ಜನವರಿ 01ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಏರಿಕೆ

ಬೆಂಗಳೂರು, ಡಿಸೆಂಬರ್ 06: ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ತನ್ನ ವಿವಿಧ ವಾಹನಗಳ ಬೆಲೆಯನ್ನು ಏರಿಸಲು ನಿರ್ಧರಿಸಿದೆ. ಪರಿಷ್ಕೃತ ದರ ವಿವರಗಳು ಜನವರಿ 01,2019ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಟಾಟಾ ಮೋಟರ್ಸ್, ಮಹೀಂದ್ರಾ ಹಾಗೂ ಮಹೀಂದ್ರಾ ನಂತರ ಕಳೆದ ಆಗಸ್ಟ್ ತಿಂಗಳಿನಲ್ಲಿ ಮಾರುತಿ ಸುಜುಕಿ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ತೈಲ ಬೆಲೆ ಏರಿಳಿತ, ವಿದೇಶಿ ವಿನಿಮಯದಲ್ಲಿ ವ್ಯತ್ಯಾಸ ಇನ್ನಿತರ ಕಾರಣಗಳನ್ನು ಸಂಸ್ಥೆ ನೀಡಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆಯಾಗಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಕಳೆದ ತ್ರೈಮಾಸಿಕದ ಅಂತ್ಯಕ್ಕೆ ಮಾರುತಿ ಸುಜುಕಿ ಪ್ರಗತಿ ಕುಂಠಿತಗೊಂಡಿತ್ತು. ಇದಕ್ಕೆ ಮಿನಿ ಕಾರು ವಿಭಾಗವೇ ಕಾರಣ ಎನ್ನಬಹುದು. ಆಲ್ಟೋ, ವಾಗನ್ ಆರ್, ಮಧ್ಯಮ ಗಾತ್ರದ ಸಿಯಾಜ್, ಯುಟಿಲಿಟಿ ವಾಹನಗಳಾದ ಎರ್ಟಿಗಾ, ವಿಟಾರಾ ಬ್ರಿಜಾ. ಇತ್ಯಾದಿ ಮಾರಾಟದಲ್ಲಿ ಅಂಥಾ ಏಳಿಗೆ ಕಂಡು ಬಂದಿರಲಿಲ್ಲ.

Maruti Suzuki to hike car prices from 1 January 2019

ಮಾರುತಿ ಸುಜುಕಿ ಎಂಟ್ರಿ ಲೆವಲ್ ಆಲ್ಟೋ 800 ನಿಂದ ಪ್ರೀಮಿಯಂ ಎಸ್ ಕ್ರಾಸ್ ತನಕ 2.53 ಲಕ್ಷ ರು ನಿಂದ 11.45 ಲಕ್ಷ ರು(ಎಕ್ಸ್ ಶೋರೂಮ್ ದರ, ದೆಹಲಿ) ತನಕ ಇದೆ.

ಇಸುಜು ಮೋಟರ್ಸ್ ಇಂಡಿಯಾ ಪ್ರೈ ಲಿಮಿಟೆಡ್, ಟೋಯೋಟಾ ಕಿರ್ಲೋಸ್ಕರ್ ಸಂಸ್ಥೆಗಳು ಇತ್ತೀಚೆಗೆ ವಾಹನಗಳ ಬೆಲೆ ಏರಿಕೆ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+