ಅನ್ ಲಾಕ್ 1.0 ತನಕ ಮದ್ಯ ಮಾರಾಟದಿಂದ ಗಳಿಸಿದ್ದೆಷ್ಟು?
ಬೆಂಗಳೂರು, ಜೂನ್ 2: ಮೂರನೇ ಅವಧಿಯ ಲಾಕ್ಡೌನ್ ನಡುವೆಯೂ ಷರತ್ತುಗಳ ನಡುವೆ ಮೇ.04ರಿಂದ ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರವು ಸಂಪೂರ್ಣ ಅನುಮತಿ ನೀಡಿದ್ದು ನೆನಪಿರಬಹುದು. ಆಲ್ಲಿಂದ ಆನ್ ಲಾಕ್ 1.0 ತನಕ ಎಂಎಸ್ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಲಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಗಳಿಕೆಯೂ ಆಗುತ್ತಿದೆ.
Recommended Video
ಲಾಕ್ ಡೌನ್ ಮುನ್ನ ರಾಜ್ಯದಲ್ಲಿ ಸರಾಸರಿ 90 ರಿಂದ 95 ಕೋಟಿ ರೂಪಾಯಿ ಮದ್ಯ ಮಾರಾಟವಾಗುತ್ತಿತ್ತು. ಮೇ ತಿಂಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕ ಮೊದಲ ದಿನದಂದು ಸುಮಾರು 45 ಕೋಟಿ ರು ಮೌಲ್ಯದ ಗಳಿಕೆಯಾಗಿತ್ತು. ಮೂರನೇ ದಿನಕ್ಕೆ ಸುಮಾರು 231.60 ಕೋಟಿ ರು ನಷ್ಟು ಮದ್ಯ ಮಾರಾಟವಾಗಿತ್ತು. ಒಟ್ಟಾರೆ ಮೇ 5 ರಿಂದ ಜೂನ್ 1 ರ ತನಕದ ಲೆಕ್ಕಾಚಾರದಂತೆ ಅಬಕಾರಿ ಇಲಾಖೆಗೆ 1387.20 ಕೋಟಿ ರು ಆದಾಯ ಬಂದಿದೆ ಎಂದು ವಾರ್ತಾ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.
2020-21ರ ಪ್ರಸಕ್ತ ಸಾಲಿನಲ್ಲಿ ಅಬಕಾರಿ ಇಲಾಖೆಯು ಬರೋಬ್ಬರಿ 26,440 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಲಾಕ್ಡೌನ್ ಅವಧಿಯಲ್ಲೂ ಮದ್ಯ ಮಾರಾಟ ಭರ್ಜರಿಯಾಗಿದ್ದು ಒಟ್ಟಾರೆ, 2146.84 ಕೋಟಿ ರು ಮೌಲ್ಯದ ಮದ್ಯ ಮಾರಾಟವಾಗಿದೆ.

ಬಾರ್ ಅಂಡ್ ರೆಸ್ಟೋರೆಂಟ್ ಸದ್ಯ ಓಪನ್
ಈ ನಡುವೆ ಬಾರ್ ಅಂಡ್ ರೆಸ್ಟೋರೆಂಟ್ ಸದ್ಯ ಓಪನ್ ಮಾಡುವ ಚಿಂತನೆ ಇಲ್ಲ, ಜೂನ್ 8 ರ ತನಕ ನಿರ್ಬಂಧ ಜಾರಿಯಲ್ಲಿರಲಿದೆ. ಈ ಬಗ್ಗೆ ನಂತರ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ. ಇನ್ನು ಬಜೆಟ್ ನಲ್ಲಿ ಹೇಳಿದಂತೆ ಶೇ 6 ರಷ್ಟು ಹಾಗೂ ಈಗ ಶೇ 11ರಷ್ಟು ಸೇರಿಸಿ ಶೇ 17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ. ಮದ್ಯ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಈ ಬಾರಿಗೆ ಹೊಸ ತೆರಿಗೆ ಸೇರಿದ್ದರಿಂದ ಹೆಚ್ಚು ರಾಜಧನ ಸರ್ಕಾರಕ್ಕೆ ಬರಲಿದೆ ಎಂದರು.

ಸಾಮಾಜಿಕ ಅಂತರ ಮಾರ್ಗಸೂಚಿ ಜಾರಿಯಲ್ಲಿರಲಿದೆ
ಒಂದು ಬಾರಿಗೆ ಕೇವಲ 5 ಜನ ಗ್ರಾಹಕರು ಮಾತ್ರ ಅಂಗಡಿ ಪ್ರವೇಶಿಸಲು ಅನುಮತಿ ನೀಡಿದ್ದು, 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ - ಮದ್ಯ ಮಾರಾಟ ಮಾಡುವ ಸನ್ನದಿನಲ್ಲಿನ ನೌಕರರು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯ. ಸ್ಯಾನಿಟೈಸರ್ ಗಳನ್ನು ಬಳಸುವುದು ಕಡ್ಡಾಯ. - ಕೇವಲ ಸ್ಟಾಂಡ್ ಅಲೋನ್ ಸಿಎಂಲ್-2 ಹಾಗೂ ಸಿಎಲ್ 11-ಸಿ ಸನ್ನದುಗಳನ್ನು ಮಾತ್ರ ಕಾರ್ಯನಿರ್ವಹಿಸುವುದು. ಮಾಲ್ ಗಳು ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಸದರಿ ಸನ್ನದುಗಳು ಇದ್ದಲ್ಲಿ ಈ ಅನುಮತಿ ಅನ್ವಯವಾಗುವುದಿಲ್ಲ

ಮೇ 5ರಿಂದ ಶುರುವಾರ ಗಳಿಕೆ ಏರಿಕೆ
ಮೇ ತಿಂಗಳ ಮೊದಲ ವಾರದಲ್ಲಿ ಒಂದೇ ದಿನದಲ್ಲಿ ಒಟ್ಟು 3.9 ಲಕ್ಷ ಲೀಟರ್ ಬಿಯರ್, 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿತ್ತು. ಮಾರಾಟವಾಗಿರುವ ಒಟ್ಟು 12.4 ಲಕ್ಷ ಲೀಟರ್ ಮದ್ಯದ ಮೌಲ್ಯ 45 ಕೋಟಿ ರೂಪಾಯಿಯಾಗಿದೆ. ಎರಡನೇ ದಿನ ಮಂಗಳವಾರ ಒಂದೇ ದಿನ ಭಾರತದಲ್ಲಿ ತಯಾರಿಸಿದ 4.21 ಲಕ್ಷ ಬಾಕ್ಸ್ ಕೇಸ್ ಮದ್ಯವು ಮಾರಾಟವಾಗಿತ್ತು. 36.37 ಲಕ್ಷ ಲೀಟರ್ ಭಾರತೀಯ ಮದ್ಯವು ಸೇಲ್ ಆಗಿದ್ದು, ಇದರ ಮೊತ್ತ ಬರೋಬ್ಬರಿ 182 ಕೋಟಿ ರೂಪಾಯಿ ಆಗಿತ್ತು. ಅಲ್ಲದೇ 7.02 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದು, ಅದರ ಮೌಲ್ಯ 15 ಕೋಟಿ ಎಂದು ಅಬಕಾರಿ ಇಲಾಖೆ ಆಯುಕ್ತರು ಮಾಹಿತಿ ನೀಡಿದ್ದರು.

ಪ್ರವಾಸೋದ್ಯಮ ಹಾಗೂ ಅಬಕಾರಿ ಇಲಾಖೆಗೆ ನೆರವು
ರಾಜ್ಯದಲ್ಲಿ ಎಂಎಸ್ಐಎಲ್, ಸಿಎಲ್-2 ಹಾಗೂ ಸಿಎಲ್-11 ಪರವಾನಗಿ ಹೊಂದಿರುವ ಮದ್ಯದ ಅಂಗಡಿಗಳಿಗೆ ಮಾತ್ರ ಮದ್ಯ ಮಾರಾಟ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಸಾಕಷ್ಟು ವಿನಾಯತಿಯೊಂದಿಗೆ 5ನೇ ಅವಧಿಯ ಲಾಕ್ಡೌನ್ ಸದ್ಯ ಜಾರಿಯಲ್ಲಿದ್ದು, ಜೂನ್ 8 ರ ನಂತರ ಇನ್ನಷ್ಟು ವಿನಾಯತಿ ಸಿಗಲಿದೆ. ಹೋಟೆಲ್, ರೆಸ್ಟೋರೆಂಟ್, ಬಾರ್, ಮದ್ಯ ಪೂರೈಕೆ ಅನುಮತಿ ಪಡೆದಿರುವ ಪ್ರವಾಸಿ ಮಂದಿರ, ರೆಸಾರ್ಟ್ ಗಳಲ್ಲಿ ಮದ್ಯ ಪೂರೈಕೆಗೆ ಅವಕಾಶ ನೀಡುವಂತೆ ಮನವಿ ಬಂದಿದೆ. ಇದರಿಂದ ಪ್ರವಾಸೋದ್ಯಮ ಹಾಗೂ ಅಬಕಾರಿ ಇಲಾಖೆ ಎರಡಕ್ಕೂ ಲಾಭವಾಗಲಿದೆ ಎಂದು ಹೇಳಲಾಗಿದೆ. ಆದರೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ, ಆರೋಗ್ಯ ಸೇತು, ಆಪ್ತಮಿತ್ರ ಆಪ್ ಕಡ್ಡಾಯ ಬಳಕೆ ಸೇರಿದಂತೆ ವಿವಿಧ ಮಾರ್ಗಸೂಚಿ ಅಳವಡಿಕೆ ಕಸರತ್ತಿನಲ್ಲಿ ಸರ್ಕಾರ ತೊಡಗಿದೆ.
-
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral












Click it and Unblock the Notifications