LPG Price Cut: ಕೇಂದ್ರ ಬಜೆಟ್‌ ಮಂಡನೆ ದಿನವೇ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ

LPG Cylinder Price Reduced: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು (ಫೆಬ್ರವರಿ 1) ಬಜೆಟ್ ಮಂಡನೆ ಮಾಡಲಿದ್ದಾರೆ. ಇನ್ನು ಬಜೆಟ್‌ ಮಂಡನೆಗೂ ಮುನ್ನವೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಸರ ಇಳಿಕೆಯಾಗಿದೆ. ಹಾಗಾದರೆ ಎಷ್ಟು ಇಳಿಕೆಯಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳಿನಂತೆ ಇಂದು(ಫೆಬ್ರವರಿ 1) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಿವೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು ಶನಿವಾರದಿಂದ ಜಾರಿಗೆ ಬರುವಂತೆ 7 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ 1797 ರೂಪಾಯಿಗಳಷ್ಟಿದೆ.

LPG Cylinder Price Cut on the Day of Union Budget Presentation

19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಇತರ ವ್ಯವಹಾರಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಆದ್ದರಿಂದ ಈ ಬೆಲೆ ಪರಿಷ್ಕರಣೆಯು ದೈನಂದಿನ ಕಾರ್ಯಾಚರಣೆಗಳಿಗಾಗಿ ಈ ಸಿಲಿಂಡರ್‌ಗಳನ್ನು ಬಳಸುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಸತತವಾಗಿ ವಾಣಿಜ್ಯ ಸಿಲಿಂಡರ್ ಬೆಲೆ ದರ ಏರಿಕೆಯಾದರೆ ಹೋಟೆಲ್ ತಿಂಡಿ ದರ ಸೇರಿದಂತೆ ಇನ್ನಿತರ ವಸ್ತುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. 2024ರ ಡಿಸೆಂಬರ್‌ನಲ್ಲಿ 16 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 62 ರೂಪಾಯಿಗಳಷ್ಟು ಏರಿಕೆ ಆಗಿತ್ತು.

ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳ ಆಧಾರದ ಮೇಲೆ ಎಲ್‌ಪಿಜಿ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಆಗುತ್ತವೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ ದರಗಳನ್ನು ಪರಿಷ್ಕರಣೆ ಮಾಡುತ್ತವೆ. ಹೊಸ ದರಗಳು ತಿಂಗಳ ಮೊದಲ ದಿನದಿಂದಲೇ ಅನ್ವಯ ಆಗುತ್ತವೆ. ಹಾಗೆಯೇ ಇಂದು ಕೂಡ ಪರಿಷ್ಜರಣೆ ಮಾಡಲಾಗಿದೆ.

ಪ್ರಮುಖ ನಗರಗಗಳಾದ 19 ಕೆಜಿ ಸಿಲಿಂಡರ್ ಬೆಲೆಯನ್ನು ನೋಡೋದಾದ್ರೆ, ನವದೆಹಲಿ 1,797 ರೂಪಾಯಿ, ಕೋಲ್ಕತ್ತಾ 1,907 ರೂಪಾಯಿ, ಮುಂಬೈ 1,749 ರೂಪಾಯಿ, ಚೆನ್ನೈ 1,959 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ ಸಿಲಿಂಡರ್ ದರಗಳನ್ನು ನೋಡೋದಾದದರೆ, ಗೃಹ ಬಳಕೆ (14.2 ಕೆಜಿ) 805.50 ರೂಪಾಯಿ, ವಾಣಿಜ್ಯ ಬಳಕೆ (19 ಕೆಜಿ) 1,874 ರೂಪಾಯಿ (6 ರೂ. ಇಳಿಕೆ), ಗೃಹ ಬಳಕೆ (5 ಕೆಜಿ) 300.50 ರೂಪಾಯಿ,
ವಾಣಿಜ್ಯ ಬಳಕೆ (47.5 ಕೆಜಿ) 4,682 ರೂಪಾಯಿ (15 ರೂ. ಇಳಿಕೆ) ಆಗಿದೆ.

ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಹಳೆಯ ದರಗಳೇ ಮುಂದುವರಿಯಲಿವೆ. ಗೃಹಬಳಕೆ ಸಿಲಿಂಡರ್ ಬೆಲೆ ಈ ವರ್ಷದ ಆಗಸ್ಟ್‌ನಿಂದ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+