• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Mi 10i ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ, ಫೀಚರ್ಸ್ ಏನು?

|

ನವದೆಹಲಿ, ಜನವರಿ 05: ಭಾರತದಲ್ಲಿ ತನ್ನದೇ ಮಾರುಕಟ್ಟೆಯನ್ನು ಹೊಂದಿರುವ ಶಿಯೋಮಿ ಭಾರತದಲ್ಲಿ ಬಹುನಿರೀಕ್ಷಿತ ಎಂಐ 10i ಅನ್ನು ಬಿಡುಗಡೆ ಮಾಡಿದೆ. ಬಜೆಟ್ ಆಧರಿತ ಹ್ಯಾಂಡ್‌ಸೆಟ್ ಇದಾಗಿದ್ದು, 108 ಎಂಪಿ ಕ್ಯಾಮೆರಾ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

ಮೂರು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುವ ಈ ಹ್ಯಾಂಡ್‌ಸೆಟ್ ಮೂರು ಸ್ಟೋರೇಜ್‌ ಆಯ್ಕೆಯನ್ನು ಸಹ ನೀಡಲಾಗಿದೆ.

ಭಾರತದಲ್ಲಿ ಎಷ್ಟು ಬೆಲೆ?

ಭಾರತದಲ್ಲಿ ಎಷ್ಟು ಬೆಲೆ?

ಹ್ಯಾಂಡ್‌ಸೆಟ್‌ಗಳ ಬೆಲೆ ಭಾರತದಲ್ಲಿ 6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್‌ನ ಮೂಲ ಮಾದರಿಗೆ 20,999 ರೂ. ಹೊಂದಿದೆ. 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್‌ ರೂಪಾಂತರಕ್ಕೆ 21,999 ರೂ. ಆಗಿದ್ದು, 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಮಾದರಿಯನ್ನು ಹೊಂದಿರುವ ಹೈ-ಎಂಡ್ ಮಾದರಿಗೆ 23,999 ರೂ. ನಿಗದಿಯಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ: 7000mAh ಬ್ಯಾಟರಿ

6.67 ಇಂಚಿನ ಡಿಸ್‌ಪ್ಲೇ ಹೊಂದಿದೆ

6.67 ಇಂಚಿನ ಡಿಸ್‌ಪ್ಲೇ ಹೊಂದಿದೆ

Mi 10i 6.67 ಇಂಚಿನ ಪೂರ್ಣ ಎಚ್‌ಡಿ + (1080 x 2400 ಪಿಕ್ಸೆಲ್‌ಗಳು) ವಾಟರ್‌ಡ್ರಾಪ್ ಶೈಲಿಯ ನಾಚ್ ಡಿಸ್ಪ್ಲೇಯ ಜೊತೆಗೆ 120Hz ವರೆಗೆ ಹೊಂದಾಣಿಕೆಯ ಸಿಂಕ್ ರಿಫ್ರೆಶ್ ದರವನ್ನು ಹೊಂದಿದೆ. ಇದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಮೂಲಕ ಮೊಬೈಲ್‌ನ ಮುಂಭಾಗ ಮತ್ತು ಹಿಂಭಾಗದಿಂದ ರಕ್ಷಿಸಲಾಗಿದೆ.

ಮೊಬೈಲ್ ಬ್ಯಾಟರಿ ಹೇಗಿದೆ?

ಮೊಬೈಲ್ ಬ್ಯಾಟರಿ ಹೇಗಿದೆ?

ಇದು 4,820 mAh ಬ್ಯಾಟರಿ ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಚಾರ್ಜ್ ಮಾಡುತ್ತದೆ. ಕೇವಲ 30 ನಿಮಿಷಗಳಲ್ಲಿ 68 ಪ್ರತಿಶತದಷ್ಟು ಚಾರ್ಜ್ ಆಗುವುದು ಎಂದು ಹೇಳಲಾಗಿದೆ.

Mi 10i ಕ್ಯಾಮೆರಾ ಮತ್ತು ಪ್ರೊಸೆಸರ್

Mi 10i ಕ್ಯಾಮೆರಾ ಮತ್ತು ಪ್ರೊಸೆಸರ್

ಈ ಮೊಬೈಲ್ ಅಡ್ರಿನೊ 619 ಜಿಪಿಯು ಮತ್ತು 8 ಜಿಬಿ RAM ನೊಂದಿಗೆ ಜೋಡಿಯಾಗಿರುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G Soc ಅನ್ನು ಹೊಂದಿದೆ. 108 ಎಂಪಿ ಸ್ಯಾಮ್‌ಸಂಗ್ ಎಚ್‌ಎಂ 2 ಸೆನ್ಸಾರ್ ಒಳಗೊಂಡಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ, 120 ಡಿಗ್ರಿ ವೀಕ್ಷಣೆಯೊಂದಿಗೆ 8 ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಇದೆ.

English summary
Xiaomi has finally announced the much awaited Mi 10i for the Indian masses. Price and feature details here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X