ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ಪಾದನಾ ವೆಚ್ಚ ಅಧಿಕ, ಮಾರುತಿ ಸುಜುಕಿ ವಾಹನ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 06: ಕೊರೊನಾವೈರಸ್‌ನಿಂದಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದ ದೇಶದ ಅಗ್ರಮಾನ್ಯ ಕಾರು ತಯಾರಕ ಮಾರುತಿ ಸುಜುಕಿ ಕಂಪನಿ (MSI) ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದರೆ, ಆರ್ಥಿಕ ಬಿಕ್ಕಟ್ಟು ಮುಂದುವರೆದಿರುವುದರಿಂದ ಬೆಲೆ ಏರಿಕೆ ಮಾರ್ಗ ಹಿಡಿದಿದೆ.

2020-21 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆಯಾಗಿತ್ತು. ಜೊತೆಗೆ ಬಿಎಸ್ 6 ಮಾನ್ಯತೆ ಸಿಗದ ಹಿನ್ನೆಲೆಯಲ್ಲಿ ಡೀಸೆಲ್ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿರಲಿಲ್ಲ. ಡೀಸೆಲ್ ಕಾರುಗಳನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಲು ಕೂಡಾ ಮುಂದಾಗಿದೆ. ಜೊತೆಗೆ, ಮಾರುತಿ ಸುಜುಕಿಯ ಆಯ್ದ ವಾಹನಗಳ ಎಕ್ಸ್ ಷೋರೂಂ ಬೆಲೆ ಶೇ 1.9ರಷ್ಟು ಏರಿಕೆ ಮಾಡಲಾಗಿದೆ ಎಂದು ಷೇರುಪೇಟೆಗೆ ಸಂಸ್ಥೆ ತಿಳಿಸಿದೆ.

ಸೆಲೆರಿಯೊ ಹೊರತುಪಡಿಸಿ ಎಲ್ಲಾ ಮಾದರಿ ವಾಹನಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಈ ವರ್ಷದಲ್ಲಿ ಮೂರನೇ ಬಾರಿಗೆ ಮಾರುತಿ ಸುಜುಕಿ ಬೆಲೆ ಏರಿಕೆ ಮಾಡಿದೆ. ಈ ಮೊದಲೇ ತಿಳಿಸಿದಂತೆ, ಸೆ.6ರಿಂದ ಆಯ್ದ ವಾಹನಗಳ ಬೆಲೆ ಏರಿಕೆಯಾಗಿದೆ.

Maruti Suzuki hikes prices from today owing to rising input costs

ಇದಕ್ಕೂ ಮುನ್ನ ಜನವರಿ ತಿಂಗಳಲ್ಲಿ ಹಲವು ಮಾಡೆಲ್ ಮೇಲಿನ ಬೆಲೆ 34,000 ರುಪಾಯಿಯಷ್ಟು ಏರಿಕೆ ಮಾಡಲಾಗಿತ್ತು. ನಂತರ ಆಯ್ದ ವಾಹನಗಳ ಎಕ್ಸ್ ಶೋರೂಂ ಮೇಲಿನ ಬೆಲೆ ಶೇ 1.6ರಷ್ಟು ಹೆಚ್ಚಳ ಕಂಡಿತ್ತು.

ಬೆಲೆ ಏರಿಕೆ ಏಕೆ?: ಕಚ್ಚಾವಸ್ತು ಕೊರತೆ, ಸೆಮಿಕಂಡೆಕ್ಟರ್ ಚಿಪ್, ಬಿಡಿ ಭಾಗಗಳ ಕೊರತೆ, ಉತ್ಪದನಾ ವೆಚ್ಚ ಹೆಚ್ಚಳವಾಗಿದ್ದು, ಬೇಡಿಕೆಗೆ ತಕ್ಕ ಮಾರಾಟವಾಗದ ಕಾರಣ ಬೆಲೆ ಏರಿಕೆ ಮಾಡಲಾಗಿದೆ.

''ಉತ್ಪಾದನಾ ವೆಚ್ಚ ನಿರ್ವಹಣಾ ಹೊರೆ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿದೆ'' ಎಂದು ಎಂಎಸ್ಐ( ಮಾರ್ಕೆಟಿಂಗ್) ಕಾರ್ಯಕಾರಿ ನಿರ್ದೇಶಕ ಶಶಾಂಕ್ ವಾಸ್ತವ ಪ್ರತಿಕ್ರಿಯಿಸಿದ್ದಾರೆ.

ಜನಪ್ರಿಯ ಹ್ಯಾಚ್ ಬ್ಯಾಕ್ಸ್ ಸರಣಿಯ ಸ್ವಿಫ್ಟ್ ಹಾಗೂ ಬಲೆನೋಗೆ ಬೇಕಾದ ಚಿಪ್ ಅಲಭ್ಯವಾಗಿರುವುದರಿಂದ ಉತ್ಪದನಾ ಸಾಮರ್ಥ್ಯವನ್ನು ಸೆಪ್ಟೆಂಬರ್ ತಿಂಗಳಲ್ಲಿ ತಗ್ಗಿಸಲು ಸಂಸ್ಥೆ ಮುಂದಾಗಿದೆ. ಕಳೆದ ವಾರ ಪೆಟ್ರೋಲ್ ಮಾದರಿಯ 1,81,754 ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ಇದು ಮಾರುತಿ ಸುಜುಕಿ ಇತಿಹಾಸದಲ್ಲೇ ಅತಿ ದೊಡ್ಡ ರೀಕಾಲ್ ಎನಿಸಿಕೊಂಡಿತ್ತು.

English summary
Country's largets car maker Maruti Suzuki has hiked prices of its cars owing to the rising input costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X