ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುತಿ ಸುಜುಕಿ : ಆಗಸ್ಟ್‌ನಲ್ಲಿ 1.24 ಲಕ್ಷ ಕಾರುಗಳ ಮಾರಾಟ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 01: ದೇಶದ ಅಗ್ರಮಾನ್ಯ ಕಾರು ತಯಾರಕ ಮಾರುತಿ ಸುಜುಕಿ ಕಂಪನಿ ಆಗಸ್ಟ್ 2020 ರ ಮಾರಾಟ ವರದಿಯನ್ನು ಬಿಡುಗಡೆ ಮಾಡಿದೆ. ಆಗಸ್ಟ್ 2019 ಕ್ಕೆ ಹೋಲಿಸಿದರೆ ಈ ವರ್ಷ ಆಗಸ್ಟ್‌ನಲ್ಲಿ ಮಾರಾಟದಲ್ಲಿ ಶೇಕಡಾ 17.1 ರಷ್ಟು ಏರಿಕೆ ಕಂಡುಬಂದಿದೆ ಎಂದು ಕಂಪನಿ ವರದಿ ಮಾಡಿದೆ.

2020 ರ ಆಗಸ್ಟ್‌ನಲ್ಲಿ ಒಟ್ಟು 1,16,704 ಯುನಿಟ್ ಕಾರುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. ಜೊತೆಗೆ 7,920 ಯುನಿಟ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಆದರೆ ಕಳೆದ ವರ್ಷ ಆಗಸ್ಟ್‌ 2019ಕ್ಕೆ ಹೋಲಿಸಿದರೆ ಶೇಕಡಾ 15.3ರಷ್ಟು ಇಳಿಕೆ ಕಂಡಿದೆ.

 ಮಾರುತಿ ಸುಜುಕಿ ಆಲ್ಟೋ ಹೊಸ ದಾಖಲೆ: 40 ಲಕ್ಷ ಮಾರಾಟವಾದ ಭಾರತದ ಮೊದಲ ಕಾರು ಮಾರುತಿ ಸುಜುಕಿ ಆಲ್ಟೋ ಹೊಸ ದಾಖಲೆ: 40 ಲಕ್ಷ ಮಾರಾಟವಾದ ಭಾರತದ ಮೊದಲ ಕಾರು

ಆಲ್ಟೊ ಮತ್ತು ಎಸ್-ಪ್ರೆಸ್ಸೊ ಒಳಗೊಂಡ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ವಿಭಾಗವು 19,709 ಯುನಿಟ್‌ಗಳಲ್ಲಿ ಶೇಕಡಾ 94.7ರಷ್ಟು ಬೆಳವಣಿಗೆಯನ್ನು ಕಂಡಿದೆ. ವ್ಯಾಗನ್ಆರ್, ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಾಲೆನೊ ಮತ್ತು ಡಿಜೈರ್ ಅನ್ನು ಒಳಗೊಂಡಿರುವ ಕಾಂಪ್ಯಾಕ್ಟ್ ವಿಭಾಗವು 61,596 ಯುನಿಟ್‌ಗಳಲ್ಲಿ ಶೇಕಡಾ 14.2ರಷ್ಟು ಬೆಳವಣಿಗೆಯನ್ನು ಕಂಡಿದೆ.

Maruti Suzuki: 17 Percent Growth In August Sale

ಅಂತೆಯೇ, ಯುಟಿಲಿಟಿ ವೆಹಿಕಲ್ಸ್ ವಿಭಾಗದಲ್ಲಿ ಎರ್ಟಿಗಾ, ಎಸ್-ಕ್ರಾಸ್, ಎಕ್ಸ್‌ಎಲ್ 6 ಮತ್ತು ವಿಟಾರಾ ಬ್ರೀಝಾ ಆಗಸ್ಟ್ 2020 ರಲ್ಲಿ ಶೇಕಡಾ 13.5ರಷ್ಟು ಏರಿಕೆ ಕಂಡು 21,030 ಯುನಿಟ್‌ಗಳಿಗೆ ತಲುಪಿದೆ.

English summary
Maruti suzuki on monday said the company clocked total sales of 124,624 units in august 2020, witnessing a growth of 17.1 Percent over year ago period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X