ಯೂಟ್ಯೂಬ್‌ನಂತೆ ಇನ್ಮುಂದೆ ಎಕ್ಸ್‌ನಿಂದಲೂ ಸಿಗಲಿದೆ ದುಡ್ಡು: ಎಲಾನ್ ಮಸ್ಕ್ ಗುಡ್‌ನ್ಯೂಸ್
ಭಾರತದ ಲಕ್ಷಾಂತರ ಜನರಿಗೆ ಯೂಟ್ಯೂಬ್ ಆದಾಯ ಮೂಲವಾಗಿದೆ. ಭಾರತದಲ್ಲಿ ಯೂಟ್ಯೂಬ್ ಕೇವಲ ಮನರಂಜನೆಯಾಗಿ ಮಾತ್ರ ಉಳಿದಿಲ್ಲ. ಈಗ ಆದಾಯದ ಮೂಲವಾಗಿಯೂ ಬದಲಾಗಿದೆ. ದೇಶದಲ್ಲಿ ಲಕ್ಷಾಂತರ ಜನ ಯೂಟ್ಯೂಬ್ ಮೂಲಕ ಗುರುತಿಸಿಕೊಂಡಿದ್ದು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಈ ರೀತಿ ಇರುವಾಗ ಸೋಷಿಯಲ್ ಮೀಡಿಯಾ ಎಕ್ಸ್ (X) - ಯೂಟ್ಯೂಬ್‌ಗೆ (Youtube) ಪೈಪೋಟಿ ಕೊಡುವುದಕ್ಕೆ ಮುಂದಾಗಿದ್ದು. ಇನ್ಮುಂದೆ ನೀವು ಎಕ್ಸ್‌ನಿಂದಲೂ ಆದಾಯ ಗಳಿಸಬಹುದು ಎನ್ನುವ ಗುಡ್‌ನ್ಯೂಸ್‌ವೊಂದನ್ನು ಉದ್ಯಮಿ ಹಾಗೂ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಕೊಟ್ಟಿದ್ದಾರೆ.
ಯೂಟ್ಯೂಬ್‌ನ ಹಣಗಳಿಕೆ ಮಾದರಿಯೊಂದಿಗೆ ಸ್ಪರ್ಧಿಸಲು ಎಕ್ಸ್ ಮುಂದಾಗಿದೆ. ತನ್ನ ನಿರಂತರ ಪ್ರಯತ್ನದ ಭಾಗವಾಗಿ ವಿಷಯ ಕಂಟೆಂಟ್ ಕ್ರಿಯೇಟರ್ಸ್‌ಗೆ ಪಾವತಿ (ಹಣ)ಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಕಂಟೆಂಟ್ ಕ್ರಿಯೇಟರ್ಸ್‌ಗೆ ಹಣ ನೀಡುವ ಕುರಿತಾದ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್ ಅವರು, ಎಕ್ಸ್ ತನ್ನ ಪ್ರಾಡೆಕ್ಟ್ ಮುಖ್ಯಸ್ಥೆ ನಿಕಿತಾ ಬಿಯರ್ ಅವರನ್ನು ಟ್ಯಾಗ್ ಮಾಡಿ, "ಸರಿ ಇದನ್ನು ಮಾಡೋಣ, ಆದರೆ ವ್ಯವಸ್ಥೆಯಲ್ಲಿ ಎಲ್ಲಾ ನಿಯಮಗಳನ್ನೂ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು" ಎಂದು ಹೇಳಿದ್ದಾರೆ.

ಎಕ್ಸ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳುವ ಮೂಲಕ ನಿಕಿತಾ ಅವರು ತಕ್ಷಣವೇ ಉತ್ತರಿಸಿದ್ದು, ಎಕ್ಸ್ ಶೇ 99% ವಂಚನೆಯನ್ನು ಅಳಿಸಿಹಾಕುವ ಹೊಸ ವಿಧಾನವನ್ನು ಹೊಂದಿದೆ. ಇದು ಹಣ ಪಾವತಿಯಲ್ಲಿನ ಗೊಂದಲಗಳನ್ನು ಪರಿಹರಿಸುತ್ತದೆ ಎಂದಿದ್ದಾರೆ.
ಕಂಟೆಂಟ್ ಕ್ರಿಯೇಟರ್ಸ್‌ಗಳಿಂದ ಉತ್ತಮ ಪ್ರತಿಕ್ರಿಯೆ
ಇನ್ನು ಎಲಾನ್ ಮಸ್ಕ್ ಅವರ ಈ ಟ್ವೀಟ್‌ಗೆ ಕಂಟೆಂಟ್ ಕ್ರಿಯೇಟರ್ಸ್‌ಗಳು ಅದ್ಭುತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಿನ್ನೇಸೋಟದಲ್ಲಿ ಡೇಕೇರ್ ಸೆಂಟರ್ ವಂಚನೆಯನ್ನು ಬಹಿರಂಗಪಡಿಸಿದ್ದಕ್ಕಾಗಿ ಇತ್ತೀಚೆಗೆ ವೈರಲ್ ಆಗಿರುವ ಸ್ವತಂತ್ರ ಪತ್ರಕರ್ತ ನಿಕ್ ಶೆರ್ಲಿ, ಅಂತಹ ಕ್ರಮವು ಅದ್ಭುತವಾಗಿದೆ ಎಂದಿದ್ದಾರೆ. ಆದರೆ ಎಕ್ಸ್ ಇಲ್ಲಿಯವರೆಗೆ ಗಳಿಕೆಯ ವಿಷಯದಲ್ಲಿ ಯೂಟ್ಯೂಬ್‌ನೊಂದಿಗೆ ಸ್ಪರ್ಧಿಸಲು ಹೆಣಗಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ತಿಂಗಳುಗಳಿಂದ ನನ್ನ ಸ್ನೇಹಿತರಿಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡುವಂತೆ ಹೇಳುತ್ತಿದ್ದೇನೆ. ಆದರೆ ಅವರು ಆ ಪ್ರಯತ್ನವನ್ನು ಮಾಡಿಲ್ಲ ಏಕೆಂದರೆ ಅವರ ಸಮಯವನ್ನು ಇತರ ವೇದಿಕೆಗಳಲ್ಲಿ (ಆರ್ಥಿಕವಾಗಿ) ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಎಕ್ಸ್‌ಸಹ ದುಡ್ಡು ಕೊಟ್ಟರೆ ಜನ ಇದನ್ನು ಹೆಚ್ಚಾಗಿ ಕಂಟೆಂಟ್ ಕ್ರಿಯೇಟ್ ಮಾಡುವುದಕ್ಕೆ ಬಳಸುವ ಸಾಧ್ಯತೆ ಇದೆ ಎಂದಿದ್ದಾರೆ. ಇತರ ಬಳಕೆದಾರರು ಸಂಭಾವ್ಯ ಹೆಚ್ಚಿನ ಪಾವತಿಗಳನ್ನು ಗೇಮ್ ಚೇಂಜರ್ ಎಂದು ಕರೆದಿದ್ದಾರೆ. ವಿಶೇಷವಾಗಿ ದೊಡ್ಡ ಭಾಷಾ ಮಾದರಿಗಳು ಆನ್‌ಲೈನ್ ವಿಷಯವನ್ನು ಹೆಚ್ಚಾಗಿ ಅವಲಂಬಿಸಿರುವ ಸಮಯದಲ್ಲಿ, ಸೃಷ್ಟಿಕರ್ತರಿಗೆ ಉತ್ತಮ ಪ್ರತಿಫಲ ನೀಡುವ ವೇದಿಕೆಗಳು ಹೆಚ್ಚು ಅಧಿಕೃತ ವಿಷಯವನ್ನು ಆಕರ್ಷಿಸುತ್ತವೆ ಎಂದು ಚರ್ಚೆ ನಡೆದಿದೆ.
ಭಾರತೀಯರಿಗೆ ಬಂಪರ್ ನಿರೀಕ್ಷೆ
ಯೂಟ್ಯೂಬ್ ಮಾದರಿಯಲ್ಲಿ ಎಕ್ಸ್‌ನಿಂದಲೂ ಆದಾಯ ಬರುವುದಕ್ಕೆ ಪ್ರಾರಂಭವಾದರೆ ಭಾರತೀಯರಿಗೆ ಭರ್ಜರಿ ಲಾಭವಾಗಲಿದೆ. ಭಾರತದಲ್ಲಿ 22ರಿಂದ 27 ಮಿಲಿಯನ್ ಜನ ಸೋಷಿಯಲ್ ಮೀಡಿಯಾ ಎಕ್ಸ್ ಬಳಕೆ ಮಾಡುತ್ತಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಎಕ್ಸ್ ಬಳಕೆ ಮಾಡುವ ದೇಶಗಳ ಸಾಲಿನಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿ ಇದೆ. ಯೂಟ್ಯೂಬ್‌ನಲ್ಲಿ ಜನ ಇದೀಗ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದು, ಇನ್ಮುಂದೆ ಉತ್ತಮ ಕಂಟೆಂಟ್‌ಗಳಿಗೆ ಎಕ್ಸ್‌ನಲ್ಲಿದಲೂ ಆದಾಯ ನಿರೀಕ್ಷೆ ಮಾಡಬಹುದಾಗಿದೆ.












Click it and Unblock the Notifications