LPG Price Cut: ಸೆಪ್ಟೆಂಬರ್ ಆರಂಭದಲ್ಲೇ ಎಲ್‌ಪಿಜಿ ಬಳಕೆದಾರರಿಗೆ ಶುಭಸುದ್ದಿ: ದರ ಭಾರೀ ಇಳಿಕೆ
LPG Cylinder Price Cut: ಗಣೇಶ ಚತುರ್ಥಿಗೂ ಮೊದಲೇ ಅಂದರೆ ಆಗಸ್ಟ್ ಆಗಸ್ಟ್ 1ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿತ್ತು. ಹಾಗೆಯೇ ಇದೀಗ ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ದರ ಇಳಿಕೆಯಾಗಿದೆ. ಹಾಗಾದ್ರೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರಗಳನ್ನು ಪ್ರತಿ ತಿಂಗಳು ಪರಿಷ್ಕರಣೆ ಮಾಡುತ್ತಲಿರುತ್ತವೆ. ಹಾಗೆಯೇ ಇದೀಗ ಸೆಪ್ಟೆಂಬರ್ 1ರಂದು ಕರ್ನಾಟಕದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಎಷ್ಟು ಇಳಿಕೆಯಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ತೈಲ ಮಾರುಕಟ್ಟೆ ಕಂಪನಿಗಳು ಆಗಸ್ಟ್ 31ರ ಭಾನುವಾರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕಡಿತವನ್ನ ಘೋಷಿಸಿದ್ದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 51.50ನಷ್ಟು ಕಡಿಮೆ ಮಾಡಲಾಗಿದೆ. ಈ ಹೊಸ ದರ ದರ ಇಂದಿನಿಂದ ಅಂದರೆ ಸೆಪ್ಟೆಂಬರ್ 1ರಿಂದಲೇ ಅನ್ವಯ ಆಗಿದೆ.
ಪರಿಷ್ಕೃತ ದರ ದೈನಂದಿನ ಕಾರ್ಯಾಚರಣೆಗಳಿಗೆ ಈ ಸಿಲಿಂಡರ್‌ಗಳನ್ನು ಬಳಕೆ ಮಾಡುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಪ್ರಯೋಜ ಆದಂತಾಗಿದೆ. ಆದರೆ, ಗೃಹ ಬಳಕೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ದರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬಹುತೇಕ ಮಂದಿ ಗೃಹಬಳಕೆ ಸಿಲಿಂಡರ್ ದರವೂ ಕೂಡ ಕಡಿಮೆಯಾಗಲಿದೆ ಎನ್ನುವ ಭರವಸೆಯಲ್ಲಿದ್ದರು. ಆದರೆ, ಈ ಭರವಸೆ ಸುಳ್ಳದಂತಾಗಿದೆ.
ಬೆಂಗಳೂರಿನಲ್ಲಿ ದರ ಎಷ್ಟಿದೆ?: ತೈಲ ಮಾರುಕಟ್ಟೆ ಕಂಪನಿಗಳು ಸೆಪ್ಟೆಂಬರ್ 1, 2025ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 51.50 ರೂಪಾಯಿನಷ್ಟು ಕಡಿಮೆ ಮಾಡಿವೆ. ರಾಷ್ಟ್ರ ರಾಜಧಾನು ದೆಹಲಿಯಲ್ಲಿ, ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಪರಿಷ್ಕೃತ ದರ ಈಗ 1,580 ರೂಪಾಯಿ ಆಗಿದೆ. ಇನ್ನು ಕರ್ನಾಟಕದ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ 51.50 ರೂಪಾಯಿ ಇಳಿಕೆಯೊಂದಿಗೆ 1,653 ರೂಪಾಯಿ ಆಗಿದೆ.
Oil marketing companies have revised the prices of commercial LPG gas cylinders. The rate of 19 kg commercial LPG gas cylinders has been reduced by Rs 51.50, effective from tomorrow. In Delhi, the retail sale price of a 19 kg commercial LPG cylinder will be Rs 1580 from September…
— ANI (@ANI) August 31, 2025
ಜುಲೈ 1ರಂದು ವಾಣಿಜ್ಯ ಸಿಲಿಂಡರ್ ದರವನ್ನು 58.50 ರೂಪಾಯಿನಷ್ಟು ಕಡಿತಗೊಳಿಸಲಾಗಿತ್ತು. ಆಗಸ್ಟ್ 1ರಂದು 33.50 ರೂಪಾಯಿ ಕಡಿಮೆ, ಇದಕ್ಕೂ ಮೊದಲು ಜೂನ್‌ನಲ್ಲಿ ಸುಮಾರು 24 ರೂಪಾಯಿ, ಏಪ್ರಿಲ್‌ನಲ್ಲಿ 41 ರೂಪಾಯಿ ಹಾಗೂ ಫೆಬ್ರವರಿಯಲ್ಲಿ 7 ರೂಪಾಯಿನಷ್ಟು ಬೆಲೆಗಳನ್ನು ಇಳಿಸಲಾಗಿತ್ತು. ಆದರೆ, ಮಾರ್ಚ್‌ನಲ್ಲಿ ಮಾತ್ರ 6 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಯಾವ್ಯಾವಾಗ ಇಳಿಕೆ?
* ಸೆಪ್ಟೆಂಬರ್ 1, 2025 - 51.50 ರೂಪಾಯಿ ಇಳಿಕೆ
* ಆಗಸ್ಟ್ - 33.50 ರೂಪಾಯಿ ಇಳಿಕೆ
* ಜುಲೈ - 58.50 ರೂಪಾಯಿ ಇಳಿಕೆ
* ಜೂನ್ - 24 ರೂಪಾಯಿ ಇಳಿಕೆ
* ಏಪ್ರಿಲ್ - 41 ರೂಪಾಯಿ ಇಳಿಕೆ
* ಮಾರ್ಚ್ - 6 ರೂಪಾಯಿ ಹೆಚ್ಚಳ
ಇನ್ನು ಆಗಸ್ಟ್‌ನಲ್ಲಿ, ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಮಾರಾಟದಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು, ಮೂರು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ಗಳಿಗೆ 30,000 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಅನ್ನು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈ ಮೊತ್ತವನ್ನು ಮೂರು ಕಂಪನಿಗಳಿಗೆ 12 ಕಂತುಗಳಲ್ಲಿ ವಿತರಣೆ ಮಾಡಲಾಗಿದ ಎಂದು ತಿಳಿದುಬಂದಿದೆ.












Click it and Unblock the Notifications