ಮಹಿಳಾ ಸುರಕ್ಷತೆಗಾಗಿ 'Panic button' ಉಳ್ಳ ಭಾರತದ ಮೊದಲ ಸ್ಮಾರ್ಟ್ ಫೋನ್ ಬಿಡುಗಡೆ

ಮಹಿಳೆಯರ ಸುರಕ್ಷೆ ಹಿನ್ನೆಲೆಯಲ್ಲಿ ಮೊಬೈಲ್ ಗಳಲ್ಲಿ ಪ್ಯಾನಿಕ್ ಬಟನ್ ಅಥವಾ 112 ಸಂಖ್ಯೆಯ ಒಂದೇ ಬಟನ್ ಇಡುವ ಬಗ್ಗೆ ಟ್ರಾಯ್ ಇತ್ತೀಚೆಗೆ ಎಲ್ಲಾ ಮೊಬೈಲ್ ತಯಾರಿಕಾ ಸಂಸ್ಥೆಗಳಿಗೆ ಸೂಚಿಸಿತ್ತು.

ಮುಂಬೈ, ಫೆಬ್ರವರಿ 22: ಪ್ರಖ್ಯಾತ ಇಲೆಕ್ಟ್ರಾನಿಕ್ ಸಂಸ್ಥೆಯಾದ ಎಲ್.ಜಿ. ತನ್ನ ಕೆ 10 ಸ್ಮಾರ್ಟ್ ಫೋನ್ ಸರಣಿಯಲ್ಲಿ ಪ್ಯಾನಿಕ್ ಬಟನ್ ಇರುವ ಹೊಸ ಮಾದರಿಯ ಫೋನ್ ಗಳನ್ನು ಬುಧವಾರ ಬಿಡುಗಡೆಗೊಳಿಸಿದ್ದು, ಈ ಮಾದರಿಯ ಮೊಟ್ಟ ಮೊದಲ ಫೋನ್ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮಂಗಳವಾರ ನಡೆದ ಸಮಾರಂಭದಲ್ಲಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಈ ಹೊಸ ಮಾದರಿಯ ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದರು.

ಫೋನ್ ಬಿಡುಗಡೆ ನಂತರ ಮಾತನಾಡಿದ ರವಿಶಂಕರ್ ಪ್ರಸಾದ್, ''ಪ್ಯಾನಿಕ್ ಬಟನ್ ಸೌಲಭ್ಯವು ದೇಶದ ಭದ್ರತಾ ವ್ಯವಸ್ಥೆಗೆ ಹೊಸ ತಿರುವು ತರಲಿದೆ'' ಎಂಬ ಆಶಯ ವ್ಯಕ್ತಪಡಿಸಿದರು.

LG launches India's first smartphone with a panic button

ಇದೇ ವರ್ಷ ಮಾರ್ಚ್ ತಿಂಗಳ ನಂತರ ಭಾರತದಲ್ಲಿ ಬಿಡುಗಡೆಯಾಗುವ ಎಲ್ಲಾ ಮೊಬೈಲ್ ಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸುವಂತೆ ಕೇಂದ್ರ ಸರ್ಕಾರವು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮೂಲಕ ಎಲ್ಲಾ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡಿದ ಮೊದಲ ಕಂಪನಿಯಾಗಿ ಎಲ್ ಜಿ ಹೊರಹೊಮ್ಮಿದೆ.

ಈ ಮೊಬೈಲ್ ನಲ್ಲಿ ತುರ್ತು ದೂರವಾಣಿ ಕರೆಯನ್ನಾಗಿ ಬಳಸುವ 112 ಸಂಖ್ಯೆಯ ಒಂದೇ ಬಟನ್ ಅನ್ನು ನೀಡಲಾಗಿರುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಬಳಕೆದಾರರು, ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಆ ಬಟನ್ ಒತ್ತಿದಲ್ಲಿ ಆ ವ್ಯಕ್ತಿಯು ಇರುವ ಸ್ಥಳದ ಮಾಹಿತಿಯು ಹತ್ತಿರದ ಪೊಲೀಸ್ ಠಾಣೆಗೆ ಹೋಗುತ್ತದೆ.

ಅಂದಹಾಗೆ, ಈ ಹೊಸ ಎಲ್ ಜಿ ಕೆ 10 - 2017 ಶ್ರೇಣಿಯ ಮೊಬೈಲ್ ಗಳು 4G LTE ತಂತ್ರಜ್ಞಾನದೊಂದಿಗೆ 5 ಎಂಪಿ ಮುಂಭಾಗದ ಕ್ಯಾಮೆರಾ, 13 ಮೆಗಾ ಪಿಕ್ಸೆಲ್ ನ ಹಿಂಭಾಗದ ಕ್ಯಾಮೆರಾ, 5.3 ಇಂಚು ಟಚ್ ಸ್ಕ್ರೀನ್ ಇದ್ದು, ಆ್ಯಂಡ್ರಾಯ್ಡ್ ನೌಗಟ್ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಬ್ಯಾಟರಿಯು 2800 ಎಂಎಎಚ್ ಸಾಮರ್ಥ್ಯವುಳ್ಳದ್ದಾಗಿದೆ. 2 ಜಿಬಿ ರ್ಯಾಮ್ ಜತೆಗೆ 16 ಆಂತರಿಕ ಸಂಗ್ರಹ ಸಾಮರ್ಥ್ಯವಿದ್ದು, ಇದರ ಬೆಲೆ ಸುಮಾರು 13, 500 ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+