ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸೂರಿನಲ್ಲಿ ಐಫೋನ್‌ ಅತಿ ದೊಡ್ಡ ಘಟಕ, 60,000 ಹೆಚ್ಚು ನೇಮಕಾತಿ

|
Google Oneindia Kannada News

ಬೆಂಗಳೂರು, ನವೆಂಬರ್‌ 16: ಜನಪ್ರಿಯ ಮೊಬೈಲ್‌ ಆಪಲ್‌ ಕಂಪೆನಿಯ ಐಪೋನ್‌ ಘಟಕ ಬೆಂಗಳೂರು ಸಮೀಪದ ಹೊಸೂರಿನಲ್ಲಿ ಘಟಕ ತೆರೆಯಲಿದೆ. ಇದು ಸುಮಾರು 60,000 ಜನರಿಗೆ ಉದ್ಯೋಗ ನೀಡಲಿದೆ ಎಂದು ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಜಂಜಾಟಿಯಾ ಗೌರವ್‌ ದಿವಸ್‌ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್‌ ರಾಂಚಿ ಹಾಗೂ ಹಜಾರಿಬಾಗ್‌ ಬಳಿ ವಾಸಿಸುವ ಆರು ಸಾವಿರ ಬುಡಕಟ್ಟು ಮಹಿಳೆಯರಿಗೆ ಐಫೋನ್‌ ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಏಕರೀತಿಯ ಯುಎಸ್‌ಬಿ ಅಳವಡಿಕೆ; ಐಫೋನ್ ಕಥೆ?ಏಕರೀತಿಯ ಯುಎಸ್‌ಬಿ ಅಳವಡಿಕೆ; ಐಫೋನ್ ಕಥೆ?

''ಆಪಲ್‌ ಐಫೋನ್‌ ಈಗ ಭಾರತದಲ್ಲೇ ತಯಾರಾಗುತ್ತಿದೆ. ಹಾಗಾಗಿ ಬೆಂಗಳೂರು ಸಮೀಪವಿರುವ ತಮಿಳುನಾಡಿಗೆ ಸೇರಿದ ಹೊಸೂರಿನಲ್ಲಿ ಭಾರತದ ಅತಿದೊಡ್ಡ ಸ್ಥಾವರವನ್ನು ಪ್ರಾರಂಭಿಸಲಾಗುತ್ತಿದೆ. ಒಂದೇ ಕಾರ್ಖಾನೆಯಲ್ಲಿ 60,000 ಜನರಿಗೆ ಉದ್ಯೋಗ ದೊರೆಯುತ್ತದೆ. ಈ 60,000 ಉದ್ಯೋಗಿಗಳಲ್ಲಿ ಮೊದಲ 6,000 ಉದ್ಯೋಗಿಗಳು ರಾಂಚಿ ಮತ್ತು ಹತ್ತಿರದ ಸ್ಥಳಗಳ ನಮ್ಮದೆ ಹಜಾರಿಬಾಗ್‌ನ ಬುಡಕಟ್ಟು ಸಹೋದರಿಯರು. ಆದ್ದರಿಂದಲೇ ಈ ಹಜಾರಿಬಾಗ್‌ ಸಹೋದರಿಯರಿಗೆ ಆಪಲ್‌ ಐಫೋನ್ ತಯಾರಿಕೆಯ ತರಬೇತಿ ನೀಡಲಾಗುತ್ತಿದೆ'' ಎಂದು ಅವರು ಹೇಳಿದರು.

Largest iPhone unit coming near to Bengaluru, create 60,000 more jobs

ಹೊಸೂರಿನಲ್ಲಿ ಘಟಕ ಹೊಂದಿರುವ ಟಾಟಾ ಎಲೆಕ್ಟ್ರಾನಿಕ್ಸ್‌ಗೆ ಐಫೋನ್‌ ತಯಾರಿಕೆಗೆ ಆಪಲ್‌ ಕಂಪೆನಿಗೆ ಹೊರಗುತ್ತಿಗೆ ಆಧಾರದ ಮೇಲೆ ಆವರಣವನ್ನು ನೀಡಲಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್‌ನ ಅತಿ ದೊಡ್ಡ ಕಂಪೆನಿಗಳಾದ ಫಾಕ್ಸ್‌ಕಾನ್‌ ವಿಸ್ಟ್ರಾನ್‌ ಮತ್ತು ಪೆಗಾಟ್ರಾನ್‌ ತಯಾರಿಸಿದ ಐಪೋನ್‌ಗಳನ್ನು ಕಂಪೆನಿಯು ಪಡೆಯುತ್ತದೆ.

Largest iPhone unit coming near to Bengaluru, create 60,000 more jobs

ಭಾರತದಲ್ಲಿ ತನ್ನ ಘಟಕಗಳಲ್ಲಿ ಉದ್ಯೋಗಿಗಳ ಕಾರ್ಯಾಪಡೆಯನ್ನು ವಿಸ್ತರಿಸುವ ಫಾಕ್ಸ್‌ಕಾನ್‌ ಯೋಜನೆಯು ಕೋವಿಡ್‌ 19ರೊಂದಿಗಿನ ಅಡೆತಡೆ ಹಾಗೂ ಚೀನಾದಲ್ಲಿನ ವ್ಯವಹಾರ ಕುಸಿತದ ಪರಿಣಾಮವಾಗಿ ಕುಸಿತ ಕಂಡ ವ್ಯಾಪಾರವನ್ನು ಮತ್ತೆ ಪುಟಿದೇಳಿಸಲು ಕೈಗೊಂಡ ಕ್ರಮದ ಭಾಗವಾಗಿದೆ.

English summary
The iPhone unit of the popular mobile company Apple will open a unit in Hosur near Bangalore. It will provide employment to around 60,000 people, said Union Telecom and IT Minister Ashwini Vaishnav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X