ಕಾರು, ಬೈಕ್ ಇದ್ದಲ್ಲಿಗೆ ಕೆಎಫ್‍ಸಿ ಉತ್ಪನ್ನಗಳ ಡೆಲಿವರಿ
ಬೆಂಗಳೂರು, ಮೇ 22: ಗ್ರಾಹಕರು ಮತ್ತು ತನ್ನ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಕೆಎಫ್‍ಸಿ ಸುರಕ್ಷಿತಾ ವಿಧಾನಗಳನ್ನು ದ್ವಿಗುಣಗೊಳಿಸಿದ್ದು, ಗ್ರಾಹಕರ ಕಾರು ಅಥವಾ ಬೈಕು ಇರುವೆಡೆಗೇ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
Recommended Video

ಸಂಪರ್ಕರಹಿತ ಸೇವೆಗಳನ್ನು ವಿಸ್ತರಣೆ ಮಾಡಿರುವ ಕೆಎಫ್‍ಸಿ ದೇಶದಲ್ಲಿ ಇದೇ ಮೊದಲ ಬಾರಿಗೆ ಯುವರ್ ಕೆರೋರ್ ಬೈಕೀಸ್ ಎಂಬ ಈ ವಿನೂತನವಾದ ಯೋಜನೆಯನ್ನು ಆರಂಭಿಸಿದೆ. ಇದರ ಮೂಲಕ ಗ್ರಾಹಕರ ವಾಹನದ ಬಳಿಗೆ ಹೋಗಿ ಆಹಾರ ಉತ್ಪನ್ನಗಳ ಪ್ಯಾಕೆಟ್‍ಗಳನ್ನು ನೀಡಲಿದೆ.
ಇದಕ್ಕಾಗಿ ಗ್ರಾಹಕರು ಕೆಎಫ್‍ಸಿ ಪ್ರೀಪೇಯ್ಡ್ ಆ್ಯಪ್, ವೆಬ್‍ಸೈಟ್ ಅಥವಾ ಎಂಸೈಟ್ ಮೂಲಕ ತಮಗಿಷ್ಟವಾದ ಆಹಾರವನ್ನು ಆರ್ಡರ್ ಮಾಡಬೇಕು ಮತ್ತು ರೆಸ್ಟೋರೆಂಟ್ ಸಮೀಪ ನಿಗದಿಪಡಿಸುವ ಸ್ಥಳಕ್ಕೆ ಬಂದು ನಿಲ್ಲಬೇಕು. ಆಗ ಗ್ರಾಹಕರಿಗೆ ಕೆಎಫ್‍ಸಿ ಸಿಬ್ಬಂದಿ ಬಂದು ಆರ್ಡರ್ ಅನ್ನು ನೀಡಲಿದ್ದಾರೆ. ಈ ಯೋಜನೆಯನ್ನು ಬೆಂಗಳೂರು, ಪುಣೆ, ಮುಂಬೈ, ಚೆನ್ನೈ ಮತ್ತು ದೆಹಲಿಯ ಕೆಲವು ಆಯ್ದ ಕೆಎಫ್‍ಸಿ ರೆಸ್ಟೋರೆಂಟ್‍ಗಳಲ್ಲಿ ಪರೀಕ್ಷೆ ಮಾಡಲಾಗಿದ್ದು, ಯಶಸ್ಸನ್ನು ಕಂಡಿದೆ.

ಕೆಎಫ್‍ಸಿ ಇಂಡಿಯಾದ ಮೋಕ್ಷ್ ಚೋಪ್ರಾ
ಈ ಉಪಕ್ರಮದ ಬಗ್ಗೆ ಮಾತನಾಡಿದ ಕೆಎಫ್‍ಸಿ ಇಂಡಿಯಾದ ಚೀಫ್ ಮಾರ್ಕೆಟಿಂಗ್ ಆಫೀಸರ್ ಮೋಕ್ಷ್ ಚೋಪ್ರಾ ಅವರು, "ಕೆಎಫ್‍ಸಿ ಟು ಯುವರ್ ಕಾರ್ ಆರ್ ಬೈಕ್'' ನೊಂದಿಗೆ ಕೆಎಫ್‍ಸಿ ಉತ್ಪನ್ನಗಳನ್ನು ತಲುಪಿಸುವುದು ಸುಲಭವಾಗಿದೆ. ಇದರ ಉದ್ದೇಶ ಹೆಚ್ಚಿನ ಸುರಕ್ಷತೆಯನ್ನು ಕಾಪಾಡುವುದು. ಅಲ್ಲದೇ, ಆಹಾರ ಉತ್ಪನ್ನಗಳಿಗಾಗಿ ರಸ್ತೆಗಳಲ್ಲಿ ಹುಡುಕಾಟ ನಡೆಸುವವರಿಗೆ ಅಥವಾ ತಮ್ಮ ಕಠಿಣ ಶಿಫ್ಟ್‍ಗಳನ್ನು ಮುಗಿಸಿ ಸುಸ್ತಾಗಿ ಮನೆಯ ಕಡೆ ಹೊರಟಿರುವವರಿಗೆ ಆಹಾರ ತಲುಪಿಸುವುದಾಗಿದೆ" ಎಂದರು

ಸುರಕ್ಷತಾ ಕ್ರಮಗಳ ಆಧಾರಿತ ಸೇವೆ
''ಸ್ಯಾನಿಟೈಸೇಷನ್, ಸಾಮಾಜಿಕ ಅಂತರ, ಸ್ಕ್ರೀನಿಂಗ್ ಮತ್ತು ಸಂಪರ್ಕರಹಿತ ಸೇವೆಯಂತ ಸುರಕ್ಷತಾ ಕ್ರಮಗಳ ಆಧಾರಿತ ಸೇವೆ ಇದಾಗಿದೆ. ಕೆಎಫ್‍ಸಿ ಆ್ಯಪ್ ಬಳಕೆ ಮತ್ತು ಡಿಜಿಟಲ್ ಪೇಮೆಂಟ್‍ಗಳ ಮೂಲಕ ಈ ಸೇವೆಯನ್ನು ಸುಲಭವಾಗಿ, ತ್ವರಿತವಾಗಿ ಮತ್ತು ಸಂಪೂರ್ಣ ಸಂಪರ್ಕರಹಿತವಾಗಿ ಮಾಡಬಹುದು. ಗ್ರಾಹಕರ ಪ್ರತಿಕ್ರಿಯೆ ಮತ್ತು ಲಭ್ಯತೆಯನ್ನು ಗಮನಿಸಿ ಈ ಸೇವೆಯನ್ನು ಇತರೆ ನಗರಗಳಿಗೂ ವಿಸ್ತರಣೆ ಮಾಡಲಿದ್ದೇವೆ'' ಎಂದು ಮೋಕ್ಷ್ ಚೋಪ್ರಾ ತಿಳಿಸಿದರು.

ಬೈಕ್‍ಗೆ ಕೆಎಫ್‍ಸಿಯನ್ನು ಪಡೆಯುವುದು ಹೇಗೆ?
ಹಾಗಾದರೆ ನಿಮ್ಮ ಕಾರು ಅಥವಾ ಬೈಕ್‍ಗೆ ಕೆಎಫ್‍ಸಿಯನ್ನು ಪಡೆಯುವುದು ಹೇಗೆ? ಇದು ಅತ್ಯಂತ ಸುಲಭ. ನೀವು ಕೆಎಫ್‍ಸಿ ಆಪ್, ವೆಬ್‍ಸೈಟ್ ಅಥವಾ ಎಂಸೈಟ್‍ನಲ್ಲಿ ಟೇಕ್‍ಅವೇ ಮತ್ತು ''ಕೆಎಫ್‍ಸಿ ಟು ಯುವರ್ ಕಾರ್/ಬೈಕ್'' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ನಿಮಗೆ ಸೂಕ್ತವಾದ ಡೆಲಿವರಿ ಸಮಯ, ವಾಹನದ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ನಮೂದಿಸಬೇಕು. ಆರ್ಡರ್ ಖಾತರಿಯಾದ ನಂತರ ರೆಸ್ಟೋರೆಂಟ್ ಮ್ಯಾನೇಜರ್ ರಿಂದ ನಿಮಗೆ ಕರೆ ಬರುತ್ತದೆ ಮತ್ತು ಅವರು ರೆಸ್ಟೋರೆಂಟ್‍ನ ವಿಳಾಸ, ಪಿಕಪ್ ಮತ್ತು ಸ್ಥಳದ ಮಾಹಿತಿಯನ್ನು ತಿಳಿಸುತ್ತಾರೆ.

ಆರ್ಡರ್ ಸಿದ್ಧವಾದ ತಕ್ಷಣ ಕರೆ
ನಿಮ್ಮ ಆರ್ಡರ್ ಸಿದ್ಧವಾದ ತಕ್ಷಣ ಮತ್ತೊಮ್ಮೆ ಕರೆ ಮಾಡುವ ಮ್ಯಾನೇಜರ್ ಮಾಹಿತಿ ನೀಡಲಿದ್ದಾರೆ. ನೀವು ನಿಗದಿತ ಸ್ಥಳಕ್ಕೆ ಹೋದಾಗ ರೆಸ್ಟೋರೆಂಟ್ ಸಿಬ್ಬಂದಿ ನೀವು ಆರ್ಡರ್ ಮಾಡಿದ ಆಹಾರ ಉತ್ಪನ್ನವನ್ನು ನೀವಿದ್ದಲ್ಲಿಗೆ ಬಂದು ನೀಡಲಿದ್ದಾರೆ.
ಕೆಎಫ್‍ಸಿ ಟು ಯುವರ್ ಕಾರ್/ಬೈಕ್ ಸೇವೆ ಬೆಂಗಳೂರು ಮತ್ತು ದೆಹಲಿಯ ಆಯ್ದ ರೆಸ್ಟೋರೆಂಟ್‍ಗಳಲ್ಲಿ ಲಭ್ಯವಿದೆ. ಇನ್ನುಳಿದಂತೆ ದೇಶದ ವಿವಿಧ ನಗರಗಳ ರೆಸ್ಟೋರೆಂಟ್‍ಗಳಲ್ಲಿ ಕಾಂಟ್ಯಾಕ್ಟ್‍ಲೆಸ್ ಟೇಕ್‍ಅವೇ ಸೇವೆ ಲಭ್ಯವಿದೆ. ಗ್ರಾಹಕರು ಕೆಎಫ್ ಸಿ ವೆಬ್ ತಾಣ ಅಥವಾ ಕೆಎಫ್‍ಸಿ ಆ್ಯಪ್‍ನೊಂದಿಗೆ ಕೆಎಫ್‍ಸಿಯ ತಮ್ಮ ನೆಚ್ಚಿನ ಆಹಾರಗಳನ್ನು ಪಡೆದುಕೊಳ್ಳಬಹುದಾಗಿದೆ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
ಆಂಧ್ರಪ್ರದೇಶದಲ್ಲಿ ಕಲಬೆರಕೆ ಹಾಲು ಸೇವಿಸಿ 16 ಮಂದಿ ಸಾವು: ಹಲವು ರಾಜ್ಯಗಳಲ್ಲಿ ಅಧಿಕಾರಿಗಳಿಂದ ದಾಳಿ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications