Linkedin ಸಮೀಕ್ಷೆ 2019: ಟಾಪ್ 25 Startups ಪೈಕಿ ಓಯೋ ನಂ.1
ಬೆಂಗಳೂರು, ಸೆ. 06: ವಂಚನೆ ಪ್ರಕರಣವೊಂದರಲ್ಲಿ ಆನ್ ಲೈನ್ ಮೂಲಕ ಹೋಟೆಲ್ ರೂಮ್ ಬುಕ್ ಮಾಡುವ ಓಯೋ(OYO) ಅಪ್ಲಿಕೇಷನ್ ವ್ಯವಸ್ಥೆ ಸ್ಥಾಪಕ, ಸಿಇಒ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡ ಸುದ್ದಿ ಬೆನ್ನಲ್ಲೇ ಲಿಂಕ್ಡಿನ್ ಸಮೀಕ್ಷೆಯಲ್ಲಿ ಓಯೋ ಅಗ್ರಸ್ಥಾನಕ್ಕೇರಿರುವ ಸುದ್ದಿಯೂ ಬಂದಿದೆ.
ಕಳೆದ ವರ್ಷದಿಂದ ವಿಶ್ವದ ಟಾಪ್ 50 ನವೋದ್ಯಮ ಸಂಸ್ಥೆಗಳ ಸಮೀಕ್ಷೆ ನಡೆಸಿ ಟಾಪ್ 25 ಪಟ್ಟಿಯನ್ನು ಉದ್ಯೋಗಿ, ಉದ್ಯೋಗದಾತರ ನೆಚ್ಚಿನ ತಾಣ ಲಿಂಕ್ಡಿನ್ ನೀಡುತ್ತಿದೆ. ಈ ವರ್ಷ ಲಿಂಕ್ಡಿನ್ ನೀಡಿರುವ ಟಾಪ್ 25 ಸ್ಟಾರ್ಟಪ್ ಗಳು 18000 ಉದ್ಯೋಗ ಸೃಷ್ಟಿಸಿದೆ. ಜುಲೈ 01, 2018ರಿಂದ ಜೂನ್ 30, 2019ರ ಅವಧಿಯಲ್ಲಿ ಕಲೆ ಹಾಕಿದ ಮಾಹಿತಿ ಅನ್ವಯ ಈ ಪಟ್ಟಿ ತಯಾರಿಸಲಾಗಿದೆ.
OYO ಸಿಇಒ ರಿತೇಶ್ ವಿರುದ್ಧ 420 ಕೇಸ್ ಹಾಕಿದ ಬೆಂಗಳೂರು ಪೊಲೀಸರು
ಭಾರತದ ನವೋದ್ಯಮಗಳ ಪಟ್ಟಿಯಲ್ಲದೆ, ಆಸ್ಟ್ರೇಲಿಯಾ, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಮೆಕ್ಸಿಕೋ, ಜಪಾನ್, ಬ್ರೆಜಿಲ್, ಯುಕೆ ಹಾಗೂ ಯುಎಸ್ ಮತ್ತು ನೆದರ್ಲೆಂಡ್ಸ್ ದೇಶಗಳಲ್ಲೂ ಈ ರೀತಿ ಸಮೀಕ್ಷೆ ನೀಡಿ ಫಲಿತಾಂಶ ನೀಡಿದೆ.
ಟಾಪ್ ಟೆನ್ ಪಟ್ಟಿಯಲ್ಲಿ ಓಯೋ ಹೋಟೆಲ್ಸ್ ಅಂಡ್ ಹೋಮ್ಸ್, ಬೆಂಗಳೂರಿನ ಕ್ಯೂರ್.ಫಿಟ್, ಟ್ಯಾಪ್ ಚೀಫ್ ಮುಂತಾದ ಸಂಸ್ಥೆಗಳಿವೆ.
ವ್ಯವಹಾರಯೋಗ್ಯ ಎನಿಸಿರುವ ಟಾಪ್ 25 ಭಾರತದ ಸ್ಟಾರ್ಟಪ್ಸ್ :
1. ಓಯೋ ಹೋಟೆಲ್ಸ್ ಅಂಡ್ ಹೋಮ್ಸ್
2. ಕ್ಯೂರ್. ಫಿಟ್
3. ಟ್ಯಾಪ್ ಛೀಫ್
4. ರೇಜರ್ ಪೇ
5 ಬೌನ್ಸ್
6. ಪ್ಲೇಮೆಂಟ್
7. ರಿವಿಗೋ
8. Acko
9. ಎಂಫೈನ್
10. ಇಂಟರ್ವ್ಯೂ ಬಿಟ್
11. ಉಡಾನ್
12 ಲಿಟ್ಲ್ ಬ್ಲಾಕ್ ಬುಕ್
13. ಡನ್ಜೋ
14. ಅಪ್ ಗ್ರಾಡ್
15. ನೈನ್ ಲೀಪ್ಸ್
16. ಸಿಂಪ್ಲ್
17. ಮೀಶೋ
18. ಡಿಜಿಟ್ ಇನ್ಶೂರೆನ್ಸ್
19. ಕರ್ಜಾ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್
20. ಸ್ಟಾಶ್ ಫಿನ್
21. ಪ್ರಿಸ್ಟಿನ್ ಕೇರ್
22. ವೈಟ್ ಹ್ಯಾಟ್ ಜ್ಯೂ.
23. ಬಿಜೊಂಗೋ
24. ಸ್ಮಾರ್ಟ್ ವರ್ಕ್ಸ್
25. ಸ್ಟಾಂಜಾ ಲಿವಿಂಗ್.