ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಉತ್ಪಾದನೆ ಶುರುವಾದರೆ ಲ್ಯಾಪ್‌ಟಾಪ್ ಬೆಲೆ ಶೇ. 60 ಇಳಿಯುತ್ತಾ?

|
Google Oneindia Kannada News

ನವದೆಹಲಿ, ಸೆ. 14: ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳು ಭಾರತದಲ್ಲಿ ಇನ್ಮುಂದೆ ಇನ್ನಷ್ಟು ಅಗ್ಗದ ದರದಲ್ಲಿ ದೊರೆಯುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ ಮತ್ತು ಗ್ಲಾಸ್‌ನ ಉತ್ಪಾದನೆ ಆಗಲಿರುವುದು.

ಐಫೋನ್‌ಗಳನ್ನು ತಯಾರಿಸುವ ಫಾಕ್ಸ್‌ಕಾನ್ ಎಂಬ ತೈವಾನ್ ಕಂಪನಿ ಮತ್ತು ವೇದಾಂತ ಎಂಬ ಭಾರತೀಯ ಕಂಪನಿ ಗುಜರಾತ್‌ನಲ್ಲಿ 1.54 ಲಕ್ಷ ಕೋಟಿ ರೂ ಹೂಡಿಕೆಯಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಘಟಕ ಸ್ಥಾಪಿಸಲಿವೆ. ಈ ವಿಚಾರವನ್ನು ವೇದಾಂತ ಸಂಸ್ಥೆಯ ಮುಖ್ಯಸ್ಥ ಅನಿಲ್ ಅಗರ್ವಾಲ್ ನಿನ್ನೆ ಮಂಗಳವಾರ ಈ ವಿಚಾರ ಖಚಿತಪಡಿಸಿದ್ದಾರೆ.

ಭಾರತದ ಮೊದಲ ಚಿಪ್‌ ಕಾರ್ಖಾನೆ ಎಲ್ಲಿ ಆರಂಭವಾಗಲಿದೆ?ಭಾರತದ ಮೊದಲ ಚಿಪ್‌ ಕಾರ್ಖಾನೆ ಎಲ್ಲಿ ಆರಂಭವಾಗಲಿದೆ?

ಇವರ ಪ್ರಕಾರ, ಸೆಮಿಕಂಡಕ್ಟರ್ ಚಿಪ್ ಮತ್ತು ಗ್ಲಾಸ್ ಉತ್ಪಾದನೆ ಭಾರತದಲ್ಲಿ ಶುರುವಾದರೆ ಲ್ಯಾಪ್‌ಟಾಪ್ ಬೆಲೆ ಶೇ. 60ಕ್ಕಿಂತ ಹೆಚ್ಚು ಇಳಿಕೆಯಾಗಬಹುದು.

"ಇವತ್ತು ಲ್ಯಾಪ್‌ಟಾಪ್ ಬೆಲೆ 1 ಲಕ್ಷ ರೂ ಇದೆ. ಗ್ಲಾಸ್ ಮತ್ತು ಸೆಮಿಕಂಡಕ್ಟರ್ ಚಿಪ್ ಭಾರತದಲ್ಲಿ ಲಭ್ಯವಾದಲ್ಲಿ ಇದೇ ಲ್ಯಾಪ್‌ಟಾಪ್ ಬೆಲೆ 40 ಸಾವಿರ ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ಇಳಿಯಬಹುದು" ಎಂದು ಅನಿಲ್ ಅಗರ್ವಾಲ್ ಬುಧವಾರ ಹೇಳಿದ್ದಾರೆ.

Laptop Rate Will Decrease Drastically If Semiconductor and Glass Manufactured in India

ಭಾರತದಲ್ಲಿ ಸೆಮಿಕಂಡಕ್ಟರ್‌ಗಳು ಉತ್ಪಾದನೆಯಾದರೆ ಅದರ ವೆಚ್ಚ ಬಹಳಷ್ಟು ಕಡಿಮೆ ಆಗುವ ಅಂದಾಜು ಇದೆ. ಲ್ಯಾಪ್‌ಟಾಪ್‌ಗೆ ಬಳಕೆ ಮಾಡುವ ಗ್ಲಾಸ್ ಅನ್ನು ತೈವಾನ್ ಮತ್ತು ಕೊರಿಯಾದಿಂದ ಆಮದು ಮಾಡಲಾಗುತ್ತಿದೆ. ಅನಿಲ್ ಅಗರ್ವಾಲ್ ಪ್ರಕಾರ, ಈ ಗ್ಲಾಸ್ ಅನ್ನೂ ಭಾರತದಲ್ಲಿ ತಯಾರಿಸುವ ಕೆಲಸ ಬೇಗ ಆರಂಭವಾಗಲಿದೆಯಂತೆ.

ಸೆಮಿಕಂಡಕ್ಟರ್ ಚಿಪ್‌ಗಳು ಕೇವಲ ಲ್ಯಾಪ್‌ಟಾಪ್ ಮಾತ್ರವಲ್ಲ ಮೊಬೈಲ್ ಫೋನ್, ಎಲೆಕ್ಟ್ರಿಕ್ ವಾಹನಗಳು ಇತ್ಯಾದಿ ಹಲವು ಉಪಕರಣ ಮತ್ತು ಇ ವಸ್ತುಗಳಲ್ಲಿ ಬಳಕೆಯಾಗುತ್ತವೆ. ಈ ಚಿಪ್‌ಗಳು ಕಡಿಮೆ ದರಕ್ಕೆ ಸಿಕ್ಕರೆ ಈ ಎಲ್ಲಾ ಉತ್ಪನ್ನಗಳ ಬೆಲೆಯೂ ಸಹಜವಾಗಿ ತಗ್ಗುತ್ತವೆ.

ಸೆಮಿಕಂಡಕ್ಟರ್ ಉತ್ಪಾದನೆ ಘಟಕ ಗುಜರಾತ್‌ನಲ್ಲಿ ಮಾತ್ರವಲ್ಲ ಮಹಾರಾಷ್ಟ್ರದಲ್ಲೂ ಆರಂಭಿಸುವ ಇರಾದೆಯನ್ನು ವೇದಾಂತ ಸಂಸ್ಥೆ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳಿಗೆ ವಿಪರೀತ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ಭಾರತದಲ್ಲೇ ಇದರ ಉತ್ಪಾದನೆ ಆದರೆ ಇಲ್ಲಿನ ಆರ್ಥಿಕತೆಗೂ ಒಳ್ಳೆಯ ಪುಷ್ಟಿ ಸಿಗುತ್ತದೆ ಎಂಬುದು ತಜ್ಞರ ಅನಿಸಿಕೆ.

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಹೊಸ ಛಾಪುಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಹೊಸ ಛಾಪು

ಸೆಮಿಕಂಡಕ್ಟರ್ ಚಿಪ್ ಮಾರುಕಟ್ಟೆಗೆ ಬರೋದು ಯಾವಾಗ?
ಫಾಕ್ಸ್‌ಕಾನ್ ಮತ್ತು ವೇದಾಂತ ಕಂಪನಿಗಳು ಜಂಟಿಯಾಗಿ ಸೆಮಿಕಂಡಕ್ಟರ್ ಉತ್ಪಾದನೆ ಮಾಡುವ ಯೋಜನೆ ಕುಡಿಯೊಡೆದು ಬಹಳ ದಿನಗಳಾದವು. ಈ ತಿಂಗಳು ಅದು ಸಾಕಾರಗೊಂಡಿದೆ. ಎರಡೂ ಸಂಸ್ಥೆಗಳು ಜಂಟಿಯಾಗಿ ಉತ್ಪಾದನಾ ಘಟಕ ಆರಂಭಿಸಲು ನಿರ್ಧರಿಸಿವೆ. ಗುಜರಾತ್‌ನ ಘಟಕದಿಂದ ಇನ್ನೆರಡು ವರ್ಷದಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳು ಮಾರುಕಟ್ಟೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.

Laptop Rate Will Decrease Drastically If Semiconductor and Glass Manufactured in India

ಸೆ. 12ರಂದು ಗುಜರಾತ್ ಸರಕಾರದೊಂದಿಗೆ ಒಪ್ಪಂದ (ಎಂಒಯು) ಮಾಡಿಕೊಂಡಿವೆ. 1.54 ಲಕ್ಷ ಕೋಟಿ ರೂ ಹೂಡಿಕೆಯಲ್ಲಿ ಉತ್ಪಾದನಾ ಘಟಕ ಆರಂಭಗೊಳ್ಳಲಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಒಪ್ಪಂದದ ವೇಳೆ ಉಪಸ್ಥಿತರಿದ್ದರು.

ಈಗ ಗುಜರಾತ್ ಸರಕಾರದೊಂದಿಗೆ ಈ ಎರಡು ಸಂಸ್ಥೆಗಳು ಒಪ್ಪಂದಕ್ಕೆ ಸಹಿಹಾಕಿದ್ದಾಯಿತು. ಈಗ ಪ್ರಸ್ತಾವಿತ 1.54 ಕೋಟಿ ರೂ ಬಂಡವಾಳವನ್ನು ಸಂಗ್ರಹಿಸುವ ಕೆಲಸ ಆಗಬೇಕಿದೆ. ವೇದಾಂತ ಸಂಸ್ಥೆಯ ಛೇರ್ಮನ್ ಅನಿಲ್ ಅಗರ್ವಾಲ್ ಈ ವಿಚಾರದಲ್ಲಿ ಆತ್ಮವಿಶ್ವಾಸದಲ್ಲಿದ್ದಾರೆ. ಈ ಯೋಜನೆಗೆ ನಿರೀಕ್ಷಿತ ಬಂಡವಾಳ ಹರಿದುಬರುವುದರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ.

ಈ ಜಂಟಿ ವ್ಯವಹಾರದಲ್ಲಿ ಫಾಕ್ಸ್‌ಕಾನ್ ಸಂಸ್ಥೆ ಶೇ. 38ರಷ್ಟು ಈಕ್ವಿಟಿ ಹೊಂದಿರುವುದರಿಂದ ಆ ಸಂಸ್ಥೆಯೇ ಬಂಡವಾಳವನ್ನೂ ತರುತ್ತದೆ. ಹಣ ಕಲೆಹಾಕುವುದು ಸಮಸ್ಯೆ ಅಲ್ಲ ಎನ್ನುತ್ತಾರೆ ವೇದಾಂತ ಛೇರ್ಮನ್.

ಗುಜರಾತ್ ಸರಕಾರದ ಜೊತೆ ವೇದಾಂತ ಮತ್ತು ಫಾಕ್ಸ್‌ಕಾನ್ ಒಪ್ಪಂದ ಮಾಡಿಕೊಳ್ಳುತ್ತಿದ್ದಂತೆಯೇ ಬುಧವಾರ ವೇದಾಂತ ಸಂಸ್ಥೆಯ ಷೇರುಗಳ ಮೌಲ್ ಶೇ. 3.4ರಷ್ಟು ಏರಿದೆ.

(ಒನ್ಇಂಡಿಯಾ ಸುದ್ದಿ)

English summary
JV of Vedanta and Foxconn to manufacture semiconductor chips in Gujarat will help in boosting economy of India. Laptop and other electronic items may become cheaper by 60%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X