Annayya: ಅಣ್ಣಯ್ಯ ಸೀರಿಯಲ್‌ನಲ್ಲಿ ‘ಆಪರೇಷನ್ ಪಿಂಕಿ’ ಶುರು: ಗುಂಡಮ್ಮನ ಜೀವನ ಸರಿ ಮಾಡುವುದಕ್ಕೆ ಹೊಸ ಪ್ಲ್ಯಾನ್
Annayya serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಣ್ಣಯ್ಯ ಸೀರಿಯಲ್ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಆಪರೇಷನ್ ಪಿಂಕಿ ಶುರುವಾಗಿದೆ. ಪಿಂಕಿ ಹಾಗೂ ಸೀನಾ ನಡುವಿನ ಪ್ರೇಮ ವಿಚಾರವು ಅಣ್ಣಯ್ಯಗೆ ತಿಳಿದಿದ್ದು, ಅಣ್ಣಯ್ಯ ಗುಂಡಮ್ಮನನ್ನು ಮನೆಗೆ ಕರೆದುಕೊಂಡು ಹೋಗಿದ್ದ ನನ್ನ ತಂಗಿಗೆ ನೋವಾಗಬಾರದು ಎನ್ನುವುದು ಅಣ್ಣಯ್ಯನ ತೀರ್ಮಾನವಾಗಿತ್ತು. ಇದೀಗ ಅಣ್ಣಯ್ಯನನೊಂದಿಗೆ ಮಾತನಾಡಿ ಮನವಿ ಮಾಡಿದ್ದ ಗುಂಡಮ್ಮ ಸೀನಾ ಮನೆಗೆ ವಾಪಸ್ ಬಂದಿದ್ದಾಳೆ. ಗುಂಡಮ್ಮನನ್ನು ಮಾವ ಅದ್ಧೂರಿಯಾಗಿ ಮನೆಗೆ ಬರ ಮಾಡಿಕೊಂಡಿದ್ದಾನೆ.
ಗುಂಡಮ್ಮನಿಗೆ ಮನೆಯಲ್ಲಿ ಊಟ ಕೊಡುತ್ತಿರಲಿಲ್ಲ ಎನ್ನುವ ವಿಚಾರವನ್ನು ಕೇಳಿದ್ದ ಅಣ್ಣಯ್ಯನ ರಕ್ತ ಕುದಿದಿತ್ತು. ಮೂಟೆಯಲ್ಲಿ ಅಕ್ಕಿ, ಸಾಮಾಗ್ರಿಗಳನ್ನು ತೆಗೆದುಕೊಂಡು ಬಂದು ಸೀನನ ಮನೆಯಲ್ಲಿ ಇರಿಸಿದ್ದು, ನನ್ನ ತಂಗಿ ಉಪವಾಸದಿಂದ ಇರಬಾರದು ಅಂತ ಅಣ್ಣಯ್ಯ ಎಚ್ಚರಿಕೆ ಕೊಟ್ಟಿದ್ದಾನೆ. ಇದನ್ನು ನೋಡಿ ಗುಂಡಮ್ಮನ ಅತ್ತೆ ನೀಲಕ್ಕನಿಗೆ ಭಯ ಶುರುವಾಗಿದೆ. ಅವಳ ತಂಗಿಗೆ ಒಂದು ತುತ್ತು ಅನ್ನ ಕೊಡಲಿಲ್ಲ ಅಂತ ಗೊತ್ತಾದ ಮೇಲೂ ಅಣ್ಣಯ್ಯ ನನ್ನನ್ನು ಯಾಕೆ ಸುಮ್ಮನೆ ಬಿಟ್ಟ ಅಂತ ನೀಲಕ್ಕ ಯೋಚನೆ ಮಾಡುವ ಸನ್ನಿವೇಶ ಇದೆ.

ಗುಂಡಮ್ಮ ಎದುರಿಸಿದ ಸಂಕಷ್ಟಗಳನ್ನು ನೋಡಿ ಅಣ್ಣಯ್ಯ ನೊಂದುಕೊಂಡಿದ್ದಾನೆ. ನಾನೇ ಮನೆಯಲ್ಲಿ ಸ್ವಲ್ಪ ತಿನ್ನು ಅಂತ ಹೇಳುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದೆ. ಎಲ್ಲಿ ದಪ್ಪ ಆಗಿ ಬಿಡುತ್ತಾಳೋ ಅಂತ ಕಷ್ಟಪಟ್ಟು ಒಂದು ಇಡ್ಲಿ ಕಡಿಮೆ ತಿನ್ನಮ್ಮ ಅಂತ ಹೇಳುತ್ತಿದ್ದೆ ಎಂದು ಗುಂಡಮ್ಮನ ಬಗ್ಗೆ ಅಣ್ಣಯ್ಯ ನೊಂದುಕೊಂಡಿದ್ದಾನೆ.
ಆಪರೇಷನ್ ಪಿಂಕಿ ಶುರು
ಅಣ್ಣಯ್ಯ ಸೀರಿಯಲ್‌ನಲ್ಲಿ ಇದೀಗ ಸೀನಾ - ಪಿಂಕಿ ನಡುವಿನ ಪ್ರೇಮ ವಿಚಾರವು ಇದೀಗ ಎಲ್ಲರಿಗೂ ಗೊತ್ತಾಗಿದ್ದು, ತಂಗಿ ಬಾಳು ಹಾಳಾಗಿದೆ ಅಂತ ಅಣ್ಣಯ್ಯ ದುಃಖದಲ್ಲಿದ್ದಾನೆ. ಹೇಗಾದರೂ ಮಾಡಿ ಗುಂಡಮ್ಮನ ಜೀವನ ಸರಿಪಡಿಸಬೇಕು ಎಂದು ಎಲ್ಲರೂ ನಿರ್ಧರಿಸಿದ್ದಾರೆ. ಇದಕ್ಕೆ ಪಾರು "ಆಪರೇಷನ್ ಪಿಂಕಿ" ಶುರು ಮಾಡಿದ್ದಾಳೆ. ಗುಂಡು ಜೀವನ ಸರಿ ಮಾಡುವ ಉದ್ದೇಶದಿಂದ ರಶ್ಮಿ ಒಬ್ಬಳನ್ನು ಬಿಟ್ಟು ಉಳಿದ ನಾದಿನಿಯರೆಲ್ಲರನ್ನು ಸೇರಿಸಿಕೊಂಡು ವಾಟ್ಸ್ ಆ್ಯಪ್ ಗ್ರೂಪ್ ಕ್ರಿಯೆಟ್ ಮಾಡಿರುವುದಾಗಿ ಪಾರು ಹೇಳಿದ್ದಾಳೆ. ಹೇಗಾದರೂ ಮಾಡಿ ಪಿಂಕಿ ಬಣ್ಣ ಬಯಲು ಮಾಡಬೇಕು, ಪಿಂಕಿ ಸೀನಾನ ಲವ್ ಮಾಡುತ್ತಿರುವುದು ನಿಜವಲ್ಲ. ಸೀನನ ಮೇಲಿ ಪಿಂಕಿಗೆ ನಿಜವಾಗಿಯೂ ಲವ್ ಇಲ್ಲ. ಸೀನ - ಮಾದಪ್ಪಣ್ಣನ ಆಸ್ತಿಗೋಸ್ಕರ ಪಿಂಕಿ ಪ್ರೀತಿಯ ನಾಟಕವಾಡುತ್ತಿದ್ದಾಳೆ. ಈ ವಿಷಯ ಮಾದಪ್ಪಣ್ಣನಿಗೂ ಗೊತ್ತಾಗಿದೆ. ಇದೀಗ ಈ ವಿಷಯದಲ್ಲಿ ಪಾರು ಆಪರೇಷನ್ ಪಿಂಕಿ ಎನ್ನುವ ಹೊಸ ಆಟ ಶುರು ಮಾಡಿದ್ದಾಳೆ.
ಮಾದಪ್ಪಣ್ಣ - ಸೀನಾ ಸಂಘರ್ಷ
ಇನ್ನು ಈಚೆಗೆ ಸೀನಾ ಹಾಗೂ ಅವರ ತಂದೆ ಮಾದಪ್ಪಣ್ಣನ ನಡುವೆ ಸಂಘರ್ಷ ಏರ್ಪಟ್ಟಿತ್ತು. ಹೆಂಗಿದ್ದಾಳೆ ನೋಡು ಮದುವೆ ಮಾಡ್ಸಿದ್ಯಲ್ಲ.... ಬೆಟ್ಟಕ್ಕೆ ಸೀರೆ ಉಡಿಸಿದವಳಂಗೆ ಇದಾಳೆ ಅಂತ ಸೀನಾ ಹೇಳಿದ್ದ ಇದನ್ನು ಕೇಳಿದ್ದ ಪಾರು ಹಾಗೂ ಅಣ್ಣಯ್ಯ ಆಘಾತಕ್ಕೆ ಒಳಗಾಗಿದ್ದರು. ಸೀನನ ಮೇಲೆ ಮಾದಪ್ಪಣ್ಣ ಕೈ ಮಾಡುವುದಕ್ಕೆ ಬಂದಾಗ ಸೀನಾ ಈ ರೀತಿ ಹೇಳಿದ್ದ. ಎಲ್ಲದಕ್ಕೂ ಕೈ ಮಾಡುವುದೇ ಆದರೆ ನನಗೂ ಬರುತ್ತದೆ ಅಂತಲೂ ಹೇಳಿದ್ದ ಇದನ್ನು ಕೇಳಿ ಮನೆಯವರೆಲ್ಲರೂ ಕಂಗಾಲಾಗಿದ್ದರು. ಇವಳ ಜೊತೆ ಸಂಸಾರ ಮಾಡಬೇಕಾ ನಾನು ಆಗಲ್ಲ ಎಂದಿದ್ದ. ಇದಕ್ಕೆ ಏನ್ಲಾ ಕರ್ದೆ ನನ್ನ ತಂಗಿನಾ ಅಂತ ಆಕ್ರೋಶದಲ್ಲಿ ಹಲ್ಲೆ ಮಾಡುವುದಕ್ಕೆ ಹೋಗಿದ್ದ ಆಗ ನೀಲಕ್ಕ ಬಂದು ತಡೆದಿದ್ದಳು. ಶಿವು ನಿನ್ನ ದಮ್ಮಯ್ಯ ಅನ್ನುತಿನಿ ಬಿಟ್ಟು ಬಿಡು ಅಂತ ಕೈ ಮುಗಿದು ಕೇಳಿಕೊಂಡಿದ್ದಳು.














Click it and Unblock the Notifications