ಮೇಡ್ ಇನ್ ಇಂಡಿಯಾ: ಕಿಯಾ ಮೋಟರ್ಸ್ ಎಸ್ ಯುವಿ ಸೆಲ್ಟೋಸ್

ಬೆಂಗಳೂರು, ಆಗಸ್ಟ್ 22: ವಿಶ್ವದ 8 ನೇ ಅತಿದೊಡ್ಡ ಆಟೋಮೇಕರ್ ಕಂಪನಿ, ದಕ್ಷಿಣ ಕೊರಿಯಾದ ಕಿಯಾ ಮೋಟರ್ಸ್, ಮಧ್ಯಮ-ಎಸ್‍ಯುವಿ ವಿಭಾಗದ ಹೊಸ ಸೆಲ್ಟೋಸ್‍ನ ಮೊದಲ ವಾಹನವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದರ ಎಂಟ್ರಿ ಲೆವೆಲ್ ಪೆಟ್ರೋಲ್ ಸ್ಮಾರ್ಟ್‍ಸ್ಟ್ರೀಂ ಜಿ1.5 ಎಚ್‍ಟಿಇ ಗೆ 9.69 ಲಕ್ಷ ರೂಪಾಯಿಗಳಾಗಿದ್ದು, (ಭಾರತದಾದ್ಯಂತ ಎಕ್ಸ್-ಶೋರೂಂ ಬೆಲೆ) ಮತ್ತು ಡೀಸೆಲ್ 1.5 ಸಿಆರ್‍ಡಿಐ ಎಚ್‍ಟಿಎಕ್ಸ್ ಪ್ಲಸ್ ಮತ್ತು ಪೆಟ್ರೋಲ್ ಸ್ಮಾರ್ಟ್‍ಸ್ಟ್ರೀಂ 1.4 ಟಿ-ಜಿಟಿಎಸಕ್ ಮತ್ತು ಜಿಟಿಎಕ್ಸ್ ಪ್ಲಸ್ ಟಾಪ್-ಎಂಡ್ ಶ್ರೇಣಿಯ ವಾಹನದ ಬೆಲೆ 15.99 ಲಕ್ಷ ರೂಪಾಯಿಗಳಾಗಿದೆ(ಭಾರತದಾದ್ಯಂತ ಎಕ್ಸ್-ಶೋರೂಂ ಬೆಲೆ). ಇದು BSVI ಮಾದರಿಯದ್ದಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್‍ಗಳಲ್ಲಿ ಲಭ್ಯವಿದೆ. ಅದೇರೀತಿ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‍ಮಿಶನ್ ಆಯ್ಕೆಗಳಲ್ಲಿಯೂ ಲಭ್ಯವಿದೆ.

ಸೆಲ್ಟೋಸ್‍ಗೆ ದಾಖಲೆ ಪ್ರಮಾಣದ ಬುಕಿಂಗ್ ಆಗಿದೆ. ಅಂದರೆ 32,035 ಗ್ರಾಹಕರು ಮುಂಗಡ ಬುಕಿಂಗ್ ಮಾಡಿದ್ದಾರೆ. ಈ ಮೂಲಕ ಸೆಲ್ಟೋಸ್ ಮಧ್ಯಮ-ಎಸ್‍ಯುವಿ ವಿಭಾಗದಲ್ಲಿ ಒಂದು ಮೈಲಿಗಲ್ಲನ್ನು ಸ್ಥಾಪಿಸಿದೆ.

Made in India: KIA motors launches stylish SUV Seltos

ಮಾರುಕಟ್ಟೆಯಲ್ಲಿ ಸೆಲ್ಟೋಸ್‍ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಿಯಾ ಮೋಟರ್ಸ್ ಇಂಡಿಯಾ ಸನ್ನದ್ಧವಾಗಿದೆ. ಕಂಪನಿಯ ಅನಂತಪುರ ಕಾರು ಉತ್ಪಾದನಾ ಘಟಕದಲ್ಲಿ ವಾರ್ಷಿಕ 3,00,000 ಯೂನಿಟ್‍ಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದೆ. ಇದರಿಂದಾಗಿ ದೇಶದಲ್ಲಿ ಸೆಲ್ಟೋಸ್‍ನ ಬೇಡಿಕೆಯನ್ನು ಉತ್ತಮ ರೀತಿಯಲ್ಲಿ ಪೂರೈಸಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಿಯಾ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಖ್ಯುಂ ಶಿಮ್ ಅವರು, "ಕಿಯಾ ಮೋಟರ್ಸ್‍ಗಷ್ಟೇ ಅಲ್ಲ, ಕಿಯಾ ಮೋಟರ್ಸ್ ಇಂಡಿಯಾಗೆ ಸೆಲ್ಟೋಸ್ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸೆಲ್ಟೋಸ್ ಬಿಡುಗಡೆ ಮೂಲಕ ಕಿಯಾ ಮೋಟರ್ಸ್ ಇಂಡಿಯಾಗೆ ಪಾದಾರ್ಪಣೆ ಮಾಡಿದಂತಾಗಿದೆ. ನಾವು ಈ ಉತ್ಪನ್ನಕ್ಕೆ ನಮ್ಮ ಹೃದಯ ಮತ್ತು ಆತ್ಮವನ್ನು ಹಾಕಿದ್ದೇವೆ.

Made in India: KIA motors launches stylish SUV Seltos

ಸೆಲ್ಟೋಸ್ ತನ್ನ ಪ್ರೀಮಿಯಂ ವೈಶಿಷ್ಟ್ಯತೆಗಳು, ಅತ್ಯಾಕರ್ಷಕವಾದ ವಿನ್ಯಾಸ, ಸುಪ್ರೀಂ ಗುಣಮಟ್ಟ, ಶಕ್ತಿಶಾಲಿ ಇಂಜಿನ್ ಆಯ್ಕೆಗಳು, ಅತ್ಯುತ್ತಮ ಕಾರ್ಯಕ್ಷಮತೆ, ಹೀಗೆ ಹಲವಾರು ವೈಶಿಷ್ಟ್ಯತೆಗಳು ಮತ್ತು ಆಯ್ಕೆಗಳಿಂದಾಗಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಪರಿಸರ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ವಾಹನ ಇದಾಗಿದ್ದು, ಅತ್ಯಾಧುನಿಕ ಇಂಜಿನ್, ಇಂಧನ ಮತ್ತು ಟ್ರಾನ್ಸ್‍ಮಿಶನ್ ಆಯ್ಕೆಗಳನ್ನು ಈ ಸೆಲ್ಟೋಸ್ ಹೊಂದಿದೆ. ಈ ಮಧ್ಯಮ ಎಸ್‍ಯುವಿ ವಿಭಾಗದಲ್ಲಿ ಇದುವರೆಗೆ ಪೂರೈಸಲಾರದಂತಹ ಅಗತ್ಯತೆಗಳನ್ನು ಈ ಸೆಲ್ಟೋಸ್ ಪೂರೈಸುತ್ತದೆ ಎಂಬ ವಿಶ್ವಾಸ ನಮಗಿದೆ. ಈ ಮೂಲಕ ಸೆಲ್ಟೋಸ್ ಭಾರತದಲ್ಲಿ ಮಧ್ಯಮ ಎಸ್‍ಯುವಿ ವಿಭಾಗವನ್ನು ಮರುವ್ಯಾಖ್ಯಾನಗೊಳಿಸಲಿದೆ ಎಂಬ ವಿಶ್ವಾಸವೂ ನಮಗಿದೆ" ಎಂದು ಹೇಳಿದರು.

ಸೆಲ್ಟೋಸ್ BSVI ವೈಶಿಷ್ಟ್ಯತೆಗಳನ್ನು ಹೊಂದಿದೆ. ಅತ್ಯುತ್ಕೃಷ್ಠವಾದ ಕಾರ್ಯಕ್ಷಮತೆ, ಬ್ರ್ಯಾಂಡ್ ನ್ಯೂ ಸ್ಮಾರ್ಟ್‍ಸ್ಟ್ರೀಂ ಇಂಜಿನ್‍ನೊಂದಿಗೆ ಮೂರು ಶ್ರೇಣಿಗಳಲ್ಲಿ ಲಭ್ಯವಿದೆ. 1.5 ಪೆಟ್ರೋಲ್, 1.5 ಡೀಸೆಲ್ ಶ್ರೇಣಿಯಲ್ಲಿದ್ದು, ಈ ಸೆಗ್ಮೆಂಟ್‍ನಲ್ಲಿ ಮೊದಲ 1.4 ಟರ್ಬೋ ಪೆಟ್ರೋಲ್ ಆಗಿದ್ದು, ಕಾರ್ಯಕ್ಷಮತೆ ಮತ್ತು ಸಮರ್ಥತೆಯಲ್ಲಿ ಪರಿಪೂರ್ಣವಾದ ಸಮತೋಲನವನ್ನು ಕಾಯ್ದುಕೊಳ್ಳಲಿದೆ. ಮಿಡ್-ಎಸ್‍ಯುವಿಯಲ್ಲಿ 3 ಆಟೋಮ್ಯಾಟಿಕ್ ಟ್ರಾನ್ಸ್‍ಮಿಶನ್ ಶ್ರೇಣಿಗಳಿವೆ. 7ಡಿಸಿಟಿ, ಐವಿಟಿ ಮತ್ತು 6 ಎಟಿಗಳಾಗಿವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+