Cyber Shield Strikes: ಕೇಂದ್ರ ಗೃಹ ಸಚಿವಾಲಯದಿಂದ "ಸೈಬರ್ ಶೀಲ್ಡ್" ಮಹತ್ವದ ಹೆಜ್ಜೆ, ಹೂಡಿಕೆ ಹಗರಣಗಳಿಗೆ ಬ್ರೇಕ್!
Cyber Shield Strikes: ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಡಿಜಿಟಲ್ ಅರೆಸ್ಟ್ ಎನ್ನುವುದು ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ಇದೀಗ ಪ್ರಮುಖ ನಗರಗಳಲ್ಲಿ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಹೂಡಿಕೆ ವಂಚನೆಗಳು ನಡೆಯುತ್ತಿರುವುದರಿಂದ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (MHA) ಅಲರ್ಟ್ ಆಗಿದೆ. ಸೈಬರ್ ವಂಚನೆ ಜಾಲಗಳ ವಿರುದ್ಧ ದೇಶಾದ್ಯಂತ ಆಕ್ರಮಣಕಾರಿ ದಾಳಿಯನ್ನು ನಡೆಸಿದೆ. ದೆಹಲಿ ಮತ್ತು ಮುಂಬೈನಲ್ಲಿ ನಕಲಿ ವ್ಯಾಪಾರ ಅಪ್ಲಿಕೇಶನ್‌ಗಳು, "ಡಿಜಿಟಲ್ ಅರೆಸ್ಟ್" ಮಾದರಿಯ ಸೈಬರ್ ದಾಳಿಗಳು ಹೆಚ್ಚಾಗಿವೆ. ಅಲ್ಲದೇ ನಕಲಿ ಲಾಭದ ಡ್ಯಾಶ್‌ಬೋರ್ಡ್‌ಗಳ ಮೂಲಕ ಜನರಿಗೆ ಕೋಟ್ಯಾಂತರ ರೂಪಾಯಿ ವಂಚಿಸಲಾಗುತ್ತಿದೆ. ಇತ್ತೀಚಿನ ಪ್ರಕರಣಗಳು ಈ ಸೈಬರ್ ಬೆದರಿಕೆಯ ಬಗ್ಗೆ ಬೆಳಕು ಚಲ್ಲುತ್ತದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದಿರುವ ಪ್ರಕರಣವೊಂದು ಇದಕ್ಕೆ ತಾಜಾ ಉದಾಹರಣೆ. ದೆಹಲಿಯ ಹಿರಿಯ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಆನ್‌ಲೈನ್ ಹೂಡಿಕೆಯ ಮೋಸದ ಜಾಲದಲ್ಲಿ ಸಿಲುಕಿ ಬರೋಬ್ಬರಿ ₹31 ಲಕ್ಷ ಕಳೆದುಕೊಂಡರು. ಮುಂಬೈನಲ್ಲಿ, ಎರಡು ಪ್ರತ್ಯೇಕ ಸೈಬರ್ ವಂಚನೆ ಪ್ರಕರಣಗಳಲ್ಲಿ ಮಹಿಳೆಯರಿಗೆ ಕ್ರಮವಾಗಿ ₹20 ಕೋಟಿ ಮತ್ತು ₹7.87 ಕೋಟಿ ವಂಚಿಸಲಾಗಿದೆ. ಬೇಗ ಹಾಗೂ ದುಪ್ಪಟ್ಟು ಲಾಭದ ಆಸೆಯನ್ನು ತೋರಿಸುವ ಮೂಲಕ ನಕಲಿ ಸೋಷಿಯಲ್ ಮೀಡಿಯಾ ಗ್ರೂಪ್‌ಗಳ ಮೂಲಕ ₹6.03 ಕೋಟಿ ವಂಚಿಸಲಾಗಿದೆ. ಈ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಕುಮಾರ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸೈಬರ್ ವಂಚಕರು ದೇಶಾದ್ಯಂತ 15,000ಕ್ಕೂ ಹೆಚ್ಚು ಮ್ಯೂಲ್ (ಖಾತೆದಾರರಿಗೇ ತಿಳಿಯದಂತೆ ಅಥವಾ ಕೆಲವು ಬ್ಯಾಂಕ್ ಅಕೌಂಟ್ ಇರುವವರ ಸಹ ಪಡೆದ) ಖಾತೆಗಳೊಂದಿಗೆ ಸಂಪರ್ಕ ಹೊಂದಿರುವ ಜಾರ್ಖಂಡ್-ಮುಂಬೈ ಸೈಬರ್ ವಂಚನೆ ಜಾಲ ಬಗ್ಗೆ ಸೈಬರ್ ತನಿಖಾಧಿಕಾರಿಗಳು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶೆಲ್ ಕಂಪನಿಗಳಿಗೆ ಸಂಬಂಧಿಸಿದ ಕೇವಲ 145 ಬ್ಯಾಂಕ್ ಖಾತೆಗಳ ಮೂಲಕ ₹3,200 ಕೋಟಿಗಳಷ್ಟು ಹಣದ ವಹಿವಾಟು ( ಚಲಾವಣೆ) ಆಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಡಿಜಿಟಲ್ ವಂಚನೆಗಳ ವಿರುದ್ಧ ಗೃಹ ಸಚಿವಾಲಯದ ಸೈಬರ್ ರಕ್ಷಾ ಕವಚ!
ಈ ಮಾದರಿಯ ಸೈಬರ್ ವಂಚನೆಗಳ ವಿರುದ್ಧ ಗೃಹ ಸಚಿವಾಲಯ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿದೆ. ಯಾವುದೇ ಕಾರಣಕ್ಕೂ ಈ ರೀತಿಯ ವಂಚನೆಗಳನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. ಅಲ್ಲದೇ ಸೈಬರ್ ವಂಚನೆ ಹಾಗೂ ಸೈಬರ್ ವಂಚನೆ ಜಾಲಗಳನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಬಹು-ಹಂತದ ರಕ್ಷಣೆಯನ್ನು ರೂಪಿಸುತ್ತಿದೆ.
1. ರಾಷ್ಟ್ರೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C): 2020 ರಲ್ಲಿ ಸ್ಥಾಪನೆಯಾದ ಈ ಕೇಂದ್ರವು, ರಾಜ್ಯ ಪೊಲೀಸರಿಗೆ ವಿಧಿವಿಜ್ಞಾನ ಪರಿಕರಗಳು ಮತ್ತು ತನಿಖಾ ಸಮನ್ವಯದೊಂದಿಗೆ ಬೆಂಬಲ ನೀಡುವ ಕೇಂದ್ರ ಸೈಬರ್ ವಾರ್ ರೂಮ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಆಗಿದ್ದು, 1.43 ಲಕ್ಷಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದೆ. ಅಲ್ಲದೇ ದೇಶದ 19 ಕೋಟಿ ಬಳಕೆದಾರರನ್ನು ತಲುಪಿದೆ.
2. ವಂಚನೆಯ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವುದು: I4C ಯ ಶಿಫಾರಸುಗಳ ಮೇರೆಗೆ, 800 ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್‌ಗಳು, 3,200 ವೆಬ್‌ಸೈಟ್‌ಗಳು, 6.69 ಲಕ್ಷ ಸಿಮ್ ಕಾರ್ಡ್‌ಗಳು ಮತ್ತು ಸೈಬರ್ ವಂಚನೆಯ ಜಾಲಗಳಿಗೆ ಲಿಂಕ್ ಮಾಡಲಾದ 1.32 ಲಕ್ಷ IMEI ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
3. ಮ್ಯೂಲ್ ಖಾತೆಗಳ ಸಂಪರ್ಕ ಕಡಿತ: RBI ಮತ್ತು ಬ್ಯಾಂಕ್‌ಗಳೊಂದಿಗೆ ಕೆಲಸ ಗೃಹ ಸಚಿವಾಲಯವು ನಿರಂತರವಾಗಿಸ ಸಂಪರ್ಕದಲ್ಲಿದೆ. ಇದರ ಭಾಗವಾಗಿ ಗೃಹ ಸಚಿವಾಲಯವು ಮ್ಯೂಲ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಹೂಡಿಕೆ ವಂಚನೆಗೆ ಕಾರಣವಾಗುವ ಹಣಕಾಸು ಪೈಪ್‌ಲೈನ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.
4. ಸಾರ್ವಜನಿಕರಿಗೆ ಜಾಗೃತಿ & ಸಹಾಯ: 1930 ಸಂಖ್ಯೆಯ ಸಹಾಯವಾಣಿ, "ಸೈಬರ್ ದೋಸ್ತ್" ಜಾಗೃತಿ ಅಭಿಯಾನಗಳು, ಕಾಲರ್ ಟ್ಯೂನ್‌ಗಳು ಮತ್ತು ಸೋಷಿಯಲ್ ಮೀಡಿಯಾ ಸಂಪರ್ಕದ ಮೂಲಕ ಸಾರ್ವಜನಿಕರು ವಂಚನೆಗೆ ಒಳಗಾಗುವುದನ್ನು ಪತ್ತೆ ಮಾಡುವುದು ಹಾಗೂ ತಪ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ.
5. ತರಬೇತಿ ಹೊಂದಿರುವ ಪೊಲೀಸ್ ಪಡೆಗಳು: ಸೈಟ್ರೇನ್ ಕಾರ್ಯಕ್ರಮದಡಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಸೈಬರ್ ಫೋರೆನ್ಸಿಕ್ಸ್ ಮತ್ತು ಹಗರಣ ತನಿಖೆಯ ಬಗ್ಗೆ ತರಬೇತಿ ನೀಡಲಾಗಿದೆ. ಇದು ಭಾರತದ ಮುಂಚೂಣಿಯ ರಕ್ಷಣೆಯನ್ನು ಬಲಪಡಿಸುತ್ತದೆ.
6. ದುರ್ಬಲರ ರಕ್ಷಣೆ: ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಸೈಬರ್ ಅಪರಾಧ ತಡೆಗಟ್ಟುವಿಕೆ (CCPWC) ಯೋಜನೆಯಡಿಯಲ್ಲಿ, ಆನ್‌ಲೈನ್ ಶೋಷಣೆ ಮತ್ತು ವಂಚನೆಯ ವಿರುದ್ಧ ಉದ್ದೇಶಿತ ಸುರಕ್ಷತಾ ಕ್ರಮಗಳನ್ನು ರೂಪಿಸಲಾಗಿದೆ.
'ವಂಚಕರಿಗೆ ಸುರಕ್ಷಿತ ತಾಣವಿಲ್ಲ'
ಇನ್ನು ಸೈಬರ್ ವಂಚಕರು ಮೋಸದ ವ್ಯಾಪಾರ ಡ್ಯಾಶ್‌ಬೋರ್ಡ್‌ಗಳಿಂದ "ಡಿಜಿಟಲ್ ಅರೆಸ್ಟ್" ಸೇರಿದಂತೆ ವಿವಿಧ ಸೈಬರ್ ಕುತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಹೊಸ ಹೊಸ ಮೋಸ ಜಾಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದರೆ, ಸೈಬರ್ ವಂಚನೆಯನ್ನು ತಡೆಯುವುದಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ರಕ್ಷಣಾ ಕವಚವನ್ನು ಅಭಿವೃದ್ಧಿಪಡಿಸಿದೆ. ಮುಂದುವರಿದ ತಂತ್ರಜ್ಞಾನ, ಸಂಘಟಿತ ಪೋಲೀಸಿಂಗ್ ಮತ್ತು ಸಾಮೂಹಿಕ ಜಾಗೃತಿಯಿಂದ ಭಾರತವು ಸಾರ್ವಜನಿಕರಿಗೆ ಡಿಜಿಟಲ್ ಮತ್ತು ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಿರ್ಣಾಯಕ ಯುದ್ಧವನ್ನು ಎದುರಿಸುತ್ತಿದೆ.
ಗೃಹ ವ್ಯವಹಾರಗಳ ಸಚಿವಾಲಯವು ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೈಬರ್ ಅಪರಾಧದ ವಿರುದ್ಧ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಸೈಬರ್- ಸಂಬಂಧಿತ ಸಂಕಷ್ಟದ ಸಂದರ್ಭದಲ್ಲಿ ನಿಮಗೆ ಸಹಾಯ ಮಾಡಲು ಯಾವಾಗಲೂ ಸಿದ್ಧವಾಗಿದೆ. ಇತ್ತೀಚಿನ ಎಚ್ಚರಿಕೆಗಳು, ಸಲಹೆಗಳು ಮತ್ತು ಜಾಗೃತಿ ಅಭಿಯಾನಗಳ ಕುರಿತು ಹೊಸ ಅಪ್ಡೇಟ್‌ಗಳನ್ನು ತಿಳಿದುಕೊಳ್ಳಲು YouTube, Instagram, Facebook, X, WhatsApp ಹಾಗೂ Dailyhunt ಪ್ಲಾಟ್‌ಫಾರ್ಮ್‌ಗಳಲ್ಲಿ ಸೈಬರ್ ದೋಸ್ತ್ (CyberDost) ಅನ್ನು ಅನುಸರಿಸಿ.
CyberDost ನಿಂದ ಮಾಹಿತಿ ಹಾಗೂ ಸೈಬರ್ ವಂಚಕರ ದಾಳಿಗಳ ಬಗ್ಗೆ ತಿಳಿದುಕೊಂಡು ಜಾಗರೂಕರಾಗಿರಿ ಹಾಗೂ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ











Click it and Unblock the Notifications