ವರಿತ ಸಾಲಕ್ಕಾಗಿ ಬೂಸ್ಟ್ ಸಕ್ರಿಯಗೊಳಿಸಿ
3.ಸಾಲದ ಕೊಡುಗೆ ನೋಡಲು ಪ್ಯಾನ್ ಮತ್ತು ಇತರ ಕೆವೈಸಿ ವಿವರಗಳನ್ನು ಭರ್ತಿಮಾಡಿ
4. ಸಾಲ ಕೊಡುಗೆ ಸ್ವೀಕರಿಸಿ ಕೂಡಲೇ ವಿತರಣೆ ಪಡೆಯಿರಿ
***
ಮೊಬಿಕ್ವಿಕ್ ನ ಸಹ-ಸಂಸ್ಥಾಪಕಿ ಮತ್ತು ನಿರ್ದೇಶಕಿ, ಮಿಸ್. ಉಪಾಸನಾ ಟಾಕು, "ಪ್ರತಿಯೊಬ್ಬ ಭಾರತೀಯನಿಗೂ, ಅವರಿರುವ ಸ್ಥಳದ ಹೊರತಾಗಿ ಸಾಲ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಇದು ವರ್ಗದಲ್ಲೇ ಪ್ರಥಮ ವಿಧದ ಉತ್ಪನ್ನವಾಗಿದ್ದು ಇದು ಭಾರತ ಸಾಲ ಪಡೆಯುವ ವಿಧಾನವನ್ನು ಸಂಪೂರ್ಣವಾಗಿ ಕ್ರಾಂತಿಕಾರಿಗೊಳಿಸಿದೆ. ನಮ್ಮ ಅಪ್ರತಿಮ ಉತ್ಪನ್ನವು ಭಾರತದ ಯಾವುದೇ ಮೂಲೆಯಲ್ಲಿರುವ ಭಾರತೀಯರಿಗೆ, ಅಗತ್ಯವಿರುವಾಗ, ಮೊಬಿಕ್ವಿಕ್ ಆ್ಯಪ್ ಮೂಲಕ 90 ಸೆಕೆಂಡುಗಳ ಒಳಗೆ ತ್ವರಿತ ಸಾಲ ಪಡೆಯಲು ಇದು ಪ್ರೋತ್ಸಾಹಿಸುತ್ತದೆ.

ಗ್ರಾಹಕರ ವೈವಿಧ್ಯಮಯ ಸಾಲದ ಅಗತ್ಯತೆ

ಗ್ರಾಹಕರ ವೈವಿಧ್ಯಮಯ ಸಾಲದ ಅಗತ್ಯತೆ

ಕೊಡುಗೆ ನೀಡುವ ಆರಂಭಿಕ ತಿಂಗಳುಗಳಲ್ಲಿ, ನಾವು ಈಗಾಗಲೇ 100 ಸಾವಿರಕ್ಕಿಂತ ಹೆಚ್ಚಿನ ಸಾಲ ನೀಡಿಕೆದಾರರನ್ನು ಹೊಂದಿದ್ದೇವೆ. ಗ್ರಾಹಕರ ವೈವಿಧ್ಯಮಯ ಸಾಲದ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ನಾವು ಸಾಲ ನೀಡಿಕೆಯಲ್ಲಿ ಹೊಸ ಉತ್ಪನ್ನಗಳನ್ನು ಸೇರಿಸಲಿದ್ದೇವೆ. ನಮ್ಮ ಸಾಲ ನೀಡಿಕೆ ನಿಜಕ್ಕೂ ಅದ್ಭುತ ಬದಲಾವಣೆ ತರಲಿದೆ ಮತ್ತು ದೇಶದಲ್ಲಿ ಡಿಜಿಟಲ್ ಹಣಕಾಸಿನ ಸೇವಾ ವಲಯದಲ್ಲಿ ಸ್ಪಷ್ಟ ಮುಂದಾಳಾಗುತ್ತೇವೆ ಎನ್ನುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

ಮೊಬಿಕ್ವಿಕ್ ಆ್ಯಪಿನಲ್ಲಿ ಸಾಲ ಮರುಪಾವತಿಸಬಹುದು

ಮೊಬಿಕ್ವಿಕ್ ಆ್ಯಪಿನಲ್ಲಿ ಸಾಲ ಮರುಪಾವತಿಸಬಹುದು

ಸಾಲದ ಮೊತ್ತವನ್ನು 6 ಮತ್ತು 9 ತಿಂಗಳುಗಳ ಸುಲಭ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಅವರು ಮೊಬಿಕ್ವಿಕ್ ಆ್ಯಪಿನಲ್ಲಿ ಸಾಲ ಮರುಪಾವತಿಸಬಹುದು ಅಥವಾ ಬ್ಯಾಂಕ್ ಖಾತೆಯಿಂದ ಮಾಸಿಕ ಕಂತು ಸ್ವಯಂ ಡೆಬಿಟ್ ಆಗುವಂತೆ ಮೊಬಿಕ್ವಿಕ್ ಪಾಲುದಾರರನ್ನು ಸಕ್ರಿಯಗೊಳಿಸಬಹುದು. ಮೊಬಿಕ್ವಿಕ್ ಬಳಕೆದಾರರು ಸಾಲ ಸೌಲಭ್ಯ ಪಡೆಯಲು ಪ್ಯಾನ್ ಕಾರ್ಡ್ ಮತ್ತು ಇತರ ಕೆವೈಸಿ ವಿವರಗಳೊಂದಿಗೆ ತಮ್ಮ ಕೆವೈಸಿ ಅಪ್ಡೇಟ್ ಮಾಡಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+