ಕ್ಯಾನ್ಸರಿಗೆ ಬಲಿಯಾದ ಮೈಕ್ರೋಸಾಫ್ಟ್ ಸಹ ಸ್ಥಾಪಕ ಪಾಲ್ ಅಲೆನ್

ವಾಷಿಂಗ್ಟನ್, ಅಕ್ಟೋಬರ್ 16 : ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಹೆಸರಾಂತ ಟೆಕ್ನೋಲಜೀಸ್ಟ್, ಮೈಕ್ರೋಸಾಫ್ಟ್ ಸಂಸ್ಥೆ ಸಹ ಸ್ಥಾಪಕ ಪಾಲ್ ಅಲೆನ್ ಅವರು ನಿಧನರಾಗಿದ್ದಾರೆ ಎಂದು ಸಂಸ್ಥೆ ಪ್ರಕಟಣೆ ಹೊರಡಿದೆ.

ಕ್ಯಾನ್ಸರಿನಿಂದ ಬಳಲುತ್ತಿದ್ದ 65 ವರ್ಷ ವಯಸ್ಸಿನ ಪಾಲ್ ಅವರು 1970ರ ದಶಕದಲ್ಲಿ ಬಿಲ್ ಗೇಟ್ಸ್ ಜತೆ ಸೇರಿ ಮೈಕ್ರೋಸಾಫ್ಟ್ ಸಂಸ್ಥೆ ಸ್ಥಾಪಿಸಿದ್ದರು.

ಬಿಳಿ ರಕ್ತಕಣಗಳ ಶಕ್ತಿ ಕುಂದಿಸುವ ಕ್ಯಾನ್ಸರಿನಿಂದ ಬಳಲುತ್ತಿದ್ದ ಪಾಲ್ ಅವರು ಕಳೆದ 9 ವರ್ಷಗಳಿಂದ ನಾನ್ ಹಾಡ್ಕಿನ್ ಲಿಂಫೋಮಾದಿಂದ ಬಳಲುತ್ತಿದ್ದರು. ಮೈಕ್ರೋಸಾಫ್ಟ್ ಅಲ್ಲದೆ ವಲ್ಕಾನ್ ಐಎನ್ ಸಿ ಸ್ಥಾಪಿಸಿದ್ದ ಅವರು, ಬಿಲ್ ಗೇಟ್ಸ್ ಹಾದಿಯಲ್ಲೇ ಸಾಗಿ ಮಹಾದಾನಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದರು.

Microsoft co-founder Paul Allen dies of Cancer

'ಪಾಲ್ ಅವರು ಕೆಲವು ಮ್ಯಾಜಿಕಲ್ ಉತ್ಪನ್ನಗಳನ್ನು ರೂಪಿಸಿದರು, ಇದರಿಂದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಉತ್ತಮ ಗುಣಮಟ್ಟದ ಉತ್ಪನ್ನ ಹೊರತರಲು ಸದಾಕಾಲ ತುಡಿಯುತ್ತಿದ್ದರು, ಮೈಕ್ರೋಸಾಫ್ಟಿನ ಎಲ್ಲಾ ಉದ್ಯೋಗಿಗಳು ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ' ಎಂದು ಮೈಕ್ರೋಸಾಫ್ಟ್ ನ ಸಿಇ ಒ ಸತ್ಯ ನಡೆಲ್ಲಾ ಪ್ರತಿಕ್ರಿಯಿಸಿದ್ದಾರೆ.

ವಿಜ್ಞಾನ ಸಂಶೋಧನೆಗಾಗಿ ಇರುವ ಅಲೆನ್ ವಿದ್ಯಾಸಂಸ್ಥೆ ಸ್ಥಾಪಿಸಿ, ಸಕ್ರಿಯರಾಗಿದ್ದರು. ಸಿಯಾಟಲ್ ಸೀ ಹಾಕ್ಸ್, ಪೋರ್ಟ್ ಲ್ಯಾಂಡ್ ಟ್ರಯಲ್ ಬ್ಲೇಜರ್ಸ್ ನಂಥ ಕ್ರೀಡಾ ತಂಡದ ಮಾಲೀಕರಾಗಿದ್ದರು. ಸಿಯಾಟಲ್ ಸೌಂಡರ್ಸ್ ಸಾಕರ್ ತಂಡವನ್ನು ಹೊಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+