ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Curd Price : ಸಿಎಂ ಬೊಮ್ಮಾಯಿ ಸೂಚನೆ: ಮೊಸರು, ಮಜ್ಜಿಗೆ ದರ ಕಡಿಮೆ ಮಾಡಿದ ಕೆಎಂಎಫ್‌

|
Google Oneindia Kannada News

ಬೆಂಗಳೂರು, ಜುಲೈ 17: ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ದರಕ್ಕೆ ಅನುಗುಣವಾಗಿ ಮೊಸರು, ಮಜ್ಜಿಗೆ ದರ ಹೆಚ್ಚಳ ಮಾಡಿದ್ದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ಒಂದೇ ದಿನದಲ್ಲಿ ಮತ್ತೆ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ದರ ಪರಿಷ್ಕರಣೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು.

ಹಾಲಿನ ಉತ್ಪನ್ನಗಳ ಮೇಲೂ ಕೇಂದ್ರ ಸರ್ಕಾರ ಶೇಕಡ 5 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ತನ್ನ ಉತ್ಪನ್ನಗಳಾದ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿತ್ತು.

ನೂತನ ಜಿಎಸ್‌ಟಿ ದರ: ಹಾಲಿನ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆನೂತನ ಜಿಎಸ್‌ಟಿ ದರ: ಹಾಲಿನ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ

ದರ ಹೆಚ್ಚಳದಿಂದ ಲೀಟರ್ ನಂದಿನಿ ಮೊಸರಿನ ದರ 43 ರುಪಾಯಿ 46 ರುಪಾಯಿಗೆ. ಅರ್ಧ ಲೀಟರ್ ಮೊಸರಿನ ಬೆಲೆ 22 ರುಪಾಯಿಗಳಿಂದ 24 ರುಪಾಯಿಗೆ. 200 ಎಂಎಲ್‌ ಮಜ್ಜಿಗೆ ಹಾಗೂ ಲಸ್ಸಿ ಬೆಲೆ 1 ರುಪಾಯಿ ಹೆಚ್ಚಿಸಿತ್ತು. ಸೋಮವಾರದಿಂದ ನೂತನ ದರ ಜಾರಿಯಾಗಿತ್ತು. ಆದರೆ ಕೆಎಂಎಫ್‌ನ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ದರ ಪರಿಷ್ಕರಣೆ ಮಾಡಲಾಗಿದ್ದು, ಮೊಸರು, ಮಜ್ಜಿಗೆ ದರವನ್ನು ಕಡಿಮೆ ಮಾಡಿದೆ.

KMF Revised Curd And Buttermilk Price After People Outrage Against Price Hike

200 ಗ್ರಾಂ ಮೊಸರಿನ ದರ 12 ರುಪಾಯಿಗೆ ಹೆಚ್ಚಳ ಮಾಡಿದ್ದನ್ನು ಪರಿಷ್ಕರಣೆ ಮಾಡಿದ್ದು 10.50 ರುಪಾಯಿಗೆ ಇಳಿಕೆ ಮಾಡಿದೆ. 500 ಗ್ರಾಂ ಮೊಸರಿನ ದರವನ್ನು 24 ರುಪಾಯಿಯಿಂದ 23 ರುಪಾಯಿಗೆ ಕಡಿಮೆ ಮಾಡಿದೆ. ಒಂದು ಲೀಟರ್ ಮೊಸರಿನ ದರ 46 ರುಪಾಯಿಗಳಿಂದ 45 ರುಪಾಯಿಗೆ ಕಡಿಮೆ ಮಾಡಿದೆ, 8 ರುಪಾಯಿ ಆಗಿದ್ದ ಮಜ್ಜಿಗೆ ಬೆಲೆ 7.50 ರುಪಾಯಿಗೆ ಕಡಿಮೆ ಮಾಡಿ ಆದೇಶ ಹೊರಡಿಸಿದೆ. ನೂತನ ಜಿಎಸ್‌ಟಿ ಹಾಲಿಗೆ ಅನ್ವಯ ಆಗದ ಕಾರಣ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಹಾಲು ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ: ರೈತರು ಆಕ್ರೋಶಹಾಲು ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ: ರೈತರು ಆಕ್ರೋಶ

ಜೂನ್ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್​ಟಿ ಮಂಡಳಿಯ 47ನೇ ಸಭೆಯು ಹಾಲಿನ ಉತ್ಪನ್ನಗಳು ಹಾಗೂ ಆಹಾರ ಧಾನ್ಯಗಳಿಗೆ ನೀಡಿದ್ದ ತೆರಿಗೆ ವಿನಾಯಿತಿ ಹಿಂಪಡೆದಿತ್ತು ಮಾತ್ರವಲ್ಲದೆ ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದೆ.

KMF Revised Curd And Buttermilk Price After People Outrage Against Price Hike

ತಮ್ಮ ಮೇಲೆ ಬೀಳುವ ಜಿಎಸ್‌ಟಿ ಹೊರೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾವಣೆ ಮಾಡಲಿವೆ. ನಂದಿನಿ ಮಾತ್ರವಲ್ಲದೆ, ಖಾಸಗಿ ಡೇರಿ ಕಂಪನಿಗಳಾದ ದೊಡ್ಲ, ಆರೋಗ್ಯ, ಹೆರಿಟೇಜ್ ಸಹ ಮೊಸರು, ಮಜ್ಜಿಗೆ ದರಗಳನ್ನು ಹೆಚ್ಚಿಸಿವೆ.

English summary
Karnataka Milk Fedaration (KMF) Revised Curd And Buttermilk Price After People Outrage Against Price Hike. Slightly Cut down the price on curd and buttermilk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X