Vande Bharat Express: ಬೆಂಗಳೂರು-ತಿರುಪತಿ ಪ್ರಯಾಣಿಕರಿಗೆ ಗುಡ್‌ನ್ಯೂಸ್, ಹೊಸ ವಂದೇ ಭಾರತ್ ರೈಲಿನ ವೇಳಾಪಟ್ಟಿ ಹೀಗಿದೆ

Vande Bharat Express Train: ಬೆಂಗಳೂರಿನಿಂದ ತಿರುಪತಿ ಮತ್ತು ಆಂಧ್ರ ಪ್ರದೇಶಕ್ಕೆ ತೆರಳುವ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಬೆಂಗಳೂರು ಎಸ್‌ಎಂವಿಟಿ-ವಿಜಯವಾಡಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಆರಂಭಿಸಲು ಈ ಮೊದಲೇ ನಿರ್ಧರಿಸಿತ್ತು. ಇತ್ತೀಚೆಗೆ ವೇಳಾಪಟ್ಟಿಯನ್ನು ಸಹ ರೈಲ್ವೆ ಇಲಾಖೆ ಪ್ರಕಟಿಸಿದೆ. ಈ ಮೂಲಕ ಕರ್ನಾಟಕಕ್ಕೆ ಮತ್ತೊಂದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರ್ಪಡೆಯಾಗಲಿದೆ.

ಈ ಮಾರ್ಗದಲ್ಲಿ ಬಹುದಿನಗಳ ಹಿಂದೆಯೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಬೇಡಿಕೆ ಕೇಳಿ ಬಂದಿತ್ತು. ಅದರಂತೆ ರೈಲ್ವೆ ಇಲಾಖೆಯು ಈ ರೈಲು ಸೇವೆ ಆರಂಭಿಸಲು ಮುಂದಾದಾಗಲೆಲ್ಲ ಅಡತಡೆಗಳು ಎದುರಾಗುತ್ತಿದ್ದವು. ಇತ್ತೀಚಿನವರೆಗೆ ಬೋಗಿಗಳು ಪೂರೈಕೆಯಲ್ಲಿ ಸಮಸ್ಯೆ ಆಗಿತ್ತು. ಸದ್ಯ ಎಲ್ಲವು ಒಂದೊಂದೆ ನಿವಾರಣೆ ಆಗಿದ್ದು ಆದಷ್ಟು ಶೀಘ್ರವೇ ಬೆಂಗಳೂರಿನಿಂದ ತಿರುಪತಿ ಮಾರ್ಗವಾಗಿ ವಿಜಯವಾಡಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾರಣೆ ನಡೆಸಲಿದೆ.

Bengaluru-Vijayawada Vande Bharat

4 ಗಂಟೆಗಳಲ್ಲಿ ತಿರುಪತಿ ರೀಚ್, ಭಕ್ತರಿಗೆ ಅನುಕೂಲ

ಬೇರೆ ಬೇರೆ ಭಾಗದಂತೆ ಉದ್ಯಾನ ನಗರಿ ಬೆಂಗಳೂರಿನಿಂದಲೂ ತಿರುಪತಿಗೆ ತಿಮ್ಮಪ್ಪನ ದರ್ಶಕ್ಕೆ ತೆರಳುವವ ಸಂಖ್ಯೆ ಅಪಾರ. ವಿಜಯವಾಡ ಹಾಗೂ ತಿರುಪತಿಗೆ ತೆರಳುವವರಿಗೆ ವಂದೇ ಭಾರತ್ ರೈಲು ಹೆಚ್ಚಿನ ಅನುಕೂಲ ಒದಗಿಸುತ್ತದೆ. ಈ ಮಾರ್ಗದಲ್ಲಿ ವೇಗದ, ಆರಾಮದಾಯಕ ಪ್ರಯಾಣದ ಅನುಭವ ನೀಡುವ ಹೆಚ್ಚುವರಿ ಸಾರಿಗೆ ಸಿಕ್ಕಂತಾಗುತ್ತದೆ. ವಂದೇ ಭಾರತ್ ರೈಲು ಆರಂಭವಾದಲ್ಲಿ ಈ ಮಾಗದಲ್ಲಿ ಪ್ರಯಾಣಿಕರಿಗೆ ಒಟ್ಟು 3 ಗಂಟೆಗಳ ಸಮಯ ಉಳಿತಾಯವಾಗಲಿದ್ದು, ತಿರುಪತಿಯನ್ನು ಕೇವಲ 4ಗಂಟೆಗಳಲ್ಲಿ ತಲುಪಬಹುದಾಗಿದೆ.

SWR; ಮೈಸೂರು-ದೆಹಲಿಗೆ ವಿಶೇಷ ರೈಲು, ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ, ಇಲ್ಲಿದೆ ಅಪ್ಡೇಟ್ಸ್
SWR; ಮೈಸೂರು-ದೆಹಲಿಗೆ ವಿಶೇಷ ರೈಲು, ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ, ಇಲ್ಲಿದೆ ಅಪ್ಡೇಟ್ಸ್

ವಂದೇ ಭಾರತ್ ರೈಲಿನ ವೇಳಾಪಟ್ಟಿ, ನಿಲ್ದಾಣಗಳು

ತಿರುಪತಿ ಮಾರ್ಗವಾಗಿ ಬೆಂಗಳೂರು-ವಿಜಯವಾಡ ಹೊಸ ವಂದೇ ಭಾರತ್ ರೈಲು (20711/20712) ವಾರದ ಆರು ದಿನ ಸಂಚಾರ ಮಾಡಲಿದೆ. ಇದರಲ್ಲಿ ಏಳು ಎಸಿ ಚೇರ್ ಕಾರ್, ಒಂದು ಎಕ್ಸಿಕ್ಯೂಟಿವ್ ಚೇರ್ ಕಾರ್ (ಒಟ್ಟು 08 ಬೋಗಿಗಳು) ಇರಲಿವೆ.

ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣದಿಂದ ರೈಲು (20712) ಮಧ್ಯಾಹ್ನ 14.45ಕ್ಕೆ ಹೊರಡುತ್ತದೆ. ಕೆಆರ್ ಪುರ (14.58), ಕಾಟ್ಪಾಡಿ (17.23), ತಿರುಪತಿ (18.55), ನೆಲ್ಲೂರು (20.18), ಒಂಗೋಲು (21.29), ತೆನಾಲಿ (22.42) ಮಾರ್ಗವಾಗಿ ವಿಜಯವಾಡ ನಿಲ್ದಾಣಕ್ಕೆ ರಾತ್ರಿ 23.45ಕ್ಕೆ ತಲುಪಲಿದೆ.

ಮರಳಿ ಅದೇ ಮಾರ್ಗವಾಗಿ ವಿಜಯವಾಡ-ಬೆಂಗಳೂರು ರೈಲು ಅಲ್ಲಿಂದ ಬೆಳಗ್ಗೆ 5.15ಕ್ಕೆ ಪ್ರಯಾಣ ಬೆಳೆಸಿ ತೆನಾಲಿ (5.39), ಒಂಗೋಲು (6:28), ನೆಲ್ಲೂರು (7.43), ತಿರುಪತಿ (9.45), ಚಿತ್ತೂರು (10.17), ಕಾಟ್ಪಾಡಿ (11.13), ಕೆಆರ್ ಪುರ (13.38) ಮಾರ್ಗವಾಗಿ ಎಸ್‌ಎಂವಿಟಿ ಬೆಂಗಳೂರಿಗೆ ಮಧ್ಯಾಹ್ನ (14.15 ಗಂಟೆಗೆ) ಬಂದು ಸೇರಲಿದೆ.

ವೇಳಾಪಟ್ಟಿ ಪ್ರಕಟಿಸಿರುವ ರೈಲ್ವೆ ಇಲಾಖೆಯು ಶೀಘ್ರವೇ ರೈಲು ಕಾರ್ಯಾಚರಣೆಯ ಅಧಿಕೃತ ಮಾಹಿತಿ ನೀಡಲಿದೆ. 2025ರ ಡಿಸೆಂಬರ್ ಹೊತ್ತಿಗೆ ಅರಂಭಿಸಲು ತೀರ್ಮಾನಿಸಲಾಗಿತ್ತು. ಕಾರಣಾಂತರಗಳಿಂದ ವಿಳಂಭವಾಗಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಈ ಬಗ್ಗೆ ಬಿಗ್ ಅಪ್ಡೇಟ್ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+