ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ವೃತ್ತಿಪರರ ಹೃದಯವನ್ನು ಗೆದ್ದ ಲಿಂಕ್ಡ್ ಇನ್

By Mahesh
|
Google Oneindia Kannada News

ಬೆಂಗಳೂರು, ಜುಲೈ 20, 2018: ವಿಶ್ವದಾದ್ಯಂತ 562 ದಶಲಕ್ಷ ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾಗಿರುವ ಲಿಂಕ್ಡ್ ಇನ್ ನ ಸದಸ್ಯರ ಸಂಖ್ಯೆ ಭಾರತದಲ್ಲಿ 50 ದಶಲಕ್ಷದ ಗಡಿ ದಾಟಿದೆ.

ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅಮೇರಿಕಾದ ಹೊರಗೆ ಹೆಚ್ಚು ಮಾರುಕಟ್ಟೆಯನ್ನು ಹೊಂದಿರುವ ಲಿಂಕ್ಡ್ ಇನ್ ಭಾರತದಲ್ಲಿ ನವೆಂಬರ್ 2009 ರಲ್ಲಿ ಕೇವಲ 3.4 ದಶಲಕ್ಷ ಸದಸ್ಯರನ್ನು ಹೊಂದಿತ್ತು. ಅಲ್ಲಿಂದ ಇಲ್ಲಿವರೆಗೆ ಇದರ ಸದಸ್ಯರ ಸಂಖ್ಯೆ 50 ದಶಲಕ್ಷದ ಗಡಿಯನ್ನು ದಾಟಿದೆ. ಕಳೆದ ನಾಲ್ಕು ವರ್ಷದಲ್ಲಿ ಭಾರತದ ಸದಸ್ಯರ ಸಂಖ್ಯೆ ದ್ವಿಗುಣವಾಗಿದೆ.

ಉದ್ಯಮ, ಉದ್ಯೋಗ ಮತ್ತು ಕೌಶಲ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸದಸ್ಯರನ್ನು ಹೊಂದುವ ಮೂಲಕ ಲಿಂಕ್ಡ್ ಇನ್ ಭಾರತದಲ್ಲಿ ವೈವಿಧ್ಯಮಯ ಸದಸ್ಯರನ್ನು ಹೊಂದಿದಂತಾಗಿದೆ. ಈ ಕ್ಷೇತ್ರಗಳಲ್ಲಿರುವ ಸದಸ್ಯರು ಪ್ರತಿದಿನ ಈ ಲಿಂಕ್ಡ್ ಇನ್ ವೇದಿಕೆಯನ್ನು ಬಳಸಿಕೊಂಡು ಸಂವಹನ ನಡೆಸುತ್ತಾರೆ ಮತ್ತು ವಿಶ್ವದಲ್ಲಿ ಅತಿದೊಡ್ಡ ಪ್ರತಿಭೆಯ ಮಾರುಕಟ್ಟೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ಲಕ್ಷಾಂತರ ವೃತ್ತಿಪರರ ಹೃದಯವನ್ನು ಗೆದ್ದ ಲಿಂಕ್ಡ್ ಇನ್

ಲಕ್ಷಾಂತರ ವೃತ್ತಿಪರರ ಹೃದಯವನ್ನು ಗೆದ್ದ ಲಿಂಕ್ಡ್ ಇನ್

ಈ ಹೊಸ ಮೈಲುಗಲ್ಲು ಸ್ಥಾಪಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಲಿಂಕ್ಡ್ ಇನ್ ನ ಭಾರತ ಮತ್ತು ಇಂಟರ್ ನ್ಯಾಷನಲ್ ಪ್ರಾಡಕ್ಟ್ ನ ಮ್ಯಾನೇಜರ್ ಅಕ್ಷಯ್ ಕೊತಾರಿ ಅವರು, ''ಭಾರತದ ಪ್ರಸ್ತುತದ ಭಾವನೆ ಸ್ಥಿರತೆಯಿಂದ ಧನಾತ್ಮಕದೆಡೆಗೆ ಸಾಗಿದೆ. ಇದು ದೇಶದ ಅತ್ಯುತ್ತಮ ಪ್ರಗತಿಗೆ ನಾಂದಿ ಹಾಡಿದೆ. ಸ್ಥಳೀಯ ವಿಧಾನಗಳನ್ನು ನಾವು ನೀಡಿದ ಪರಿಣಾಮ ನಾವು ನಮ್ಮ ಸದಸ್ಯರ ಸಂಖ್ಯೆಯನ್ನು 50 ದಶಲಕ್ಷ ತಲುಪಲು ಸಾಧ್ಯವಾಗಿದೆ. ನಾವು ಭಾರತದಲ್ಲಿ ಕುತೂಹಲದಿಂದಲೇ ಚಟುವಟಿಕೆಗಳನ್ನು ಆರಂಭಿಸಿದೆ".

ವೃತ್ತಿ ಆರಂಭಿಸುವವರು ಮತ್ತು ಜ್ಞಾನಾಧಾರಿತ ವೃತ್ತಿಪರರ ಗಮನ

ವೃತ್ತಿ ಆರಂಭಿಸುವವರು ಮತ್ತು ಜ್ಞಾನಾಧಾರಿತ ವೃತ್ತಿಪರರ ಗಮನ

ಕ್ರಮೇಣ ಭಾರತೀಯ ಕೆಲಸಗಳಿಗೆ ಅನುಗುಣವಾಗಿ ನಾವು ಪ್ರತಿಯೊಬ್ಬ ಗ್ರಾಹಕನಿಗೂ ಪ್ರಜಾಪ್ರಭುತ್ವದ ತಳಹದಿಯಲ್ಲಿ ಸೇವೆಗಳ ಅವಕಾಶವನ್ನು ಕಲ್ಪಿಸಿದೆ. ಇದೀಗ ನಾವು ಪ್ರಗತಿಯ ಪಥದೆಡೆಗೆ ಸಾಗುತ್ತಿದ್ದು, ವಿದ್ಯಾರ್ಥಿಗಳು, ವೃತ್ತಿ ಆರಂಭಿಸುವವರು ಮತ್ತು ಜ್ಞಾನಾಧಾರಿತ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ಸೇವೆಗಳನ್ನು ಒದಗಿಸಲಿದ್ದೇವೆ'' ಎಂದು ತಿಳಿಸಿದರು.

ಭಾರತದಲ್ಲಿ ಸ್ಥಳೀಯ ವಿಧಾನ ಅಳವಡಿಕೆ

ಭಾರತದಲ್ಲಿ ಸ್ಥಳೀಯ ವಿಧಾನ ಅಳವಡಿಕೆ

ಭಾರತದಲ್ಲಿ ಲಿಂಕ್ಡ್ ಇನ್ ಸ್ಥಳೀಯ ವಿಧಾನಗಳನ್ನು ಅನುಸರಿಸುತ್ತಿದ್ದು, ಪ್ರಜಾಪ್ರಭುತ್ವದ ತತ್ತ್ವದಡಿ ವೃತ್ತಿಪರರನ್ನು ಪರಸ್ಪರ ಸಂಪರ್ಕಿಸುವತ್ತ ಗಮನಹರಿಸುತ್ತಿದೆ. ಈ ಮೂಲಕ ಆ ವೃತ್ತಿಪರರನ್ನು ಹೆಚ್ಚು ಹೆಚ್ಚು ಪ್ರಗತಿದಾಯಕ ಮತ್ತು ಯಶಸ್ವಿಗೊಳಿಸಲು ಪೂರಕವಾದ ಅವಕಾಶಗಳನ್ನು ಕಲ್ಪಿಸುತ್ತಿದೆ.

ಮೇಡ್ ಇನ್ ಇಂಡಿಯಾ'

ಮೇಡ್ ಇನ್ ಇಂಡಿಯಾ'

2016 ರ ಸೆಪ್ಟಂಬರ್ ನಲ್ಲಿ ಮೊಬೈಲ್ ವೆಬ್‍ಸೈಟ್ ಅನ್ನು ಆರಂಭಿಸುವ ಮೂಲಕ ಲಿಂಕ್ಡ್ ಇನ್ ಮೇಡ್ ಇನ್ ಇಂಡಿಯಾ' ಜರ್ನಿಯನ್ನು ಆರಂಭಿಸಿತು. ನಂತರ ಲಿಂಕ್ಡ್ ಇನ್ ಲೈಟ್ ಆ್ಯಂಡ್ರಾಯ್ಡ್ ಆ್ಯಪ್ ಅನ್ನು 2017 ರ ಜುಲೈನಲ್ಲಿ ಆರಂಭಿಸಿತು. ಲಿಂಕ್ಡ್ ಇನ್ ಲೈಟ್ ಆ್ಯಂಡ್ರಾಯ್ಡ್ ಆ್ಯಪ್' ಇದು ಲೈಟ್‍ವೇಟ್ ಫ್ಲಾಗ್‍ಶಿಪ್‍ನ ಆ್ಯಪ್ ಆಗಿದೆ. ಇದು ಕಡಿಮೆ ಕನೆಕ್ಟಿವಿಟಿ ಪ್ರದೇಶಗಳಲ್ಲಿ ಉತ್ತಮ ಸಂಪರ್ಕ ಸಾಧಿಸಲು ವೃತ್ತಿಪರರಿಗೆ ನೆರವಾಗಲಿದೆ

English summary
Professional networking company LinkedIn said its user base in India has crossed the 50 million mark. With that, India becomes only the second market outside the US where it has expanded its user base to that extent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X