ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಯಿ ಇನ್ನಷ್ಟು ಕುಸಿತ; ಡಾಲರ್ ಮಟ್ಟಕ್ಕೆ ಬಂದಿಳಿದ ಯೂರೋ; ಏನಿದರ ಪರಿಣಾಮ?

|
Google Oneindia Kannada News

ನವದೆಹಲಿ, ಜುಲೈ 13: ಯೂರೋಪಿಯನ್ ಯೂನಿಯನ್ ರಾಷ್ಟ್ರಗಳ ಯೂರೋ ಕರೆನ್ಸಿ ಈಗ ಯುಎಸ್ ಡಾಲರ್ ಮಟ್ಟಕ್ಕೆ ಬಂದಿಳಿದಿದೆ. ಅಮೆರಿಕನ್ ಡಾಲರ್ ಈಗ ಒಂದು ಯೂರೋಗೆ ಸರಿಸಮವಾಗಿದೆ. ಕಳೆದ 20 ವರ್ಷದಲ್ಲಿ ಇದೇ ಮೊದಲ ಬಾರಿಗೆ ಯೂರೋ ಮತ್ತು ಡಾಲರ್ ಎರಡೂ ಸಮಸ್ಥಿತಿಯಲ್ಲಿ ಇವೆ.

ಇದೇ ವೇಳೆ, ಭಾರತದ ರೂಪಾಯಿ ಕರೆನ್ಸಿ ಡಾಲರ್ ಎದುರು ಇನ್ನಷ್ಟು ಕುಸಿದಿದೆ. ಮಂಗಳವಾರದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಒಂದು ಅಮೆರಿಕನ್ ಡಾಲರ್ ಎದುರು 79.66 ರೂ ನಂತೆ ವಹಿವಾಟು ನಡೆದಿದೆ. ಇದು ರೂಪಾಯಿ ಕರೆನ್ಸಿ ಇತಿಹಾಸದಲ್ಲೇ ಅತ್ಯಂತ ಕಳಪೆ ಸ್ಥಿತಿಯಾಗಿದೆ.

ಹಣದುಬ್ಬರ ಎಂದರೇನು? ಭಾರತ ಹಾಗು ಬೇರೆ ದೇಶಗಳ ಪರಿಸ್ಥಿತಿ ಹೇಗೆ? ಹಣದುಬ್ಬರ ಎಂದರೇನು? ಭಾರತ ಹಾಗು ಬೇರೆ ದೇಶಗಳ ಪರಿಸ್ಥಿತಿ ಹೇಗೆ?

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮವಾಗಿ ಇಡೀ ಯೂರೋಪಿಯನ್ ರಾಷ್ಟ್ರಗಳ ಅರ್ಥ ವ್ಯವಸ್ಥೆ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ. ಹೂಡಿಕೆದಾರರ ಈ ಭಯದ ಪರಿಣಾಮವೇ ಯೂರೋ ಮೌಲ್ಯದ ಕುಸಿತವಾಗುತ್ತಿರುವುದು ಎಂದು ಭಾವಿಸಲಾಗಿದೆ.

ಯುದ್ಧಕ್ಕೆ ಮುನ್ನ ಒಂದು ಯೂರೋ ಮೌಲ್ಯ 1.13 ಡಾಲರ್ ಇತ್ತು. ಈಗ ಬಹಳ ದಿನಗಳಾದರೂ ಯುದ್ಧ ಮುಗಿಯುತ್ತಿಲ್ಲ. ರಷ್ಯಾ ಮತ್ತು ಉಕ್ರೇನ್ ದೇಶಗಳ ತೈಲದ ಮೇಲೆ ಯೂರೋಪಿಯನ್ ಮಾರುಕಟ್ಟೆ ಅವಲಂಬಿತವಾಗಿತ್ತು. ಈಗ ಅಲ್ಲಿ ತೈಲ ಬಿಕ್ಕಟ್ಟು ಶುರುವಾಗಿದೆ. ಅದರ ಒಂದು ಪರಿಣಾಮ ಯೂರೋ ಕರೆನ್ಸಿ ಮೌಲ್ಯ ನಶಿಸಿರುವುದು.

ರೂಪಾಯಿ ಕರೆನ್ಸಿಯಲ್ಲೇ ವಹಿವಾಟು ನಡೆಸಲು ಆರ್‌ಬಿಐ ಅನುಮತಿ ರೂಪಾಯಿ ಕರೆನ್ಸಿಯಲ್ಲೇ ವಹಿವಾಟು ನಡೆಸಲು ಆರ್‌ಬಿಐ ಅನುಮತಿ

ಹಣದುಬ್ಬರಕ್ಕೆ ದಾರಿ

ಹಣದುಬ್ಬರಕ್ಕೆ ದಾರಿ

ಯೂರೋ ವಲಯದಲ್ಲಿ ಆಮದು ಮಾಡಲಾದ ಅರ್ಧದಷ್ಟು ಸರಕುಗಳನ್ನು ಡಾಲರ್ ಕರೆನ್ಸಿಯಲ್ಲಿ ಇನ್ವಾಯ್ಸ್ ಮಾಡಲಾಗುತ್ತದೆ. ಯೂರೋ ಕರೆನ್ಸಿಯಲ್ಲಿ ಇನ್ವಾಯ್ಸ್ ಮಾಡಲಾಗುವ ಆಮದು ಸರಕುಗಳ ಪ್ರಮಾಣ ಶೇ. 40 ಇರಬಹುದು. ಆಮದು ವಸ್ತುಗಳಲ್ಲಿ ತೈಲ ಮತ್ತು ಅನಿಲದ ಪ್ರಮಾಣ ಹೆಚ್ಚು. ಇವುಗಳ ವಹಿವಾಟು ಡಾಲರ್‌ನಲ್ಲೇ ನಡೆಯುತ್ತದೆ. ಯುದ್ಧದ ಪರಿಣಾಮ ತೈಲ ಬೆಲೆ ಗಗನಕ್ಕೇರಿದೆ. ಹೀಗಾಗಿ ಡಾಲರ್‌ನಲ್ಲಿ ವಹಿವಾಟು ಆಗುವುದೂ ಹೆಚ್ಚಾಗಿದೆ.

"ಐರೋಪ್ಯ ದೇಶಗಳು ಆಮದು ಮಾಡಿಕೊಳ್ಳುವ ಸರಕುಗಳಿಗೆ ಹೆಚ್ಚು ಹಣ ಪಾವತಿಸಬೇಕು. ಆಮದಿತ ವಸ್ತುಗಳ ಸ್ಪರ್ಧಾತ್ಮಕತೆ ಕಡಿಮೆ ಆಗುತ್ತದೆ. ಅವುಗಳ ಮಧ್ಯೆ ಸ್ಪರ್ಧೆ ಏರ್ಪಟ್ಟು ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಪರಿಣಾಮವಾಗಿ ಹಣದುಬ್ಬರ ಏರಿಕೆಯಾಗುತ್ತದೆ. ಆಗ ಜನರ ಕೊಳ್ಳುವಿಕೆ ಶಕ್ತಿ ದುರ್ಬಲಗೊಳ್ಳುತ್ತದೆ" ಎಂದು ಫ್ರಾನ್ಸ್ ದೇಶದ ಸೈನ್ಸಸ್ ಪೋ ಯೂನಿವರ್ಸಿಟಿಯ ಪ್ರೊಫೆಸರ್ ಇಸಾಬೆಲೆ ಮೆಜೀನ್ ಅಭಿಪ್ರಾಯಪಡುತ್ತಾರೆ.

ರಫ್ತು ಉತ್ತೇಜನ

ರಫ್ತು ಉತ್ತೇಜನ

ಕರೆನ್ಸಿ ಮೌಲ್ಯ ಕುಸಿತದಿಂದ ಎಲ್ಲವೂ ಕೆಟ್ಟದೇ ಆಗುತ್ತೆ ಎಂದು ಭಾವಿಸಬೇಕಿಲ್ಲ. ಯಾವುದೇ ಕರೆನ್ಸಿ ಕುಸಿದರೂ ಆ ದೇಶದ ರಫ್ತು ಕೇಂದ್ರಿತ ಉದ್ಯಮಕ್ಕೆ ಒಳ್ಳೆಯ ಲಾಭವಾಗುತ್ತದೆ. ಅಂತೆಯೇ, ಯೂರೋಪ್ ದೇಶಗಳ ರಫ್ತು ವಲಯಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ. ಅಮೆರಿಕನ್ ಡಾಲರ್‌ನಷ್ಟೇ ಸಮವಾಗಿ ಯೂರೋ ಇರುವುದರಿಂದ ಜಾಗತಿಕವಾಗಿ ಯೂರೋಪಿಯನ್ ದೇಶಗಳ ಸರಕುಗಳಿಗೆ ಬೇಡಿಕೆ ಹೆಚ್ಚಬಹುದು. ಪರಿಣಾಮವಾಗಿ ರಫ್ತು ಹೆಚ್ಚಾಗಬಹುದು. ರಫ್ತು ಹೆಚ್ಚಾದಷ್ಟೂ ಲಾಭ ಹೆಚ್ಚು.

ಯೂರೋಪ್‌ನ ವೈಮಾನಿಕ ಕ್ಷೇತ್ರ, ವಾಹನ, ಐಷಾರಾಮಿ ವಸ್ತು, ರಾಸಾಯನಿಕ ಉದ್ಯಮ ಮೊದಲಾದ ವಲಯಗಳು ಹೆಚ್ಚು ರಫ್ತು ಮಾಡುತ್ತವೆ.

ಬಡ್ಡಿ ದರ ಹೆಚ್ಚಳ

ಬಡ್ಡಿ ದರ ಹೆಚ್ಚಳ

ಯೂರೋ ಕರೆನ್ಸಿ ಕುಸಿತದ ಪರಿಣಾಮವಾಗಿ ಹಣದುಬ್ಬರ ಹೆಚ್ಚಾಗುತ್ತದೆ. ಅದನ್ನು ನಿಯಂತ್ರಿಸಲು ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರಗಳನ್ನು ಗಣನೀಯವಾಗಿ ಏರಿಸುವ ಸಾಧ್ಯತೆ ಇದೆ. ಕಳೆದ ೧೧ ವರ್ಷಗಳಲ್ಲೇ ದಾಖಲೆ ಮಟ್ಟದಲ್ಲಿ ಬಡ್ಡಿ ದರ ಏರಿಕೆ ಆಗುವುದನ್ನು ಯೂರೋಪ್‌ನಲ್ಲಿ ನಿರೀಕ್ಷಿಸಬಹುದು.

ಇನ್ನು, ಅಮೆರಿಕಕ್ಕೆ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರು ಯೂರೋಪಿಯನ್ನರೇ ಆಗಿದ್ದಾರೆ. ಈಗ ಯೂರೋಪಿಯನ್ನರಿಗೆ ಅಮೆರಿಕಾ ಪ್ರವಾಸ ದುಬಾರಿ ಎನಿಸುತ್ತದೆ. ಪ್ರವಾಸಿಗರು ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ಪರಿಣಾಮವಾಗಿ ಅಮೆರಿಕಕ್ಕೆ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಬಹುದು.

ಯಾವುದೇ ಕರೆನ್ಸಿ ಮೌಲ್ಯ ಏರಿಕೆ ಅಥವಾ ಕುಸಿತದಿಂದ ಇಂಥ ಸಣ್ಣಪುಟ್ಟ ಅಡ್ಡಪರಿಣಾಮಗಳು, ಲಾಭಗಳು ಹೇರಳವಾಗಿರುತ್ತವೆ. ಹಾಗೆಯೇ ದೊಡ್ಡ ಮಟ್ಟಕ್ಕೆ ಲಾಭ ಅಥವಾ ನಷ್ಟವೂ ಇರುತ್ತದೆ.

ರೂಪಾಯಿ ಕುಸಿತ ಯಾಕೆ?

ರೂಪಾಯಿ ಕುಸಿತ ಯಾಕೆ?

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಒಂದು ಡಾಲರ್‌ಗೆ ಈಗ 79.66 ರೂಪಾಯಿ ದರ ಇದೆ. ಇದಕ್ಕೆ ಬಹು ಕಾರಣಗಳಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಮೊದಲಿಗೆ ವಿಶ್ವದ ಬೇರೆ ಪ್ರಮುಖ ಕರೆನ್ಸಿಗಳಿಗೆ ಹೋಲಿಸಿದರೆ ಡಾಲರ್ ಮೌಲ್ಯ ಬಹಳಷ್ಟು ಏರಿದೆ. ಅದರ ಪರಿಣಾಮ ರೂಪಾಯಿ ಕರೆನ್ಸಿ ಮೇಲೆಯೂ ಆಗಿದೆ. ಹಾಗೆಯೇ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಅಂತರ ಹೆಚ್ಚಾಗಿರುವುದೂ ರೂಪಾಯಿ ಕುಸಿತಕ್ಕೆ ಇನ್ನೊಂದು ಪ್ರಮುಖ ಕಾರಣ. ಅಂದರೆ, ಅಮೆರಿಕದಿಂದ ಭಾರತ ಆಮದು ಮಾಡಿಕೊಳ್ಳುವ ಪ್ರಮಾಣಕ್ಕೂ, ಭಾರತದಿಂದ ಅಮೆರಿಕ ಆಮದು ಮಾಡಿಕೊಳ್ಳುವ ಪ್ರಮಾಣಕ್ಕೂ ಭಾರೀ ಅಂತರ ಇದೆ. ಜೂನ್ ತಿಂಗಳ ಅಂಕಿ ಅಂಶದ ಪ್ರಕಾರ ಈ ವ್ಯಾಪಾರ ಅಂತರ 25.63 ಬಿಲಿಯನ್ ಡಾಲರ್ (ಸುಮಾರು 2 ಲಕ್ಷಕೋಟಿ ರೂಪಾಯಿ) ಇದೆ.

ಇದೇ ವೇಳೆ, ರೂಪಾಯಿ ಕರೆನ್ಸಿಗೆ ಪುಷ್ಟಿ ನೀಡಲು ಆರ್‌ಬಿಐ ವಿಶೇಷ ವ್ಯವಸ್ಥೆ ಮಾಡಿದೆ. ಭಾರತ ನಡೆಸುವ ರಫ್ತು ಮತ್ತು ಆಮದು ವಹಿವಾಟುಗಳನ್ನು ಭಾರತೀಯ ರೂಪಾಯಿ ಕರೆನ್ಸಿಯಲ್ಲೇ ನಡೆಸಲು ಆರ್‌ಬಿಐ ಅನುಮತಿಸಿದೆ. ಇದು ನಿರೀಕ್ಷಿತ ರೀತಿಯಲ್ಲಿ ನಡೆದಲ್ಲಿ ರೂಪಾಯಿ ಕರೆನ್ಸಿ ಮೌಲ್ಯಕ್ಕೆ ಭರ್ಜರಿ ಪುಷ್ಟಿ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Euro currency has come down to level with Dollar first time in 20 years. Rupee too has gone down further from its historical low.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X