ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಜಾಲತಾಣಗಳ ದೊರೆಯಾಗಲು ಹೊರಟ ಮಾರ್ಕ್ ಜುಕರ್‌ಬರ್ಗ್‌: 700 ಕೋಟಿ ಬಳಕೆದಾರರು

|
Google Oneindia Kannada News

ನವದೆಹಲಿ, ಆಗಸ್ಟ್‌ 12: ಜಗತ್ತಿನ ಸಾಮಾಜಿಕ ಜಾಲತಾಣದ ಹೊಸ ದೊರೆಯಾಗಲು ಹೊರಟಿದ್ದಾರೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌. ಹೀಗಂತ ನಾವು ಹೇಳುತ್ತಿಲ್ಲ ಬದಲಿಗೆ ಅಂಕಿ-ಅಂಶಗಳೇ ಸಾಬೀತು ಪಡಿಸುತ್ತಿವೆ.

ಫೇಸ್‌ಬುಕ್‌ನಲ್ಲಿ ಭಾರೀ ಯಶಸ್ಸು ಕಂಡ ಬಳಿಕ ಜುಕರ್ ಬರ್ಗ್ ಹೊಸ ಫ್ಲಾಟ್‌ಫಾರ್ಮ್ ಅಡಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕದಂಬ ಬಾಹುವನ್ನು ವಿಸ್ತರಿಸಿದರು. ಅದು ಈಗ ಎಷ್ಟರ ಮಟ್ಟಿಗೆ ತಲುಪಿದೆ ಅಂದರೆ ವಿಶ್ವದಲ್ಲಿ ಸಾಮಾಜಿಕ ಜಾಲತಾಣದ ರಾಜನಾಗಲು ಕೇವಲ ಒಂದು ಹೆಜ್ಜೆಯಷ್ಟೇ ಹಿಂದಿದ್ದಾರೆ.

ಆತ್ಮಹತ್ಯೆಗೆ ಮುಂದಾಗಿದ್ದವನ ಜೀವ ಉಳಿಸಿದ ಫೇಸ್‌ಬುಕ್ ಸಿಬ್ಬಂದಿ: ಹೀಗೊಂದು ರೋಮಾಂಚಕ ಘಟನೆಆತ್ಮಹತ್ಯೆಗೆ ಮುಂದಾಗಿದ್ದವನ ಜೀವ ಉಳಿಸಿದ ಫೇಸ್‌ಬುಕ್ ಸಿಬ್ಬಂದಿ: ಹೀಗೊಂದು ರೋಮಾಂಚಕ ಘಟನೆ

ಜುಕರ್‌ಬರ್ಗ್ ನಿಯಂತ್ರಣದಲ್ಲಿ 6.98 ಬಿಲಿಯನ್ ಬಳಕೆದಾರರು

ಜುಕರ್‌ಬರ್ಗ್ ನಿಯಂತ್ರಣದಲ್ಲಿ 6.98 ಬಿಲಿಯನ್ ಬಳಕೆದಾರರು

ಜುಲೈ 2020 ರ ಹೊತ್ತಿಗೆ ಜುಕರ್‌ಬರ್ಗ್‌ನ ನಿಯಂತ್ರಣದಲ್ಲಿರುವ ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 6.98 ಶತಕೋಟಿ ಬಳಕೆದಾರರನ್ನು ಹೊಂದಿವೆ ಎಂದು ಬೈ ಶೇರ್‌ಗಳು ಸಂಗ್ರಹಿಸಿದ ಅಂಕಿ-ಅಂಶಗಳು ಸೂಚಿಸುತ್ತದೆ. ಹೆಚ್ಚಿನ ಸಾಮಾಜಿಕ ನೆಟ್‌ವರ್ಕ್ ಪ್ಲಾಟ್‌ಫಾರ್ಮ್‌ಗಳಿಗೆ, ಒಬ್ಬ ವ್ಯಕ್ತಿಯು ಅನೇಕ ಖಾತೆಗಳನ್ನು ಹೊಂದಬಹುದು ಮತ್ತು ಅವುಗಳನ್ನು ಬಳಕೆದಾರರು ಎಂದು ವರ್ಗೀಕರಿಸಲಾಗಿದೆ.

ಫೇಸ್‌ಬುಕ್‌ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ

ಫೇಸ್‌ಬುಕ್‌ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ

2.6 ಶತಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಒಟ್ಟಾರೆ ಸಾಮಾಜಿಕ ಜಾಲತಾಣಗಳ ಪಟ್ಟಯಲ್ಲಿ ಅಗ್ರಸ್ಥಾನದಲ್ಲಿದೆ (ಜಾಗತಿಕ ಜನಸಂಖ್ಯೆಯ ಶೇ. 34.66%). ವಿಶೇಷವೆಂದರೆ, ಬಳಕೆದಾರರ ವಿಷಯದಲ್ಲಿ ಫೇಸ್‌ಬುಕ್ ಒಟ್ಟಾರೆ ಪ್ರಮುಖ ಸಾಮಾಜಿಕ ನೆಟ್‌ವರ್ಕ್ ವೇದಿಕೆಯಾಗಿದೆ.

ಬ್ಯಾಂಕಿಂಗ್ ಸೇವೆ ವಿಸ್ತರಣೆ: ಹೆಚ್ಚಿನ ಭಾರತೀಯ ಬ್ಯಾಂಕುಗಳೊಂದಿಗೆ ಕೈಜೋಡಿಸಲಿರುವ ವಾಟ್ಸಾಪ್ಬ್ಯಾಂಕಿಂಗ್ ಸೇವೆ ವಿಸ್ತರಣೆ: ಹೆಚ್ಚಿನ ಭಾರತೀಯ ಬ್ಯಾಂಕುಗಳೊಂದಿಗೆ ಕೈಜೋಡಿಸಲಿರುವ ವಾಟ್ಸಾಪ್

200 ಕೋಟಿಗೂ ಹೆಚ್ಚು ವಾಟ್ಸಾಪ್ ಬಳಕೆದಾರರು

200 ಕೋಟಿಗೂ ಹೆಚ್ಚು ವಾಟ್ಸಾಪ್ ಬಳಕೆದಾರರು

ಸುಮಾರು ಎರಡು ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಜುಕರ್‌ಬರ್ಗ್‌ನ ನೆಟ್‌ವರ್ಕ್‌ಗಳ ಅಡಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡು ವರ್ಷಗಳ ಹಿಂದೆ 1.5 ಬಿಲಿಯನ್‌ನಷ್ಟಿದ್ದ ವಾಟ್ಸಾಪ್ ಬಳಕೆದಾರರು ಇದೀಗ ಎರಡು ಬಿಲಿಯನ್‌ನಷ್ಟು ಆಗಿದ್ದಾರೆ ಎಂದು ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಾಪ್ ಕೆಲ ತಿಂಗಳ ಹಿಂದಷ್ಟೇ ತಿಳಿಸಿದೆ. ಇಷ್ಟಾದರೂ ಇದು ಜಾಹೀರಾತುಗಳಿಂದ ಮುಕ್ತವಾಗಿ ಉಳಿದಿದೆ ಮತ್ತು ಅದರ ಬಳಕೆದಾರರಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.

ಇನ್‌ಸ್ಟಾಗ್ರಾಮ್ ಬಳಕೆದಾರರು ಎಷ್ಟು?

ಇನ್‌ಸ್ಟಾಗ್ರಾಮ್ ಬಳಕೆದಾರರು ಎಷ್ಟು?

1.3 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಮೆಸೆಂಜರ್ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದು, ಇನ್‌ಸ್ಟಾಗ್ರಾಮ್ ಜಾಗತಿಕವಾಗಿ ಸುಮಾರು 1.08 ಬಿಲಿಯನ್ ಸಕ್ರಿಯ ಬಳಕೆದಾರರನ್ನು ನಿಯಂತ್ರಿಸಿದೆ ಮತ್ತು ಒಟ್ಟಾರೆ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

ಜುಗರ್‌ಬರ್ಗ್ ಹಿಡಿತದಲ್ಲಿ ಶೇಕಡಾ 47.8ರಷ್ಟು ಬಳಕೆದಾರರು

ಜುಗರ್‌ಬರ್ಗ್ ಹಿಡಿತದಲ್ಲಿ ಶೇಕಡಾ 47.8ರಷ್ಟು ಬಳಕೆದಾರರು

ಪ್ರಮುಖ 15 ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಸಕ್ರಿಯ ಬಳಕೆದಾರರ ಒಟ್ಟು ಸಂಖ್ಯೆಯನ್ನು ಬೈ ಶೇರ್ಸ್ ಸಂಶೋಧನೆಯು ಪರಿಶೀಲಿಸಿದೆ. ಟಾಪ್ 15 ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟು 14.6 ಬಿಲಿಯನ್ ಬಳಕೆದಾರರನ್ನು ನಿಯಂತ್ರಿಸುತ್ತದೆ. ಅದರಲ್ಲಿ ಜುಕರ್‌ಬರ್ಗ್‌ನ ಅಡಿಯಲ್ಲಿರುವ ಸಾಮಾಜಿಕ ನೆಟ್‌ವರ್ಕ್‌ಗಳು ಟಾಪ್ 15 ಪಟ್ಟಿಯಲ್ಲಿ ಶೇಕಡಾ 47.8% ಸಕ್ರಿಯ ಬಳಕೆದಾರರನ್ನು ಅಥವಾ 7.68 ಬಿಲಿಯನ್ ಬಳಕೆದಾರರನ್ನು ಹೊಂದಿವೆ.

English summary
Data gathered by Buy shares indicates social networking platforms under the control of Zuckerberg have access to about 6.98 billion users as of July 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X