ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಯಲ್ ಎಸ್ಟೇಟ್ ಕ್ಷೇತ್ರದ ಅತಿ ಶ್ರೀಮಂತ ಎನಿಸಿದ ಬಿಜೆಪಿ ಶಾಸಕ

|
Google Oneindia Kannada News

ಮುಂಬೈ, ನವೆಂಬರ್ 23: 2018ನೇ ಸಾಲಿನ ದೇಶದ ಅತಿ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯನ್ನು ಗ್ರೊಹೆ ಹರೂನ್ ಸಂಸ್ಥೆ ಪ್ರಕಟಿಸಿದೆ. ಬಿಜೆಪಿ ಶಾಸಕ, ಲೋಧಾ ಸಂಸ್ಥೆಯ ಸಂಸ್ಥಾಪಕ ಮಂಗಲ್ ಪ್ರಭಾತ್ ಲೋಧಾ ಅವರು ನಂ.1 ಸ್ಥಾನಕ್ಕೇರಿದ್ದಾರೆ.

ಮುಂಬೈನ ಮಲಬಾರ್ ಹಿಲ್ ಕ್ಷೇತ್ರದ ಶಾಸಕ 62 ವರ್ಷ ವಯಸ್ಸಿನ ಲೋಧಾ ಅವರ ರಿಯಲ್ ಎಸ್ಟೇಟ್ ವ್ಯವಹಾರ ಶೇ.22 ರಷ್ಟು ಪ್ರಗತಿ ಕಂಡಿದೆ. 27,150 ಕೋಟಿ ರು ಗಳಿಕೆಯೊಂದಿಗೆ ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆಎಂದು GROHE Hurun India ರಿಯಲ್ ಎಸ್ಟೇಟ್ ರಿಚ್ ಲಿಸ್ಟ್‌ನಲ್ಲಿ ಹೇಳಲಾಗಿದೆ.

ದಶಕಗಳ‌ ಹಿಂದೆ ಮುಂಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದ್ದ ಮಂಗಲ್ ಅವರು, ಈಗ ವಾಣಿಜ್ಯ ನಗರಿಯಲ್ಲಿ 75 ಅಂತಸ್ತಿನ ಟ್ರಂಪ್ ಟವರ್ ನಿರ್ಮಿಸುತ್ತಿದ್ದಾರೆ. ಮಂಗಲ್ ಅವರ ನಂತರದ ಸ್ಥಾನದಲ್ಲಿ ಎಂಬೆಸ್ಸಿ ಗ್ರೂಪ್‌ ನ ಜಿತೇಂದ್ರ ವಿರ್ವಾಣಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಲೋಧಾ

ರಿಯಲ್ ಎಸ್ಟೇಟ್ ಉದ್ಯಮಿ ಲೋಧಾ

ಕಳೆದ ವರ್ಷ 27,150 ಕೋಟಿ ರು ಗಳಿಕೆಯೊಂದಿಗೆ ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆಎಂದು GROHE Hurun India ರಿಯಲ್ ಎಸ್ಟೇಟ್ ರಿಚ್ ಲಿಸ್ಟ್‌ನಲ್ಲಿ ಹೇಳಲಾಗಿದೆ.

2ನೇ ಸ್ಥಾನದಲ್ಲಿ ಬೆಂಗಳೂರಿನ ಜಿತೇಂದ್ರ

2ನೇ ಸ್ಥಾನದಲ್ಲಿ ಬೆಂಗಳೂರಿನ ಜಿತೇಂದ್ರ

ರಿಯಲ್ ಎಸ್ಟೇಟ್ ಉದ್ಯಮಿಗಳ ಪೈಕಿ ಅತಿ ಶ್ರೀಮಂತರೆನಿಸಿರುವವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಬೆಂಗಳೂರು ಮೂಲದ ಎಂಬೆಸ್ಸಿ ಸಮೂಹ ಸಂಸ್ಥೆಯ ಮಾಲೀಕ ಜಿತೇಂದ್ರ ವಿರ್ವಾನಿ(52) ಇದ್ದಾರೆ. ಜಿತೇಂದ್ರ ಅವರ ಗಳಿಕೆ 23,160 ಕೋಟಿ ರು

ಟಾಪ್ 100 ಉದ್ಯಮಿಗಳ ಗಳಿಕೆ ಮೊತ್ತ

ಟಾಪ್ 100 ಉದ್ಯಮಿಗಳ ಗಳಿಕೆ ಮೊತ್ತ

ಅತಿ ಶ್ರೀಮಂತ 100 ಉದ್ಯಮಿಗಳ ಮೊತ್ತ 2,36,610 ಕೋಟಿ ರು(32.7 ಬಿಲಿಯನ್ ಡಾಲರ್ ) ನಷ್ಟಾಗುತ್ತದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇ27ರಷ್ಟು ಏರಿಕೆಯಾಗಿದೆ. ಒಟ್ಟು ಸಾಲದ ಪ್ರಮಾಣ 1.25 ಲಕ್ಷ ಕೋಟಿ ರು ನಷ್ಟಿದೆ.

ಮಹಿಳಾ ರಿಯಲ್ ಎಸ್ಟೇಟ್ ಉದ್ಯಮಿ

ಮಹಿಳಾ ರಿಯಲ್ ಎಸ್ಟೇಟ್ ಉದ್ಯಮಿ

ಮಹಿಳಾ ಉದ್ಯಮಿಗಳ ಪೈಕಿ ಡಿಎಲ್ ಎಫ್ ನ ರೇಣುಕಾ ತಲ್ವಾರ್ ಅವರು ಟಾಪ್ 10 ಪಟ್ಟಿಯಲ್ಲಿದ್ದು 8 ನೇ ಸ್ಥಾನದಲ್ಲಿದ್ದಾರೆ. ಟಾಪ್ 100 ಅತಿ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪೈಕಿ 78% ಮಂದಿ ಮುಂಬೈ, ನವದೆಹಲಿ ಹಾಗೂ ಬೆಂಗಳೂರಿನವರಾಗಿದ್ದಾರೆ.

English summary
Mangal Prabhat Lodha, BJP MLA from Malabar hills, Mumbai, who helms real estate company Lodha Group, has topped the Grohe Hurun India Real Estate Rich list 2018 with a total wealth of ₹27,150 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X