2020ರೊಳಗೆ 12 ಲಕ್ಷ ಉದ್ಯೋಗ ಸೃಷ್ಟಿ : ಸಿಎಂ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಡಿ. 08: ಕರ್ನಾಟಕದ ಉತ್ಕೃಷ್ಟ ಐಟಿ ಸಮಾವೇಶ ಬೆಂಗಳೂರು ಐಟಿಇ ಡಾಟ್ ಬಜ್ ನ 18ನೇ ಆವೃತಿಗೆ ನಗರದ ಲಲಿತ್ ಅಶೋಕ್ ಹೊಟೆಲ್‍ನಲ್ಲಿ ಚಾಲನೆ ದೊರೆತಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕರ್ನಾಟಕದಲ್ಲಿ 20 ಸಾವಿರ ಸ್ಟಾರ್ಟ್ ಅಪ್ ಗಳಿಗೆ ಉತ್ತೇಜನ ನೀಡಿ 6 ಲಕ್ಷ ನೇರ ಹಾಗೂ 12 ಲಕ್ಷಕ್ಕೂ ಅಧಿಕ ಪರೋಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಘೋಷಿಸಿದರು.

ಕರ್ನಾಟಕ ಸರ್ಕಾರದಿಂದ ಐಟಿ, ಬಿಟಿ ಮತ್ತು ಎಸ್‍ಆಂಡ್‍ಟಿ ಆಯೋಜಿತ ಕಾರ್ಯಕ್ರಮ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ(ಎಸ್ ಟಿಪಿಐ) ಬೆಂಗಳೂರು ಸಹಯೋಗದಲ್ಲಿ ಡಿ.8ರಿಂದ 10ರವರೆಗೆ ನಡೆಯಲಿದೆ.

ಭಾರತದಲ್ಲಿ ಐಸಿಇಟಿ ವಲಯ ಉತ್ಕೃಷ್ಟ ಉತ್ಪನ್ನ ಮತ್ತು ಸೇವೆಯೊಂದಿಗೆ ಮುನ್ನಡೆಯುತ್ತಿದೆ. ಅನನ್ಯ ಸಂಶೋಧನೆಯತ್ತ ದೃಷ್ಟಿ ಹಾಯಿಸಿದ್ದು, ಈಗಿನ ಹೊಸ ನೀತಿ ಮತ್ತು ಕೇಂದ್ರ ಸರ್ಕಾರದ ಮೇಕಿನ್ ಇಂಡಿಯಾ ಕನಸುಗಳು ಸೇರಿದಂತೆ ಮುಂದಿನ ದಿನಗಳಲ್ಲಿ ಭಾರತ ಜಾಗತಿಕ ನಾಯಕನಾಗುವ ಕನಸಿಗೆ ಈ ಸಮಾವೇಶ ಇನ್ನಷ್ಟು ಬಲ ನೀಡಲಿದೆ. [ಇನ್ಫೋಸಿಸ್ ನಿಂದ 20 ಸಾವಿರ ನೇಮಕಾತಿ ಘೋಷಣೆ!]

ಭಾರತದ ಸಂಶೋಧನೆ ರಾಜಧಾನಿ ಬೆಂಗಳೂರು ಆತಿಥ್ಯ ವಹಿಸುವ ಈ ಕಾರ್ಯಕ್ರಮ, ಈ ವರ್ಷ ಅನನ್ಯ ಸಂಶೋಧನೆಯೊಂದಿಗೆ ಬೆಳವಣಿಗೆ ವರ್ಧನೆ' ಎಂಬ ಧ್ಯೇಯದೊಂದಿಗೆ ನಡೆಯುತ್ತಿದೆ.

Karnataka to incubate 20,000 start-ups: Siddaramaiah

ಐಟಿ ಬಲವರ್ಧನೆಗೆ ರಾಜ್ಯ ಹೊಸ ನೀತಿಗಳನ್ನು ರೂಪಿಸಿರುವುದು, ಎಲೆಕ್ಟ್ರಾನಿಕ್ ವಿನ್ಯಾಸ ಮತ್ತು ಉತ್ಪಾದನೆ, ಮುಂದಿನ ಬೆಳವಣಿಗೆ ಹಾದಿ ಮೊದಲಾದ ವಿಚಾರಗಳೊಂದಿಗೆ ಕಾರ್ಯಕ್ರಮ ಐಸಿಟಿ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಪ್ರಮುಖರನ್ನು ಆಕರ್ಷಿಸಲಿದೆ.

ನಾಸ್ಕಾಂ, ಮೈಟ್, ಐಇಎಸ್‍ಎ, ಎಬಿಎಐ ಸೇರಿದಂತೆ 100ಕ್ಕು ಅಧಿಕ ಡೊಮೈನ್ ತಜ್ಞರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಒಕ್ಕೂಟಗಳಿಂದ 1000ಕ್ಕು ಅಧಿಕ ಗಣ್ಯರಿಗೆ ಬೆಂಗಳೂರು ಐಟಿಇ.ಬಿಜ್ ಒಂದು ವಿಶಿಷ್ಟ ವೇದಿಕೆ. [ಉದ್ಯೋಗಿಗಳನ್ನು 3 ಪಟ್ಟು ಹೆಚ್ಚು ಮಾಡಿಕೊಳ್ಳಲಿರುವ ಬೆಂಗಳೂರು ಕಂಪನಿ]

IT Biz

3 ದಿನಗಳ ಅವಧಿಯ ಕಾರ್ಯಕ್ರಮ : ಅಂತಾರಾಷ್ಟ್ರೀಯ ಸಂವಾದ, ಮಾರಾಟ ಪ್ರದರ್ಶನ, ಪ್ರಮುಖ ಭಾಷಣಗಳು, ಸಿಇಒ ಸಮಾವೇಶ, ಕಾರ್ಯದರ್ಶಿಗಳ ಸಮಾವೇಶ, ಐಟಿ ಪ್ರಶಸ್ತಿ ಮತ್ತಿತರ ಚಟುವಟಿಕೆಗಳನ್ನು ಹೊಂದಿರುತ್ತದೆ. ಅಂತಾರಾಷ್ಟ್ರೀಯ ಸಂವಾದದಲ್ಲಿ ಹಲವು ಪ್ರಮುಖ ತಂತ್ರಜ್ಞಾನ ಪರಿಣತರು, ನೀತಿ ರೂಪಕರು, ಗಣ್ಯರು ಭಾಗವಹಿಸುತ್ತಾರೆ.

ಸ್ಟಾರ್ಟ್-ಅಪ್ ಗಳತ್ತ ದೃಷ್ಟಿ: ಈ ಕಾರ್ಯಕ್ರಮ ಮುಖ್ಯವಾಗಿ ಸ್ಟಾರ್ಟ್-ಅಪ್ ಗಳತ್ತ ದೃಷ್ಟಿ ಹಾಯಿಸಿದೆ. ಕಾರ್ಯಕ್ರಮದ ಅರ್ಧಭಾಗದ ಚರ್ಚೆ, ಗುಂಪುಚರ್ಚೆ, ಸಂವಾದಗಳು ಈ ವಿಷಯದತ್ತ ದೃಷ್ಟಿ ಹಾಯಿಸಿರುತ್ತವೆ. ಪ್ರದರ್ಶನದಲ್ಲಿ 45 ಸ್ಟಾರ್ಟಪ್ಸ್‍ಗಳಿದ್ದು ನಾಸ್ಕಾಂ 15ಕ್ಕು ಅಧಿಕ ಸ್ಟಾರ್ಟ್-ಅಪ್ ಗಳು ಹಾಗೂ ಎಸ್ ಟಿಪಿಐನ 20ಕ್ಕು ಅಧಿಕ ಸ್ಟಾರ್ಟ್-ಅಪ್ ಗಳಿವೆ.

ಸಮಾವೇಶದ ಇನ್ನೊಂದು ಭಾಗ ಸ್ಮಾರ್ಟ್ ಸಿಟಿ ಪರಿಹಾರಗಳತ್ತ ದೃಷ್ಟಿ ಹಾಯಿಸಲಿದೆ. ಇ-ಗವರ್ನೆನ್ಸ್, ಜಿಯೊಸ್ಪೇಷಿಯಲ್ ಸಲ್ಯೂಷನ್ ಮೊದಲಾದ ವಿಚಾರಗಳತ್ತ ಗಮನ ಹರಿಸಲಿದೆ.

ಇದೇ ಮೊದಲ ಸಲ ಎಂಬಂತೆ ನಾಯಕತ್ವ ಸಮಾವೇಶ ಮೊದಲ ದಿನವೇ ನಡೆದಿದ್ದು ಭಾರತದ ನಾನಾ ರಾಜ್ಯಗಳ ನಾಯಕರು ಉದ್ಯಮ ಸಂಬಂಧಿ ನೀತಿ, ಕಾನೂನುಗಳ ಕುರಿತು ಚರ್ಚೆ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The tech-savy state of Karnataka will incubate about 20,000 start-ups by 2020 to create six lakh direct and 12 lakh indirect jobs, Chief Minister Siddaramaiah said on Tuesday(Dec.08)
Please Wait while comments are loading...