ಆಸ್ತಿ ಜತೆ ಆಧಾರ್ ಲಿಂಕ್, ಸಂಸತ್ತಿನಲ್ಲಿ ಸತ್ಯ ಬಿಚ್ಚಿಟ್ಟ ಸರ್ಕಾರ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಡಿಸೆಂಬರ್ 20: ಆಸ್ತಿ ವಹಿವಾಟಿಗೆ ಆಧಾರ್ ಸಂಪರ್ಕ ಕಲ್ಪಿಸಲಾಗುತ್ತದೆ. ಇದರಿಂದ ಅಕ್ರಮ ಆಸ್ತಿ, ಅವ್ಯವಹಾರಕ್ಕೆ ಕಡಿವಾಣ ಬೀಳಲಿದೆ ಎಂದು ನಂಬಿದವರಿಗೆ ಆಘಾತವಾಗಿದೆ ಇಂಥ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸಂಸತ್ತಿನಲ್ಲಿ ಸರ್ಕಾರ ಸತ್ಯ ಒಪ್ಪಿಕೊಂಡಿದೆ.

ಬ್ಯಾಂಕ್ ಖಾತೆ ಜೊತೆ ಆಧಾರ್ ಜೋಡಣೆ ದಿನಾಂಕ ಮಾರ್ಚ್ 31ಕ್ಕೆ ಮುಂದೂಡಿಕೆ

'ಬ್ಯಾಂಕ್‌ ಖಾತೆ, ಮೊಬೈಲ್‌ ಸಂಖ್ಯೆಗಳ ರೀತಿಯಲ್ಲಿಯೇ ಆಸ್ತಿ ನೋಂದಣಿಗೂ ಆಧಾರ್‌ ಸಂಪರ್ಕ ಕಡ್ಡಾಯಗೊಳಿಸುವುದು ನಿಜಕ್ಕೂ ಒಳ್ಳೆಯ ಕಲ್ಪನೆ' ಎಂದು ಸಚಿವ ಹರ್‌ದೀಪ್‌ ಸಿಂಗ್‌ ಪುರಿ ನವೆಂಬರ್‌ ತಿಂಗಳಿನಲ್ಲಿ ಹೇಳಿದ್ದರು ಇದರ ಜತೆಗೆ ಆಸ್ತಿ ವ್ಯವಹಾರಕ್ಕೂ ಆಧಾರ್ ಜೋಡಿಸಲಾಗುವುದು ಎಂಬ ಸುಳಿವು ನೀಡಿದ್ದರು. ಆದರೆ, ಈಗ ಸಂಸತ್ತಿನ ಅಧಿವೇಶನದಲ್ಲಿ ಇಂಥ ಯೋಜನೆ ಸರ್ಕಾರ ಮಾಡುತ್ತಿಲ್ಲ ಎಂದಿದ್ದಾರೆ.

ಫ್ಲೈಟ್ ಟಿಕೆಟ್ ಜತೆ ಆಧಾರ್ ಜೋಡಣೆ ಹೇಗೆ? ಏಕೆ?

Linking Aadhaar to property deals: No proposal as of now says Govt

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ಭೂ ಸಂಪನ್ಮೂಲ ಇಲಾಖೆ ಬಗ್ಗೆ ಚರ್ಚೆ ನಡೆಸುತ್ತಿವೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಇದೆಲ್ಲವೂ ಬರೀ ಗಾಳಿಸುದ್ದಿ ಎಂದು ಸಾಬೀತಾಗಿದೆ.

ಆಸ್ತಿಗೂ ಆಧಾರ್ ಜೋಡಣೆ ಕಡ್ಡಾಯ ಮಾಡುವ ಕಾಲ ದೂರವಿಲ್ಲ!

ಆಧಾರ್‌ ಜೋಡಣೆಯೊಂದಿಗೆ ಬೇನಾಮಿ ಆಸ್ತಿಗಳಿಗೆ ಕಡಿವಾಣ ಬೀಳಲಿದ್ದು, ಭೂ ಮತ್ತು ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿತ್ತು.

ಈ ಸುದ್ದಿ ಭೂಗಳ್ಳರಲ್ಲಿ ನಡುಕ ಹುಟ್ಟಿಸಿತ್ತು. ಭೂ ವಹಿವಾಟುಗಳ ಅಕ್ರಮಕ್ಕೆ ತೆರೆ ಬೀಳಲಿದೆ ಎಂಬ ಆಶಾಭಾವನೆಯನ್ನು ಜನಸಾಮಾನ್ಯರಲ್ಲಿ ಹುಟ್ಟುಹಾಕಿತ್ತು. ಆದರೆ, ಎಲ್ಲವೂ ಟುಸ್ ಆಗಿದೆ.

ಕೆಲ ರಾಜ್ಯಗಳಲ್ಲಿ ನಿರ್ದಿಷ್ಟ ಮೌಲ್ಯದ ಆಸ್ತಿ ನೋಂದಣಿಗೆ ಪ್ಯಾನ್‌ ವಿವರ ಕಡ್ಡಾಯ ಮಾಡಲಾಗಿದೆ. ಆದರೂ, ಹಲವು ವಹಿವಾಟು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.

ಕೆಲ ರಾಜ್ಯಗಳಲ್ಲಿ ನಿರ್ದಿಷ್ಟ ಮೌಲ್ಯದ ಆಸ್ತಿ ನೋಂದಣಿಗೆ ಪ್ಯಾನ್‌ ವಿವರ ಕಡ್ಡಾಯ ಮಾಡಲಾಗಿದೆ. ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ದಂಧೆ ಮೇಲೆ ಕಡಿವಾಣ ಹಾಕಲು ರೇರಾ ಕಾಯ್ದೆ ಜಾರಿಯಲ್ಲಿದೆ. ರೇರಾ ಮಾದರಿ ಕಾಯ್ದೆ ಇನ್ನೂ ಕೆಲ ರಾಜ್ಯಗಳಲ್ಲಿ ಬಲವಾಗಿದೆ. ನೋಂದಣಿ ಈಗ ಆನ್ ಲೈನ್ ಆಗಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಆಸ್ತಿ ವ್ಯವಹಾರಗಳ ಜತೆ ಆಧಾರ್ ಲಿಂಕ್ ಘೋಷಣೆಯಿಂದ ಹಿಂದೆ ಸರಿಯುತ್ತಿದೆ.

1908ರ ಆಸ್ತಿ ನೋಂದಣಿ ಕಾಯ್ದೆ ಬಳಸಿಕೊಂಡು ಬಂದು ಬೇನಾಮಿ ಆಸ್ತಿಗಳ ಮೇಲೆ ಸರ್ಕಾರ ಕಣ್ಣಿಡಲಿದೆ ಎಂಬ ನಿರೀಕ್ಷೆ ಇನ್ನೂ ಸಾರ್ವಜನಿಕರಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Parliament has been informed that there is no proposal to make Aadhaar linking mandatory for property transactions. To a query on the issue, the Union Minister of State (Independent Charge) for Housing and Urban Affairs Hardeep Singh Puri said, "At present, there is no proposal to make Aadhaar linkage mandatory in property transactions."

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ