LPG Price In India : ಭಾರತದ ಎಲ್‌ಪಿಜಿ ದರ ವಿಶ್ವದಲ್ಲೇ ದುಬಾರಿ; ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಹೆಚ್ಚು

ನವದೆಹಲಿ, ಏ. 8: ಭಾರತದಲ್ಲಿ ಎಲ್‌ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಮೊದಲಾದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಎಲ್‌ಪಿಜಿ ಬೆಲೆ ವಿಶ್ವದಲ್ಲೇ ಅತಿ ಹೆಚ್ಚು ಎಂಬುದು ತಿಳಿದುಬಂದಿದೆ. ಹಾಗೆಯೇ, ಪೆಟ್ರೋಲ್ ಬೆಲೆ ವಿಶ್ವದಲ್ಲಿ ಮೂರನೇ ಅತಿ ಹೆಚ್ಚು ದುಬಾರಿಯಾಗಿದೆ. ಈ ಪಟ್ಟಿಯಲ್ಲಿ ಡೀಸೆಲ್ ಎಂಟನೇ ಸ್ಥಾನದಲ್ಲಿದೆ. ಇದು ಪರ್ಚೇಸಿಂಗ್ ಪವರ್ ಪ್ಯಾರಿಟಿ (Purchasing Power Parity), ಅಂದರೆ ಕರೆನ್ಸಿಗಳ ಸರಾಸರಿ ಮೌಲ್ಯದ ಲೆಕ್ಕಾಚಾರವನ್ನು ಪರಿಗಣಿಸಿದಾಗ ಭಾರತದಲ್ಲಿ ಎಲ್‌ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಹಳ ಅಗಾಧ ಎನಿಸಿದೆ.

ಒಂದು ವಸ್ತುವಿನ ಬೆಲೆ ಹೆಚ್ಚಳಕ್ಕೆ ವಿವಿಧ ಕಾರಣಗಳಿವೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಅಂತಾರಾಷ್ಟ್ರೀಯ ತೈಲ ಬೆಲೆಗಳ ಮೇಲೆ ಅವಲಂಬಿತವಾಗಿದೆ. ಅಲ್ಲಿ ಬೆಲೆ ಹೆಚ್ಚಳವಾದರೆ ಬಹುತೇಕ ಎಲ್ಲಾ ದೇಶಗಳಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳವಾಗುತ್ತದೆ. ಆದರೆ, ಈ ಬೆಲೆ ಹೆಚ್ಚಳ ಒಂದೊಂದು ದೇಶಕ್ಕೂ ವಿಭಿನ್ನವಾದ ಪರಿಣಾಮ ಬೀರುತ್ತದೆ. ಒಂದು ಲೀಟರ್ ಪೆಟ್ರೋಲ್ ಬೆಲೆ 105 ರೂಪಾಯಿ ಇದೆ. ಡಾಲರ್‌ಗೆ ಪರಿವರ್ತಿಸಿದರೆ ಇದು 1.38 ಡಾಲರ್ ಆಗುತ್ತದೆ. ಈ ಹಣ ಅಮೆರಿಕದ ನಿವಾಸಿಯ ಆದಾಯದಲ್ಲಿ ಬಹಳ ಅಲ್ಪಭಾಗದ ವೆಚ್ಚ ಎನಿಸುತ್ತದೆ. ಆದರೆ, ಸರಾಸರಿ ಭಾರತೀಯನಿಗೆ ಇದು ಆತನ ಆದಾಯದ ದೊಡ್ಡ ಭಾಗವಾಗುತ್ತದೆ.

ಒಂದೊಂದು ಕರೆನ್ಸಿಗೂ ಅದರದ್ದೇ ಆದ ಖರೀದಿ ಶಕ್ತಿ (Purchasing Power) ಇರುತ್ತದೆ. ಒಂದು ದೇಶದ ಕರೆನ್ಸಿ ಬೇರೆ ದೇಶದಲ್ಲಿ ಬೇರೆ ರೀತಿಯ ಮೌಲ್ಯ ಹೊಂದಿರಬಹುದು, ತಮ್ಮ ದೇಶದಲ್ಲಿ ಅದರ ಶಕ್ತಿ ಬೇರೆ ಇದ್ದಿರಬಹುದು. ಹೀಗಾಗಿ, ಒಂದು ವಸ್ತುವಿನ ಬೆಲೆ ಹೆಚ್ಚಳ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ.

Know how LPG cost in India is highest in world

ಹೀಗಾಗಿ, ಆರ್ಥಿಕ ತಜ್ಞರು ಮಾಮೂಲಿಯ ವಿನಿಯಮ ದರ (Nominal Exchange Rate) ಬದಲು ಪಿಪಿಪಿ ಅಥವಾ ಅಂತರರಾಷ್ಟ್ರೀಯ ಡಾಲರ್ ದರವನ್ನು ರೂಪಿಸಿದ್ದಾರೆ. ಪ್ರತಿಯೊಂದು ಕರೆನ್ಸಿಯು ಆಯಾ ದೇಶದ ಮಾರುಕಟ್ಟೆಯಲ್ಲಿ ಎಷ್ಟು ಖರೀದಿ ಸಾಮರ್ಥ್ಯ ಹೊಂದಿದೆ ಎಂಬ ಲೆಕ್ಕಾಚಾರ ಮಾಡಿ ಪಿಪಿಪಿ ಡಾಲರ್ ಮೌಲ್ಯವನ್ನು ನಿಗದಿ ಮಾಡುತ್ತಾರೆ. ಅದರ ಪ್ರಕಾರ 2022ರಲ್ಲಿ ಅಂತಾರಾಷ್ಟ್ರೀಯ ಡಾಲರ್ ಮೌಲ್ಯ ಸರಾಸರಿ 22.6 ರೂಪಾಯಿ ಹೊಂದಿದೆ. ಅಂದರೆ, ಮಾಮೂಲಿಯ ವಿನಿಯಮ ದರದಲ್ಲಿ ಒಂದು ಅಮೆರಿಕನ್ ಡಾಲರ್‌ಗೆ 75.84 ರೂ ಇದ್ದರೆ ಪಿಪಿಪಿ ದರ 22.6 ರೂ ಇದೆ.

ಈ ಅಂತಾರಾಷ್ಟ್ರೀಯ ಡಾಲರ್ ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಪೆಟ್ರೋಲ್ ಬೆಲೆ 5.2 ಡಾಲರ್ ಆಗುತ್ತದೆ. ಇದು ವಿಶ್ವದಲ್ಲೇ ಮೂರನೇ ಅತ್ಯಂತ ದುಬಾರಿ ಎಂದು ಪರಿಗಣಿಸಲಾಗಿದೆ.
151 ದೇಶಗಳ ಪೈಕಿ ಸೂಡಾನ್ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ 8 ಅಂತಾರಾಷ್ಟ್ರೀಯ ಡಾಲರ್ ಇದೆ. ಇದು ಅತ್ಯಂತ ದುಬಾರಿ. ನಂತರದ ಸ್ಥಾನದಲ್ಲಿ ಲಾವೋಸ್ ದೇಶದ ಇದೆ. ಇಲ್ಲಿ ಪೆಟ್ರೋಲ್ ಬೆಲೆ 5.6 ಡಾಲರ್ ಇದೆ. ಆಲ್ಬೇನಿಯಾದಲ್ಲಿ ಇದರ ದರ 5 ಡಾಲರ್ ಇದೆ.

ಎಲ್‌ಪಿಜಿ ದರಗಳ ವಿಚಾರಕ್ಕೆ ಬಂದರೆ ಭಾರತವೇ ದುಬಾರಿ ದರ ಹೊಂದಿರುವುದು. 54 ದೇಶಗಳ ದತ್ತಾಂಶಗಳನ್ನು ಪರಿಗಣಿಸಲಾಗಿದೆ. ಭಾರತದಲ್ಲಿ ಒಂದು ಲೀಟರ್ ಎಲ್‌ಪಿಜಿ ಬೆಲೆ 3.5 ಅಂತಾರಾಷ್ಟ್ರೀಯ ಡಾಲರ್ ಬೆಲೆ ಇದೆ. ನಂತರದ ಸ್ಥಾನದಲ್ಲಿ ಟರ್ಕಿ, ಫಿಜಿ, ಮಾಲ್ಡೋವಾ ಮತ್ತು ಉಕ್ರೇನ್ ದೇಶಗಳಿವೆ. ಆದರೆ, ಸ್ವಿಟ್ಜರ್ಲ್ಯಾಂಡ್, ಫ್ರಾನ್ಸ್, ಕೆನಡಾ, ಬ್ರಿಟನ್ ದೇಶಗಳಲ್ಲಿ ಒಂದು ಲೀಟರ್ ಎಲ್‌ಪಿಜಿ ಬೆಲೆ ಕೇವಲ 1 ಡಾಲರ್ ಮಾತ್ರ ಇದೆ.

ಪರ್ಚೇಸ್ ಪವರ್ ಪ್ಯಾರಿಟಿ ಲೆಕ್ಕಾಚಾರಕ್ಕೆ ಹಲವು ಲೆಕ್ಕಾಚಾರಗಳಿವೆ. ಒಂದು ದೇಶದ ಜಿಡಿಪಿ, ತಲಾದಾಯ ಇತ್ಯಾದಿಯನ್ನು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಒಂದು ಲೀಟರ್ ಪೆಟ್ರೋಲ್‌ನ ದರವು ಸರಾಸರಿ ಅಮೆರಿಕನ್ ವ್ಯಕ್ತಿಯ ನಿತ್ಯ ಆದಾಯದ ಶೇ. 0.6ರಷ್ಟಿರಬಹುದು. ಆದರೆ, ಸರಾಸರಿ ಭಾರತೀಯನ ಆದಾಯದಲ್ಲಿ ಪೆಟ್ರೋಲ್ ಬೆಲೆ ಶೇ. 23.5 ಭಾಗವಾಗಿದೆ ಎಂದು ತಿಳಿಯಲಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

      ದಿನೇಶ್ ಕಾರ್ತಿಕ್ ಕ್ರಿಕೆಟ್ ಕೆರಿಯರ್ ಗೆ ಧೋನಿ ವಿಲನ್ ಆಗಿ ಕಾಡಿದ್ದು ಹೇಗೆ? | Oneindia kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+