ಒಂದು ಜೋಡಿ ಜೀನ್ಸ್ ಪ್ಯಾಂಟ್ ಖರೀದಿಗೆ 62 ಲಕ್ಷ ರೂ. ಕೊಟ್ಟ ಭೂಪ!

ನ್ಯೂಯಾರ್ಕ್, ಅಕ್ಟೋಬರ್ 14: ಒಂದು ಜೊತೆ ಜೀನ್ಸ್ ಪ್ಯಾಂಟ್ ಖರೀದಿಗೆ ಸಾಮಾನ್ಯವಾಗಿ ಜನರು 3,000 ದಿಂದ 6,000 ರೂಪಾಯಿ ಖರ್ಚು ಮಾಡಬಹುದು. ಇನ್ನು ಬ್ರ್ಯಾಂಡೆಡ್ ಗೀಳಿಗೆ ಅಂಟಿಕೊಂಡಿರುವ ಮಂದಿ ಅಬ್ಬಬ್ಬಾ ಅಂದರೂ 10,000 ರೂಪಾಯಿ ಖರ್ಚು ಮಾಡಬಹುದು. ಆದರೆ ಇಲ್ಲೊಬ್ಬ ಭೂಪ ಒಂದು ಜೊತೆ ಲೆವೀಸ್ ಜೀನ್ಸ್ ಪ್ಯಾಂಟ್ ಖರೀದಿಗೆ ಬರೋಬ್ಬರಿ 62 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.

ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ 1800 ರ ದಶಕದ ಲೆವಿಯ ಜೀನ್ಸ್ ಜೋಡಿಯು USD 76,000 ಅಂದರೆ ಬರೋಬ್ಬರಿ 62 ಲಕ್ಷಕ್ಕಿಂತ ಹೆಚ್ಚು ರೂಪಾಯಿಗೆ ಮಾರಾಟವಾಗಿದೆ. ಇದಕ್ಕೆ ಪ್ರೀಮಿಯಂ ಅಂಶದೊಂದಿಗೆ ಖರೀದಿದಾರರು 87,400 ಯುಎಸ್ ಡಾಲರ್ ಅನ್ನು ಪಾವತಿಸಿದ್ದಾರೆ. ಅಕ್ಟೋಬರ್ 1ರಂದು ಹರಾಜಿನಲ್ಲಿ ಸ್ಯಾನ್ ಡಿಯಾಗೋದ 23 ವರ್ಷ ವಯಸ್ಸಿನ ವಿಂಟೇಜ್ ಬಟ್ಟೆ ವ್ಯಾಪಾರಿ ಕೈಲ್ ಹೌಪೆಟ್ ಎನ್ನುವವರು ಈ ಜೋಡಿ ಜೀನ್ಸ್ ಅನ್ನು ಖರೀದಿಸಿದ್ದಾರೆ.

Levis company jeans pair sold for over 62 lakh rupees; heres why

ವಾಲ್ ಸ್ಟ್ರೀಟ್ ಜರ್ನಲ್‌ನೊಂದಿಗೆ ಮಾತನಾಡುವಾಗ ಹಾಪರ್ಟ್," ನಾನು ಇನ್ನೂ ಒಂದು ರೀತಿಯ ದಿಗ್ಭ್ರಮೆಗೊಂಡಿದ್ದೇನೆ, ಅವುಗಳನ್ನು ಖರೀದಿಸಿದ್ದಕ್ಕಾಗಿ ನನ್ನಲ್ಲಿ ಆಶ್ಚರ್ಯವಾಯಿತು." ಜೀನ್ಸ್ ಜೋಡಿಯನ್ನು ವಿಂಟೇಜ್ ಬಟ್ಟೆ ಕಂಪನಿ ಡೆನಿಮ್ ಡಾಕ್ಟರ್ಸ್ ಮಾಲೀಕ ಜಿಪ್ ಸ್ಟೀವನ್ಸನ್ ಮಾರಾಟ ಮಾಡಿದರು," ಎಂದು ಹೇಳಿದ್ದಾರೆ. ಹೌಪರ್ಟ್ ಹರಾಜಿನ ವೀಡಿಯೊ ಮತ್ತು ಜೀನ್ಸ್ ಜೋಡಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಅವರು, "ಇವುಗಳು ತಮ್ಮಷ್ಟಕ್ಕೆ ತಾನೇ ಮಾತನಾಡುತ್ತವೆ," ಎಂಬ ಶೀರ್ಷಿಕೆ ಅನ್ನು ನೀಡಿದ್ದಾರೆ.

Levis company jeans pair sold for over 62 lakh rupees; heres why

ಈ ಜೀನ್ಸ್ ಜೋಡಿಗೆ ಯಾಕೆ ಇಷ್ಟು ಬೆಲೆ?:

ಅಕ್ಟೋಬರ್ 1ರಂದು ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನ ಪಟ್ಟಿಯ ಪ್ರಕಾರ, ಈ ಜೋಡಿಯು ಗೋಲ್ಡ್ ರಶ್ ಯುಗದ ಅತ್ಯಂತ ಹಳೆಯ ಲೆವಿಗಳಲ್ಲಿ ಒಂದಾಗಿದೆ. ಅಲ್ಲದೇ ವಿಂಟೇಜ್ ಡೆನಿಮ್ ಸಂಗ್ರಹದ ಹೋಲಿ ಗ್ರೇಲ್ ಆಗಿದೆ ಎಂದು ಉಲ್ಲೇಖಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+