Gold Price Hike: ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಹೆಚ್ಚಳ: ಬಂಗಾರದ ಬೆಲೆ ಇನ್ನಷ್ಟು ಹೆಚ್ಚಳ ಫಿಕ್ಸ್‌, ಕಾರಣವೇನು ಇಲ್ಲಿದೆ ವಿವರ

Gold Price Hike: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ನಿರೀಕ್ಷೆ ಮೀರಿ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಒಂದು ವರ್ಷದ ವರೆಗೆ ಚಿನ್ನ ಖರೀದಿ ಮಾಡಬೇಡಿ ಎಂದು ಭಾರತೀಯರಿಗೆ ಮನವಿ ಮಾಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ವಿನಿಮಯ ಎಚ್ಚರಿಕೆಯ ನಡುವೆಯೂ ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿ ಆಮದು ಸುಂಕವನ್ನು ಬರೋಬ್ಬರಿ ಶೇ.15% ರಷ್ಟು ಹೆಚ್ಚಳ ಮಾಡಿದೆ. ಈ ನಡುವೆ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗಿದೆ. ಚಿನ್ನದ ಬೆಲೆ ಎಷ್ಟು ಹೆಚ್ಚಳವಾಗಿದೆ ಹಾಗೂ ಇನ್ನೂ ಎಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬೆಲೆ ಏರಿಕೆಗೆ ಕಾರಣವೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಭಾರತವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ.6% ರಿಂದ ಶೇ. 15% ಕ್ಕೆ ಹೆಚ್ಚಿಸಿದೆ. ವಿವಿಧ ಲೋಹಗಳ ವಿದೇಶಿ ಖರೀದಿಯನ್ನು ತಡೆಯುವ ಮತ್ತು ದೇಶದ ವಿದೇಶಿ ವಿನಿಮಯ ಮೀಸಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಮಾದರಿಯ ಹೆಚ್ಚಿನ ಸುಂಕಗಳು ವಿಶ್ವದ ಎರಡನೇ ಅತಿದೊಡ್ಡ ಅಮೂಲ್ಯ ಲೋಹಗಳ ಗ್ರಾಹಕರ ದೇಶವಾಗಿರುವ ಭಾರತದ ಬೇಡಿಕೆಯನ್ನು ಕುಗ್ಗಿಸಬಹುದು ಎಂದು ಅಂದಾಜಿಸಲಾಗಿದೆ.

Gold Price Hike

ಭಾರತದಲ್ಲಿ ಚಿನ್ನದ ವ್ಯಾಪಾರವು ಅತ್ಯಂತ ಹೆಚ್ಚಾಗಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಆಭರಣ ಚಿನ್ನ ಖರೀದಿ ಹಾಗೂ ಹೂಡಿಕೆಯ ಮೇಲಿನ ಚಿನ್ನ ಖರೀದಿಯು ಹೆಚ್ಚಾಗಿದೆ. ಇದೀಗ ಭಾರತದಲ್ಲಿ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಮತ್ತು ಏಷ್ಯಾದ ಅತ್ಯಂತ ಕಳಪೆ ಕರೆನ್ಸಿ ಎನಿಸಿಕೊಂಡಿರುವ ರೂಪಾಯಿ ಮೌಲ್ಯವನ್ನು ಬೆಂಬಲಿಸಲು ಕೇಂದ್ರ ಸರ್ಕಾರದ ಈ ಹೊಸ ಕ್ರಮವು ಸಹಾಯ ಮಾಡಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಹೆಚ್ಚಿನ ಆಮದು ತೆರಿಗೆಗಳು ಕಳ್ಳಸಾಗಣೆಕೆಗೆ ಕಾರಣವಾಗಬಹುದು ಎಂದು ಕೈಗಾರಿಕಾ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇನ್ನು ಚಿನ್ನ ಕಳ್ಳಸಾಗಾಣಿಕೆಯು 2024ರಲ್ಲಿ ಭಾರತ ಸುಂಕವನ್ನು ಕಡಿತಗೊಳಿಸಿದ ನಂತರ ಕಡಿಮೆಯಾಗಿತ್ತು.

ಸರ್ಕಾರವು ಚಿನ್ನ ಮತ್ತು ಬೆಳ್ಳಿ ಆಮದಿನ ಮೇಲೆ 10% ಮೂಲ ಕಸ್ಟಮ್ಸ್ ಸುಂಕ ಮತ್ತು 5% ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಅನ್ನು ವಿಧಿಸಿದೆ, ಪರಿಣಾಮಕಾರಿ ಆಮದು ತೆರಿಗೆಯನ್ನು 6% ರಿಂದ 15% ಕ್ಕೆ ಇಳಿಸಿದೆ.

ಮೇ 13ರಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಾಗಿದೆ ?

ಇನ್ನು ಮೇ 13ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯು ಭಾರೀ ಹೆಚ್ಚಳವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಒಂದು ವರ್ಷದ ಅವಧಿಗೆ ಚಿನ್ನ ಖರೀದಿ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ನಂತರ ಚಿನ್ನದ ಬೆಲೆಯಲ್ಲಿ ಹಲವು ಬದಲಾವಣೆಗಳು ಆಗಿವೆ. ಇದೀಗ ಮೇ 13ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯು ಹಲವು ಪಟ್ಟು ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 14,850 ರೂ. 10 ಗ್ರಾಂಗೆ 1,48,500 ರೂ. ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂ ಮೇಲೆ 735 ರೂ. ಹಾಗೂ 10 ಗ್ರಾಂನ ಮೇಲೆ 7,350 ರೂ. ಹೆಚ್ಚಳವಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 16,200 ರೂ. ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,62,000 ರೂ. ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು 1 ಗ್ರಾಂನ ಮೇಲೆ 802 ರೂ. ಹಾಗೂ 10 ಗ್ರಾಂನ ಮೇಲೆ 8,020 ರೂ. ಹೆಚ್ಚಳವಾಗಿದೆ.

ಬೆಳ್ಳಿ ಬೆಲೆ: ಚಿನ್ನದಂತೆ ಬೆಳ್ಳಿ ಬೆಲೆಯೂ ಭರ್ಜರಿ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 310 ರೂ. ಒಂದು ಕೆ.ಜಿಗೆ 3,10,000 ರೂ. ಆಗಿದೆ. ಒಂದು ಗ್ರಾಂನ ಮೇಲೆ 20 ರೂ. ಹಾಗೂ ಒಂದು ಕೆ.ಜಿಯ ಮೇಲೆ 20,000 ರೂ. ಭರ್ಜರಿ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+