ಶಾಪಿಂಗ್‌ಮಾಲ್‌ಗಳಲ್ಲಿ ಈ ಬಾರಿ ದೀಪಾವಳಿ ಸಂಭ್ರಮವಿಲ್ಲ!

ಬೆಂಗಳೂರು, ನವೆಂಬರ್. 02: ಶಾಪಿಂಗ್ ಮಾಲ್ ಗಳಿಗೆ ಈ ಬಾರಿ ದೀಪಾವಳಿ ಸಂಭ್ರಮವಿಲ್ಲ. ಆನ್​ಲೈನ್ ತಾಣಗಳು ವಿವಿಧ ಆಫರ್ ನೀಡಿ ಶಾಪಿಂಗ್ ಮಾಲ್ ಗಳ ವಹಿವಾಟಿಗೆ ಭರ್ಜರಿ ಹೊಡೆತ ನೀಡಿವೆ.

ಮಾಲ್​ಗಳಲ್ಲಿ ಶೇ.46.5 ವ್ಯಾಪಾರ ಕುಂಠಿತವಾಗಿದೆ ಎಂದು 'ಅಸೋಚಾಮ್' ಸಂಸ್ಥೆ ವರದಿ ನೀಡಿದೆ. ದೇಶದ ಪ್ರಮುಖ ನಗರಗಳಲ್ಲಿ ಸಮೀಕ್ಷೆ ನಡೆಸಿದ ಸಂಸ್ಥೆ ವರದಿ ನೀಡಿದೆ. ಮೊದಲು ಸಣ್ಣಪುಟ್ಟ ಅಂಗಡಿಗಳ ವ್ಯಾಪಾರ ಕಡಿತ ಮಾಡಿದ್ದ ಆನ್ ಲೈನ್ ತಾಣಗಳು ಇದೀಗ ಮಾಲ್​ಗಳಿಗೂ ಬಿಸಿ ತಟ್ಟಿಸಿವೆ.[ಕಟಕಟೆಯಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್]

bengaluru

ಮುಂಬೈನ ಮಾಲ್​ಗಳಿಗೆ ಇ- ಕಾಮರ್ಸ್ ನಿಂದಾಗಿ ಶೇ. 51 ನಷ್ಟ ಉಂಟಾಗಿದೆ. ಅಹಮದಾಬಾದ್​ನಲ್ಲಿ ಶೇ. 49, ಕೋಲ್ಕತದಲ್ಲಿ ಶೇ. 42 ವಹಿವಾಟು ಕಡಿಮೆಯಾಗಿದೆ. ಆನ್​ಲೈನ್ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ವಸ್ತುಗಳ ಮಾರಾಟ, ಹೋಮ್ ಡೆಲಿವರಿ ಹಾಗೂ ವಿಶೇಷ ಆಫರ್​ಗಳನ್ನು ನೀಡುತ್ತಿರುವುದು ಮಾಲ್​ಗಳಿಗೆ ಭಾರೀ ಹೊಡೆತ ಬೀಳಲು ಕಾರಣವಾಗಿದೆ. [ದೀಪಾವಳಿ ಹಬ್ಬಕ್ಕೆ ಅತ್ಯುತ್ತಮ 15 ಆನ್ ಲೈನ್ ಆಫರ್ ಗಳು]

ಆನ್​ಲೈನ್ ಮಾರಾಟಕ್ಕೆ ಮನಸೋತ ಗ್ರಾಹಕರು
ಆನ್ ಲೈನ್ ಮಾರುಕಟ್ಟೆಯಲ್ಲಿ ಶೇ. 55 ಸಾವಿರ ಕೋಟಿ ರೂ. ವಹಿವಾಟು ನಡೆದಿದೆ. ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳು, ಪೀಠೋಪಕರಣಗಳು, ಶೂ-ಚಪ್ಪಲಿ, ಗೃಹಾಲಂಕಾರದ ವಸ್ತು ಮತ್ತು ಸುಗಂಧ ದ್ರವ್ಯದ ಮಾರಾಟದಲ್ಲಿ ಭಾರೀ ಹೆಚ್ಚಳವಾಗಿದೆ.

ಫ್ಲಿಪ್ ಕಾರ್ಟ್, ಅಮೆಜಾನ್, ಜಬಾಂಗ್, ಸ್ನಾಪ್ ಡೀಲ್ ಸೇರಿದಂತೆ ಆನ್ ಲೈನ್ ತಾಣಗಳು ಭರಪೂರ ಕೊಡುಗೆ ನೀಡುತ್ತಿವೆ. ಫ್ಲಿಪ್ ಕಾರ್ಟ್ ಬಿಗ್ ಮಿಲಿಯನ್ ಡೇ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ , ಸ್ನಾಪ್ ಡೀಲ್ ದಿವಾಲಿ ದಿಲ್ ಕಿ ಡೀಲ್ ವಾಲಿ ಸೇಲ್ ಹೆಸರಿನಲ್ಲಿ ಗ್ರಾಹರನ್ನು ಸೆಳೆಯುತ್ತಿರುವುದರಿಂದ ಮಾಲ್ ಗಳ ವಹಿವಾಟು ಕುಂಠಿತಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+